Breaking News

ಫೇಸ್​ಬುಕ್​ನಲ್ಲಿ ಪರಿಚಯವಾದ ಮಹಿಳೆಯಿಂದ ವಿಡಿಯೋ ಕಾಲ್‌ನಲ್ಲಿ ಅಸಭ್ಯ ವರ್ತನೆ, ಹಣಕ್ಕಾಗಿ ಬೆದರಿಕೆ: ಬಿಜೆಪಿ ಮುಖಂಡನಿಂದ ದೂರು

Spread the love

ಬೆಂಗಳೂರು: ಬಿಜೆಪಿ ಮುಖಂಡ, ಡಾ.ಅಂಬೇಡ್ಕರ್ ಫೌಂಡೇಷನ್‌ ನಿರ್ದೇಶಕ ಚಿ.ನಾ.ರಾಮು ತಮಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಒಡ್ಡಲಾಗಿದೆ ಎಂದು ದೂರು ದಾಖಲಿಸಿದ್ದಾರೆ. ಅಪರಿಚಿತ ವ್ಯಕ್ತಿ ಫೋನ್‌ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಫೇಸ್‌ಬುಕ್‌ ಮೆಸೆಂಜರ್‌ ಮೂಲಕ ಪರಿಚಯವಾಗಿದ್ದ ಮಹಿಳೆ ಮೊಬೈಲ್ ನಂಬರ್ ಪಡೆದು ವಿಡಿಯೋ ಕಾಲ್ ಮಾಡಿದ್ದಳು. ವಿಡಿಯೋ ಕಾಲ್‌ನಲ್ಲಿ ಅಸಭ್ಯವಾಗಿ ವರ್ತಿಸಿದ್ದಳು. ಬಳಿಕ ಅಪರಿಚಿತ ವ್ಯಕ್ತಿ ಕರೆ ಮಾಡಿ ಹಣ ನೀಡುವಂತೆ ಬೆದರಿಕೆ ಒಡ್ಡುತ್ತಿದ್ದಾನೆ. ‘ಯುವತಿಯೊಂದಿಗೆ ನಗ್ನವಾಗಿರುವ ವಿಡಿಯೋ ನನ್ನ ಬಳಿ ಇದೆ. ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ’ ಎಂದು ಬೆಂಗಳೂರು ಸೆಂಟ್ರಲ್ ಸಿಇಎನ್ ಠಾಣೆಗೆ ಬಿಜೆಪಿ ಮುಖಂಡ ಚಿ.ನಾ.ರಾಮು ದೂರು ದಾಖಲಿಸಿದ್ದಾರೆ.

ಬೆದರಿಕೆ ಹೆದರಿ ಬಿಜೆಪಿ ಮುಖಂಡ ಚಿ.ನಾ.ರಾಮು ಅಪರಿಚಿತನ ಖಾತೆಗೆ ಈಗಾಗಲೇ 31,500 ಹಣವನ್ನು ಹಾಕಿದ್ದಾರೆ. ಚಿ.ನಾ.ರಾಮು ನೀಡಿರುವ ದೂರು ಆಧರಿಸಿ ಎಫ್‌ಐಆರ್ ದಾಖಲಾಗಿದೆ. ಬಿಜೆಪಿ ಮುಖಂಡ ಚಿ.ನಾ.ರಾಮು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಅಡಿಯ ಅಂಬೇಡ್ಕರ್ ಪೌಂಡೇಶನ್ ನಿರ್ದೇಶಕರಾಗಿದ್ದಾರೆ.


Spread the love

About Laxminews 24x7

Check Also

ಸಚಿವ ತಿಮ್ಮಾಪುರ ವಜಾ ಮಾಡದಿದ್ದರೆ ಸಿಎಂಗೆ 85% ಕಮಿಷನ್ ಹೋಗಿದೆ ಎಂದರ್ಥ: ಆರ್. ಅಶೋಕ್

Spread the loveಬೆಂಗಳೂರು: ಸಿದ್ದರಾಮಯ್ಯನವರ ನಿದ್ದೆ ಸರ್ಕಾರ ಇದು. ಭ್ರಷ್ಟಾಚಾರದ ಹೊಳೆಯಲ್ಲಿ ಮಿಂದು ಮೇಯುತ್ತಿದೆ. ಅಬಕಾರಿ ಸಚಿವ ತಿಮ್ಮಾಪುರ ಅವರನ್ನು ವಜಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ