Breaking News

ರೈಲ್ವೆ ಇಲಾಖೆ ಹೊಸ ನಿಯಮ: ಟಿಕೆಟ್ ಬುಕ್ ಮಾಡುವಾಗ ಈ ಕೋಡ್ ಬಗ್ಗೆ ಇರಲಿ ಗಮನ

Spread the love

ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದಿದೆ. ರೈಲು ಟಿಕೆಟ್ ಕಾಯ್ದಿರಿಸುವಾಗ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗುತ್ತದೆ. ಭಾರತೀಯ ರೈಲ್ವೆ ಟಿಕೆಟ್ ಬುಕಿಂಗ್ ಕೋಡ್ ಮತ್ತು ಕೋಚ್ ಕೋಡ್ ನಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.

ರೈಲ್ವೆ ಇಲಾಖೆ, ರೈಲುಗಳಲ್ಲಿ ಹೊಸ ರೀತಿಯ ಕೋಚ್ ಪರಿಚಯಿಸಿದೆ. ಈ ಕೋಡ್ ಮೂಲಕ, ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವಾಗ, ಆದ್ಯತೆಯ ಆಸನವನ್ನು ಆಯ್ಕೆ ಮಾಡಬಹುದು. ದೇಶದ ಹಲವು ಮಾರ್ಗಗಳಲ್ಲಿ ರೈಲ್ವೆ ಇಲಾಖೆ ವಿಸ್ಟಾಡೋಮ್ ಕೋಚ್‌ಗಳನ್ನು ಆರಂಭಿಸಿದೆ.

ರೈಲ್ವೆ, ಹೆಚ್ಚುವರಿ ಕೋಚ್‌ಗಳನ್ನು ಆರಂಭಿಸಲಿದೆ. ಇದು ಎಸಿ -3 ಶ್ರೇಣಿಯ ಆರ್ಥಿಕ ವರ್ಗವನ್ನು ಒಳಗೊಂಡಿದೆ. ಈ ರೀತಿಯ ಕೋಚ್ 83 ಬರ್ತ್‌ಗಳನ್ನು ಹೊಂದಿರುತ್ತದೆ. ಇಕಾನಮಿ ಕ್ಲಾಸ್‌ನ ಈ ಮೂರನೇ ಎಸಿ ಕೋಚ್‌ಗಳಲ್ಲಿ ಸೀಟ್ ಬುಕಿಂಗ್‌ಗೆ ಶುಲ್ಕವನ್ನು ನಿಗದಿಪಡಿಸಲಾಗಿಲ್ಲ.

ಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಂಡು, ರೈಲ್ವೆ, ಈ ರೀತಿಯ ಕೋಚ್ ಅನ್ನು ಪರಿಚಯಿಸುತ್ತಿದೆ. ವಿಸ್ಟಾಡೋಮ್ ಕೋಚ್‌ನ ಅತಿದೊಡ್ಡ ವೈಶಿಷ್ಟ್ಯವೆಂದರೆ ಪ್ರಯಾಣಿಕರು ರೈಲಿನ ಒಳಗೆ ಕುಳಿತಾಗ ಹೊರಗಿನ ನೋಟವನ್ನು ನೋಡಬಹುದು. ಈ ಕೋಚ್‌ಗಳ ಮೇಲ್ಛಾವಣಿಯು ಗಾಜಿನಿಂದ ಕೂಡಿದೆ. ಪ್ರತಿಯೊಂದು ರಾಜ್ಯದಲ್ಲೂ ಕನಿಷ್ಠ ಒಂದು ರೈಲನ್ನು ಓಡಿಸಲು ನಿರ್ಧರಿಸಲಾಗಿದೆ.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ