Breaking News

ರಾಜಕೀಯದಲ್ಲಿ ವಯಸ್ಸು ಮುಖ್ಯವಲ್ಲ, ಆರೋಗ್ಯ, ಕೆಲಸ ಮಾಡುವ ಉತ್ಸಾಹ ಮಾತ್ರ ಮುಖ್ಯ : ಸಿದ್ದು

Spread the love

ಮೈಸೂರು : ರಾಜಕೀಯದಲ್ಲಿ ಮುಂದುವರೆಯಲು ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ, ನಿಮ್ಮಲ್ಲಿ ಉತ್ತಮ ಆರೋಗ್ಯ, ಕೆಲಸ ಮಾಡುವ ಉತ್ಸಾಹ ಮಾತ್ರ ಮುಖ್ಯವಾಗಿರುತ್ತೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ರಾಜಕೀಯ ನಿವೃತ್ತಿಗೆ ವಯಸ್ಸು ಅಡ್ಡಿ ಬರುವುದಿಲ್ಲ, ನಿಮ್ಮಲ್ಲಿ ಉತ್ತಮ ಅರೋಗ್ಯ, ಜೊತೆಗೆ ಕೆಲಸ ಮಾಡುವ ಉತ್ಸಾಹ ಇದ್ದರೆ ಸಾಕು ಎಂದು ಹೇಳಿದರು, ನನಗೀಗ 75 ವರ್ಷವಾದರೂ ಚೆನ್ನಾಗಿದ್ದೇನೆ. ರಾಜಕೀಯದಲ್ಲಿ ಮುಂದುವರೆಯುವ ಆಸೆಯಿದೆ, ಹಾಗಾಗಿ ಮುಂದುವರೆದಿದ್ದೇನೆ. ನನಗೆ ಕೆಲಸ ಮಾಡುವ ಉತ್ಸಾಹವಿದೆ ಎಂದು ಹೇಳಿದ್ದಾರೆ.

ನಾವು ಅಧಿಕಾರಕ್ಕೆ ಬಂದ ಕೂಡಲೇ‌ ಜಾತಿಗಣತಿ
ಜಾತಿಗಣತಿ ಕುರಿತು ಮಾತನಾಡಿದ ಸಿದ್ದರಾಮಯ್ಯ ನಾವು ಅಧಿಕಾರಕ್ಕೆ ಬಂದ ಕೂಡಲೇ‌ ನಮ್ಮ ಮೊದಲ ಕೆಲಸವೇ ಜಾತಿಗಣತಿ ರಿಪೋರ್ಟ್ ಪಡೆಯೋದು, ವರದಿ ತೆಗೆದುಕೊಂಡು ಅದನ್ನ ಚರ್ಚೆಗೆ ಇಡುತ್ತೇ‌ನೆ. ರಿಪೋರ್ಟ್ ಪಡೆಯದಿದ್ದರೆ ಅದರಲ್ಲಿ‌ ಎನಿದೆ ಅಂತ ತಿಳಿಯೋದಾದ್ರು ಹೇಗೆ ಎಂದರು.

ಸಚಿವ ಆನಂದ್ ಸಿಂಗ್ ರಾಜೀನಾಮೆ ವಿಚಾರವಾಗಿ ಮಾತನಾಡಿದ ಅವರು ಬಿಜೆಪಿಯಲ್ಲಿ ಸಂಪುಟ ರಚನೆಯಲ್ಲಿ ಮನಸ್ತಾಪ ಇದೆ ಅನ್ನೋದನ್ನು ತೋರಿಸುತ್ತಿದೆ ಎಂದು ಹೇಳಿದ ಅವರು ಸಂಪುಟ ರಚನೆ ವೇಳೆಯೇ ಅಸಮಾಧಾನ ಹೊಗೆಯಾಡುತಿತ್ತು, ಇದೆ ಹೋಗೆ ಮುಂದೊಂದು ದಿನ ಜ್ವಾಲೆಯಾಗಿ ಸ್ಪೋಟಗೊಳ್ಳುವ ಲಕ್ಷಣ ಇದೆ ಎಂದು ಹೇಳಿದರು. ಯಾರಿಗೆ ಸಾಮಾಜಿಕ ನ್ಯಾಯದ ಮೇಲೆ ಗೌರವ ಇಲ್ಲವೋ ಅಂತವರ ಕೈಯಲ್ಲಿ ಉತ್ತಮ ಆಡಳಿತ ಕೊಡಲು ಹೇಗೆ ಸಾಧ್ಯ ಎಂದು ಬೊಮ್ಮಾಯಿ ಸರಕಾರವನ್ನು ಕುಟುಕಿದ್ದಾರೆ.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ