Breaking News

ಅತ್ಯಾಚಾರದ ಆರೋಪಿಗಳು ಹೊರರಾಜ್ಯದವರೆಂಬ ಶಂಕೆ; ತ.ನಾಡು, ಕೇರಳದತ್ತ ಹೊರಟ ಪೊಲೀಸ್?

Spread the love

ಮೈಸೂರು: ಮೈಸೂರು ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಆರೋಪಿಗಳ ಸುಳಿವು ಪತ್ತೆಯಾಗಿದೆ ಎನ್ನಲಾಗಿದೆ.

ಘಟನೆ ನಡೆದ ಸ್ಥಳದಲ್ಲಿ ದೊರೆತ ಬಿಯರ್ ಬಾಟಲ್​ಗಳು ಮೈಸೂರಿನಲ್ಲಿ ಖರೀದಿಯಾಗಿಲ್ಲ.. ಇನ್ನು ಆರೋಪಿಗಳು ತಮಿಳು ಮಲಯಾಳಂ ಮಾತನಾಡುತ್ತಿದ್ರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಾಲೇಜು ವಿದ್ಯಾರ್ಥಿಗಳ ಬೆನ್ನು ಹತ್ತಿದ್ದು ಅತ್ಯಾಚಾರ ಮಾಡಿದವರು ಎಂಜಿನಿಯರ್ ವಿದ್ಯಾರ್ಥಿಗಳಾ ಎಂಬ ಶಂಕೆ ಪೊಲೀಸರಿಗೆ ವ್ಯಕ್ತವಾಗಿದೆ ಎನ್ನಲಾಗಿದೆ.

ಮೈಸೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ತಮಿಳುನಾಡು ಮೂಲದ ಓರ್ವ ಹಾಗೂ ಕೇರಳ ಮೂಲದ ಮೂವರ ಮೇಲೆ ವಿದ್ಯಾರ್ಥಿಗಳ ಮೇಲೆ ಪೊಲೀಸರಿಗೆ ಅನುಮಾನ ಮೂಡಿದ್ದು ಘಟನೆ ನಡೆದ ಮಾರನೇ ದಿನವೂ ಆರೋಪಿಗಳು ಮೈಸೂರಿನಲ್ಲೇ ಇದ್ದರು ಎನ್ನಲಾಗಿದೆ. ರೇಪ್ ಸುದ್ದಿ ಹಬ್ಬುತ್ತಿದ್ದಂತೆ ಮೈಸೂರಿನಿಂದ ಎಸ್ಕೇಪ್ ಆಗಿರೋ ಸ್ಟುಡೆಂಟ್ಸ್​.. ತಮಿಳುನಾಡು, ಕೇರಳದಲ್ಲಿ ಅಡಗಿರುವ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ.

ಮೈಸೂರಿನಿಂದ ಕೇರಳಕ್ಕೆ ತೆರಳಿರುವ ಪೊಲೀಸರ 2 ತಂಡಗಳು ಗ್ಯಾಂಗ್​ರೇಪ್ ಆರೋಪಿಗಳ ಬೆನ್ನುಬಿದ್ದಿದ್ದಾರೆ ಎನ್ನಲಾಗಿದೆ. ಅಲ್ಲದೇ ಖಚಿತ ಮಾಹಿತಿ ಆಧರಿಸಿ ಕೇರಳದತ್ತ ಹೊರಟ ಮತ್ತೊಂದು ಪೊಲೀಸ್ ಟೀಂ ಹೊರಟಿದೆ ಎನ್ನಲಾಗಿದೆ.


Spread the love

About Laxminews 24x7

Check Also

ಯಡೂರ ಶ್ರೀವೀರಭದ್ರೇಶ್ವರ ವಿಶಾಳಿ ಜಾತ್ರಾಮಹೋತ್ಸವ ಹಿನ್ನಲೆಯಲ್ಲಿ ಹರಿದು ಬಂದ ಭಕ್ತಸಾಗರ

Spread the love ಯಡೂರ ಶ್ರೀವೀರಭದ್ರೇಶ್ವರ ವಿಶಾಳಿ ಜಾತ್ರಾಮಹೋತ್ಸವ ಹಿನ್ನಲೆಯಲ್ಲಿ ಹರಿದು ಬಂದ ಭಕ್ತಸಾಗರ ಚಿಕ್ಕೋಡಿ:ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ