ಬೆಂಗಳೂರು: ಕೇಂದ್ರ ರಾಜ್ಯ ಖಾತೆ ಸಚಿವ ನಾರಾಯಣ ಸ್ವಾಮಿ ಅವರ ಕಾರಿನಲ್ಲಿ ರಾಷ್ಟ್ರ ಧ್ವಜ ತಲೆ ಕೆಳಗಾಗಿ (ಉಲ್ಟಾ) ಹಾರಿದ ಘಟನೆ ನಡೆದಿದೆ.
ಇಲ್ಲಿಯ ಬಿಜೆಪಿ ಕಚೇರಿಗೆ ಆಗಮಿಸಿದ ಗೂಟದ ಕಾರಿನಲ್ಲಿ ಉಲ್ಟಾ ಧ್ವಜ ಹಾರಾಡಿದೆ. ಕೇಸರಿ, ಬಿಳಿ, ಹಸಿರು ಬದಲಾಗಿ. ಹಸಿರು, ಬಿಳಿ, ಕೇಸರಿ ಧ್ವಜ ಹಾರಾಡಿದೆ. ಆದರೆ, ಈ ಯಡವಟ್ಟು ನಡೆದ ವೇಳೆ ಸಚಿವರು ಆ ಕಾರಿನಲ್ಲಿ ಇರಲಿಲ್ಲ. ಖಾಸಗಿ ಕಾರಿನಲ್ಲಿ ಸಚಿವ ನಾರಾಯಣ ಸ್ವಾಮಿ ಆಗಮಿಸಿದರು. ಸಚಿವರು ಪ್ರಯಾಣಿಸಿದ ವಾಹನ ಹಿಂದೆ ಬಂದ ಸರ್ಕಾರಿ ಕಾರಿನಲ್ಲೇ ಧ್ವಜದ ಎಡವಟ್ಟು ನಡೆದಿದೆ.
ಧ್ವಜ ಸರಿಪಡಿಸಿದ ಬಳಿಕ ಸರ್ಕಾರಿ ಕಾರಿನಲ್ಲಿ ನಾರಾಯಣ ಸ್ವಾಮಿ ಪ್ರಯಾಣ ಬೆಳೆಸಿದರು.
Laxmi News 24×7