Breaking News

ಳಿನ್‌ ಕುಮಾರ್‌ ಕಟೀಲ್‌ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ

Spread the love

ಬೆಂಗಳೂರು: ನೂತನ ಸಚಿವ ಸಂಪುಟ ರಚನೆ ಬೆನ್ನಲ್ಲೆ ಬಿಜೆಪಿ ಕಚೇರಿಗೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಭೇಟಿ ನೀಡಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಜೊತೆ ಚರ್ಚೆ ನಡೆಸಿದ್ದಾರೆ.

ನಂತರ ಮಾಧ್ಯಮಗಳೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತ ನನಗೂ ಒಳ್ಳೆಯ ಕಾಲ ಬರುತ್ತದೆ ಎಂದು ಹೇಳಿಕೊಂಡಿದ್ದಾರೆ.

ಮಲ್ಲೇಶ್ವರಂ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುಮಾರು 15 ನಿಮಿಷಗಳ ಕಾಲ ನಳಿನಕುಮಾರ್‌ ಕಟೀಲ್‌ ಅವರ ಜೊತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ತಮ್ಮ ಬದಲು ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಡ ಹೇರಿದ್ದರು ಎನ್ನಲಾಗಿತ್ತು. ಆದರೆ, ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದೆ ಕೈ ಬಿಟ್ಟಿರುವುದರಿಂದ ಜಾರಕಿಹೊಳಿ ಸಹೋದರರು ಬೇಸರಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯಾಧ್ಯಕ್ಷರ ಭೇಟಿಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅನೌಪಚಾರಿಕವಾಗಿ ಮಾತನಾಡಿರುವ ರಮೇಶ್‌ ಜಾರಕಿಹೊಳಿ, ನನಗೂ ಒಳ್ಳೆಯ ಕಾಲ ಬರಲಿದೆ. ನನಗೆ ನಮ್ಮ ಕ್ಷೇತ್ರದ ಜನರು ಇದ್ದಾರೆ. ನಾನೀಗ ಪ್ರತಿದಿನ ಬ್ಯಾಡ್ಮಿಂಟನ್‌ ಆಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.


Spread the love

About Laxminews 24x7

Check Also

RSS ಮನುಸ್ಮೃತಿಯನ್ನು ಬಿಜೆಪಿ ಮುಖಂಡರು ಅವರ ಮನೆಯಲ್ಲಿ ಜಾರಿಗೆ ತರಲಿ: ಸಚಿವ ಪ್ರಿಯಾಂಕ ಖರ್ಗೆ

Spread the loveಕಲಬುರಗಿ: “ಆರ್​ಎಸ್​ಎಸ್​ನಲ್ಲಿನ ಮನುಸ್ಮೃತಿಯನ್ನು ಬಿಜೆಪಿ ಮುಖಂಡರು ಅವರ ಮನೆಯಲ್ಲಿ ಜಾರಿಗೆ ತರಲಿ. ಕೊಳಕು ಮನಸ್ಸು, ಕೊಳಕು ಬುದ್ದಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ