Breaking News

ಮಿನಿ ರಣ ರಂಗ ವಾಗಲಿದೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ

Spread the love

ಬೆಳಗಾವಿ-ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ಎದುರಿಸಲು ಹಿಂದೇಟು ಹಾಕುವ ಲಕ್ಷಣಗಳು ಕಾಣಿಸುತ್ತಿದ್ದು ಜಾತ್ಯಾತೀತ ಸಿದ್ಧಾಂತ ಎಂದು ಹೇಳಿಕೊಳ್ಳುವ ಆಮ್ ಆದ್ಮೀ‌..ದೆಹಲಿ ಬದಲಾ ಹೈ ಬೆಲಗಾಮ್ ಬದಲೇಗಾ ಎನ್ನುವ ಘೋಷಣೆಯೊಂದಿಗೆ ಪಾಲಿಕೆ ಚುನಾವಣೆಯಲ್ಲಿ ಎಂಟ್ರಿ ಹೊಡೆದಿದೆ.

ಜೊತೆಗೆ ಅಕ್ಬರ್ ಓವೈಸಿಯ ಎಂಐಎಂ ಪಾರ್ಟಿಯೂ ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ 58 ವಾರ್ಡುಗಳಲ್ಲಿ ಸ್ಪರ್ದಿಸುವ ನಿರ್ಧಾರ ಕೈಗೊಂಡಿದೆ. ಎಂಐಎಂ,ಆಮ್ ಆದ್ಮಿ ಪಾರ್ಟಿಯ ಬೆನ್ನಲ್ಲಿಯೇ ಜೆಡಿಎಸ್ ಪಕ್ಷವೂ ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಧುಮುಕುವ ನಿರ್ಧಾರವನ್ನು ಪ್ರಕಟಿಸಿದ್ದು,ಬೆಳಗಾವಿಯಲ್ಲಿ ಕಾಂಗ್ರೆಸ್ ವೋಟ್ ಬ್ಯಾಂಕ್ ಧೂಳಿಪಟ ಆಗುವ ಸಾಧ್ಯತೆಗಳು ಹೆಚ್ಚಾಗಿವೆ‌.ಕಾಂಗ್ರೆಸ್ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ಎದುರಿಸದೇ ಇದ್ದರೆ,ಕಾಂಗ್ರೆಸ್ ವೋಟ್ ಬ್ಯಾಂಕ್ ನುಂಗಲು,ಆಮ್ ಆದ್ಮೀ,ಎಂಐಎಂ,ಜೊತೆಗೆ ಜೆಡಿಎಸ್ ಸಜ್ಜಾಗಿವೆ.

ಸೆಪ್ಟೆಂಬರ್ 3ರಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ.ಈಗ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಶುರುವಾಗಿದೆ. ಚುನಾವಣೆ ಅಖಾಡಕ್ಕೆ ಧುಮುಕಿದ ಆಮ್ ಆದ್ಮಿ ಪಕ್ಷ,’ದಿಲ್ಲಿ ಬದಲಾ ಹೈ ಬೆಳಗಾವಿ ಬದಲೇಗಾ’ ಘೋಷಣೆಯೊಂದಿಗೆ ‘ಆಪ್’ ಎಂಟ್ರಿ ಕೊಟ್ಟಿದೆ.
ಆಮ್ ಆದ್ಮಿ ಪಾರ್ಟಿ 20 ವಾರ್ಡ್‌ಗಳ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿದೆ.

ಬೆಳಗಾವಿಯಲ್ಲಿ ಎಎಪಿ ರಾಜ್ಯ ರಾಜಕೀಯ ಚಟುವಟಿಕೆ ಉಸ್ತುವಾರಿ ಲಕ್ಷ್ಮೀಕಾಂತ ರಾವ್, ಆಪ್ ಮುಖಂಡ ಬಿ.ಟಿ.ನಾಗಣ್ಣ ಜಂಟಿ ಸುದ್ದಿಗೋಷ್ಠಿ ನಡೆಸಿ ಈ ವಿಷಯವನ್ನು ಪ್ರಕಟಿಸಿದ್ದಾರೆ.ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್ ಗಳಿಗೂ ಆಪ್ ಅಭ್ಯರ್ಥಿಗಳು ಕಣಕ್ಕೆ ಇಳಿಸುತ್ತೇವೆ.ಮೊದಲ ಹಂತದಲ್ಲಿ 20 ಜನ ಅಭ್ಯರ್ಥಿಗಳು ಹೆಸರು ಘೋಷಣೆ ಮಾಡಿದ್ದೇವೆ.ವಿದ್ಯಾವಂತರು, ಬುದ್ಧಿಜೀವಿಗಳಿಗೆ, ಯುವಕರಿಗೆ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಸುತ್ತಿದ್ದೇವೆ.ಎಂದು ಹೇಳಿದ್ದಾರೆ‌.

ಬಿಜೆಪಿ ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟವಿದೆ, ಬೆಳಗಾವಿ ಅಭಿವೃದ್ಧಿ ಮಂತ್ರದೊಂದಿಗೆ ಮತಯಾಚನೆ ಮಾಡ್ತಿವಿ, ಯಾವುದೇ ರಾಜಕೀಯ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲ್ಲ, ಎಎಪಿ ಮುಖಂಡರಿಗೆ ಕಾಂಗ್ರಸ್‌ನಿಂದ ಜೀವ ಬೆದರಿಕೆ ಧಮ್ಕಿ ಬಂದಿದೆ, ಯಾವುದೇ ಧಮ್ಕಿಗೆ ಆಮ್ ಆದ್ಮಿ ಪಾರ್ಟಿ ಹೆದುರುವುದಿಲ್ಲ, ಸದ್ಯಕ್ಕೆ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ನೀಡುವುದಿಲ್ಲ, ಮತ್ತೊಮ್ಮೆ ಪುನರಾವರ್ತನೆ ಆಗದಂತೆ ಎಚ್ಚರಿಕೆ ಕೊಡ್ತಿವಿ ಎಂದ ಆಪ್ ಮುಖಂಡರು ಹೇಳಿದರು.

ಎಸ್ಸ್..ಎಂದ ಜೆಡಿಎಸ್…

ಮಹಾನಗರ ಪಾಲಿಕೆಯ 58 ವಾರ್ಡ್‌ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾರೆ,ಎಂದುಬೆಳಗಾವಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ್ ಮಾಡಲಗಿ ಹೇಳಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಮಾಜಿ ಸಿಎಂ ಹೆಚ್‌ಡಿಕೆ ಸೂಚನೆಯಂತೆ ಜೆಡಿಎಸ್ ಸ್ಪರ್ಧೆ ಮಾಡುತ್ತಿದ್ದೇವೆ.ಕುಮಾರಸ್ವಾಮಿ ಸರ್ಕಾರ ಮಾಡಿದ ಅಭಿವೃದ್ಧಿ ವಿಚಾರ ಮುಂದಿಟ್ಟು ಪ್ರಚಾರ ಮಾಡ್ತಿವಿ, ಬಿಜೆಪಿ ಸರ್ಕಾರ ಯಾವುದೇ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ,ಬಿಜೆಪಿ ಸರ್ಕಾರದ ವಿರುದ್ಧ ಶಂಕರ್ ಮಾಡಲಗಿ ಆಕ್ರೋಶ ವ್ಯೆಕ್ತಪಡಿಸಿದರು.


Spread the love

About Laxminews 24x7

Check Also

ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ವಿಜಯಶಾಲಿಗಳಾಗಿ – ಇಕ್ಬಾಲ್ ಪೀರಜಾದೆ.

Spread the love ಹುಕ್ಕೇರಿ : ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ವಿಜಯಶಾಲಿಗಳಾಗಿ – ಇಕ್ಬಾಲ್ ಪೀರಜಾದೆ. ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ