ಬೆಂಗಳೂರು: ಹುಚ್ಚನೊಬ್ಬ ತಾನು ಪ್ರಚಾರದಲ್ಲಿರೋಕೆ ಏನು ಬೇಕಾದ್ರೂ ಮಾಡ್ತಾನೆ. ಏನಾದ್ರೂ ಮಾತಾಡ್ತಾನೆ. ಆತ ಒಬ್ಬ ಹುಚ್ಚ ಅಷ್ಟೇ. ಕೋವಿಡ್ ಕಾಲದಲ್ಲಿನ ಸರ್ಕಾರದ ವೈಫಲ್ಯ ಹಾಗೂ ಬೆಲೆ ಏರಿಕೆಯಂತಹ ಸಮಸ್ಯೆಗಳನ್ನು ಮರೆಮಾಚಲು ಇಂತದ್ದೆಲ್ಲ ಮಾತಾಡ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪರೋಕ್ಷವಾಗಿ ಯತ್ನಾಳ್ ಗೆಟಾಂಗ್ ಕೊಟ್ಟಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಅಘ್ಘಾನ್ ವಿಧ್ಯಾರ್ಥಿಗಳು ನನ್ನ ಭೇಟಿಗೆ ಬಂದಿದ್ದರು. ಅವರು ಮಾನಸಿಕವಾಗಿ ಕುಗ್ಗಿದ್ದಾರೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ನಮ್ಮ ರಾಜ್ಯದಲ್ಲಿ ಎಲ್ಲ ತರಹದ ರಕ್ಷಣೆ ಕೊಡಬೇಕಾಗುತ್ತದೆ ಎಂದಿದ್ದೇನೆ. ರಾಜ್ಯದಲ್ಲಿ ವಿದೇಶಿ ವಿದ್ಯಾರ್ಥಿಗಳು ಓದುತ್ತಾರೆ. ಮಕ್ಕಳು ಎಲ್ಲರೂ ನಮ್ಮ ಮಕ್ಕಳೇ. ಧರ್ಮ ಯಾವುದೇ ಆದರೂ ನಮ್ಮ ಮಕ್ಕಳು ಅವರು. ಇಂತಹ ಸಂದರ್ಭದಲ್ಲಿ ಮಾನವೀಯತೆ ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
Laxmi News 24×7