ಮಂಡ್ಯ : ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ದಂಪತಿಯ ಜಗಳ ಸಾವಿನಲ್ಲಿ ಅಂತ್ಯವಾಗಿದೆ.. ಅಂಜು (19) ಆದಿತ್ಯ (21) ಇಬ್ಬರು ಮನಯವರ ವಿರೋಒಧದ ನಡುವೆ ಪ್ರೀತಿಸಿ ಮದುವೆಯಾಗಿದ್ರು. ಇಬ್ಬರಿಗೂ ಇದೀಗ 14 ತಿಂಗಳ ಮುದ್ದಾದ ಮಗುವಿದೆ.. ಮದುವೆಯ ಹೊಸದರಲ್ಲಿ ಚೆನ್ನಾಗಿದ್ದ ದಾಂಪತ್ಯ ನಂತರ ಪತ್ನಿ ಬಳಿ ಹಣ ತರುವಂತೆ ಆದಿತ್ಯ ಪೀಡಿಸುತ್ತಿದ್ದನಂತೆ.. ನಿನ್ನೆ ಮಧ್ಯಾಹ್ನ ಅಂಜು ಆದಿತ್ಯನೊಂದಿಗೆ ಜಗಳವಾಡಿಕೊಂಡಿದ್ರು. ಜಗಳವಾಡಿದ ನಂತರ ಆದಿತ್ಯ ಮಗುವಿಗೆ ಹಾಲು ಹಾಗೂ ದಿನಸಿ ವಸ್ತುಗಳನ್ನು ತರಲು ಹೊರ ಹೋಗಿದ್ದಾಗ ಅಂಜು ಮನೆಯಲ್ಲಿಯೇ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ನಾಗಮಂಗಲ ಡಿವೈಎಸ್ ಪಿ ಕೆ.ಬಿ.ವಿಶ್ವನಾಥ, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಮತ್ತು ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಸ್ಥಳಕ್ಕೆ ಭೇಟಿ ನೀಡಿ ಆದಿತ್ಯನನ್ನು ಬಂಧಿಸಿ ಅಂಜು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಇಂದು ಮೃತರ ವಾರಸುದಾರರಿಗೆ ಒಪ್ಪಿಸಿದ್ದಾರೆ.
Laxmi News 24×7