Breaking News

ಆನಂದ್ ಸಿಂಗ್ ರಾಜೀನಾಮೆ ಹೈಡ್ರಾಮ: ಯಾವ ಒತ್ತಡಕ್ಕೂ ಸೊಪ್ಪು ಹಾಕದಿರಲು ಸಿಎಂಗೆ ಹೈಕಮಾಂಡ್​ ಸಲಹೆ

Spread the love

ಬೆಂಗಳೂರು: ಖಾತೆ ಬದಲಾವಣೆಗೆ ಪಟ್ಟು ಹಿಡಿದಿರುವ ಸಚಿವ ಆನಂದ್​ ಸಿಂಗ್​, ತನ್ನ ಬೇಡಿಕೆ ಈಡೇರಿಸಿಕೊಳ್ಳಲು ರಾಜೀನಾಮೆ ಅಸ್ತ್ರ ಪ್ರಯೋಗಿಸಿದ್ದಾರೆ. ಅತ್ತ ಯಾವುದೇ ಒತ್ತಡಕ್ಕೂ ಸೊಪ್ಪು ಹಾಕಲ್ಲ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದ್ದು, ಬೊಮ್ಮಾಯಿ ಸಂಪುಟದತ್ತ ಎಲ್ಲರ ಚಿತ್ತ ಮೂಡಿದೆ.

ಯಾವುದೇ ಕಾರಣಕ್ಕೂ ಖಾತೆ ಬದಲಾವಣೆ ಮಾಡಬೇಡಿ. ಈಗ ಖಾತೆ ಬದಲಾವಣೆ ಮಾಡಿದರೆ ಮತ್ತೊಬ್ಬರು ಖಾತೆ ಕ್ಯಾತೆ ತೆಗೆಯುತ್ತಾರೆ ಎಂದು ಬಿಜೆಪಿ ಹಿರಿಯ ನಾಯಕರು ಮತ್ತು ಆರ್​ಎಸ್​ಎಸ್​ನಿಂದ ಸಿಎಂಗೆ ಸಲಹೆ ಬಂದಿದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜತೆ ಮಂಗಳವಾರ ದೂರವಾಣಿ ಮೂಲಕ ಮಾತನಾಡಿರುವ ಸಿಎಂ, ಇಬ್ಬರು ಸಚಿವರ ಅಸಮಾಧಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಸಮಾಧಾನ ಶಮನಗೊಳಿಸಿ ಆಡಳಿತಕ್ಕೆ ಚುರುಕು ನೀಡಿ. ಇಬ್ಬರು ಸಚಿವರನ್ನ ಕರೆಸಿ ಮಾತನಾಡಿ, ಸಮಸ್ಯೆ ಬಗೆಹರಿಸಿಕೊಳ್ಳಿ. ಖಾತೆ ಹಂಚಿಕೆ ಬದಲಾವಣೆ ನಿಮ್ಮ ವಿವೇಚನೆಗೆ ಬಿಟ್ಟದ್ದು, ಆದರೆ ಸಚಿವರ ಬೆದರಿಕೆ ತಂತ್ರಗಳಿಗೆ ಮಣಿಯಬೇಡಿ ಎಂದು ಅರುಣ್ ಸಿಂಗ್ ಸೂಚನೆ ಕೊಟ್ಟಿದ್ದಾರಂತೆ.

ಬುಧವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಎಂಟಿಬಿ ನಾಗರಾಜ ಜತೆ ಮಾತಾಡಿದ್ದೇನೆ, ಎಲ್ಲ ಸರಿಯಾಗಿದೆ. ಆನಂದ್ ಸಿಂಗ್ ನನಗೆ 3 ದಶಕದ ಗೆಳೆಯ. ಅವರ ಜತೆ ಮಾತಾಡ್ತೇನೆ. ಮೂರು ದಿನ ಹಿಂದೆ ಬಂದು ಅವರು ನನ್ನೊಂದಿಗೆ ಮಾತಾಡಿದ್ರು ಅಷ್ಟೆ. ರಾಜೀನಾಮೆ ಪತ್ರ ಕೊಟ್ಟಿಲ್ಲ. ಮತ್ತೊಮ್ಮೆ ಮಾತನಾಡಲು ಇಂದು ಕರೆದಿದ್ದೇನೆ. ಇವತ್ತು ಬರಬಹುದು, ನಾಳೆ ನಾನು ಮಂಗಳೂರಿಗೆ ಹೋಗ್ತೀನಿ. ಇಂದು ಆನಂದ್​ಸಿಂಗ್​ ಬರದಿದ್ರೆ ನಾಡಿದ್ದು ಬರಬಹುದು ಎಂದರು.


Spread the love

About Laxminews 24x7

Check Also

ನಮ್ಮ ಬಣದ ಎಲ್ಲ 13 ಜನ ಅಭ್ಯರ್ಥಿಗಳ ಗೆಲುವು- ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿಯವರ ವಿಶ್ವಾಸ ಜಾರಕಿಹೊಳಿ ಕುಟುಂಬದ ಎರಡನೆ ಪೀಳಿಗೆಯ ರಾಜಕೀಯ ಎಂಟ್ರಿ

Spread the loveನಮ್ಮ ಬಣದ ಎಲ್ಲ 13 ಜನ ಅಭ್ಯರ್ಥಿಗಳ ಗೆಲುವು- ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿಯವರ ವಿಶ್ವಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ