Breaking News

ಎಟಿಎಂ/ಡೆಬಿಟ್​ ಕಾರ್ಡ್ ಇಲ್ಲದೆಯೂ ಎಚ್​ಡಿಎಫ್​ಸಿ ಎಟಿಎಂನಲ್ಲಿ ಕ್ಯಾಶ್​ ವಿಥ್​ ಡ್ರಾ ಹೀಗೆ ಮಾಡಿ

Spread the love

ಬ್ಯಾಂಕ್​ ಗ್ರಾಹಕರು ಎಟಿಎಂ ಕಾರ್ಡ್​ ಅಥವಾ ಡೆಬಿಟ್ ಕಾರ್ಡ್ ಇಲ್ಲದಂತೆ ಆಟೋಮೆಟಿಕ್ ಟೆಲ್ಲರ್ ಮಶೀನ್​ಗಳಿಂದ (ಎಟಿಎಂ) ಹಣ ವಿಥ್​ಡ್ರಾ ಮಾಡುವುದಕ್ಕೆ ಸಾಧ್ಯವಾ? ಸಾಮಾನ್ಯವಾಗಿ ಸಾಧ್ಯವಿಲ್ಲ. ಆದರೆ ಎಚ್​ಡಿಎಫ್​ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಇಂಥದ್ದೊಂದು ಅವಕಾಶ ನೀಡುತ್ತಿದೆ. ಡೆಬಿಟ್ ಅಥವಾ ಎಟಿಎಂ ಕಾರ್ಡ್ ಇಲ್ಲದೆಯೇ ಎಟಿಎಂನಿಂದ ಹಣ ವಿಥ್​ಡ್ರಾ ಮಾಡಬಹುದು. ಯಾವ ಗ್ರಾಹಕರು ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಉಳಿತಾಯ ಖಾತೆ ತೆರೆದಿರುತ್ತಾರೋ ಅಂಥವರು ದೇಶದಾದ್ಯಂತ ಇರುವ ಎಚ್​ಡಿಎಫ್​ಸಿ ಬ್ಯಾಂಕ್​ ಎಟಿಎಂಗಳಲ್ಲಿ ಈ ಸೌಲಭ್ಯ ಪಡೆಯಬಹುದು. ನೆನಪಿನಲ್ಲಿಡಿ: ಈ ಅವಕಾಶ ಇರುವುದು ಎಚ್​ಡಿಎಫ್​ಸಿ ಬ್ಯಾಂಕ್​ ಎಟಿಎಂಗಳಲ್ಲಿ ಮಾತ್ರ. ಅಂದಹಾಗೆ ಬ್ಯಾಂಕ್​ನಿಂದಲೇ ಹೇಳಿಕೊಂಡಿರುವಂತೆ, ಈ ಪ್ರಕ್ರಿಯೆ ಬಹಳ ಸರಳ ಮತ್ತು ಸುರಕ್ಷಿತವಾಗಿರುತ್ತದೆ. ಗ್ರಾಹಕರು ಕೆಲವು ಸರಳ ಹಂತಗಳನ್ನು ಅನುಸರಿಸಿದರೆ ಸಾಕು, ಎಚ್​ಡಿಎಫ್​ಸಿ ಬ್ಯಾಂಕ್​ ಎಟಿಎಂಗಳಿಂದ ಎಟಿಎಂ ಕಾರ್ಡ್ ಅಥವಾ ಡೆಬಿಟ್​ ಕಾರ್ಡ್ ಅಗತ್ಯ ಇಲ್ಲದೆಯೇ ಹಣ ವಿಥ್​ ಡ್ರಾ ಮಾಡಬಹುದು.

ಈ ಬಗ್ಗೆ ಎಚ್​ಡಿಎಫ್​ಸಿಯಿಂದ ಟ್ವೀಟ್ ಕೂಡ ಮಾಡಲಾಗಿದೆ. ನಿಮ್ಮ ಎಟಿಎಂ ಕಾರ್ಡ್ ಮರೆತಿರಾ? ಯೋಚಿಸಬೇಡಿ. ಎಚ್​ಡಿಎಫ್​ಸಿ ಬ್ಯಾಂಕ್ ಕಾರ್ಡ್​ಲೆಸ್ ಕ್ಯಾಶ್​ ಡಿಜಿಟಲಿ ನಿಮ್ಮದು. 24X7 ಎಚ್​ಡಿಎಫ್​ಸಿ ಎಟಿಎಂಗಳಿಂದ ನಗದು ವಿಥ್​ಡ್ರಾ ಮಾಡುವ ಸೇವೆ ಒದಗಿಸುತ್ತದೆ. ಎಟಿಎಂ/ಡೆಬಿಟ್ ಕಾರ್ಡ್​ ಇಲ್ಲದೆ ತಕ್ಷಣದ ಹಾಗೂ ಸುರಕ್ಷಿತ ವಿಧಾನದ ನಗದು ವಿಥ್​ಡ್ರಾ ಎಂಜಾಯ್​ ಮಾಡಿ ಎಂದಿದೆ. ಆದರೆ ಹೀಗೆ ಹಣ ವಿಥ್​ಡ್ರಾ ಮಾಡುವಾಗ ಗ್ರಾಹಕರು ಗಮನಿಸಬೇಕಾದ ಅಂಶಗಳು ಇಲ್ಲಿವೆ.

– ಗ್ರಾಹಕರು ಈ ಕಾರ್ಡ್​ಲೆಸ್ ವಿಥ್​ ಡ್ರಾ ವ್ಯವಸ್ಥೆ ಅಡಿಯಲ್ಲಿ ಕನಿಷ್ಠ 100 ರೂ. ಹಾಗೂ ಗರಿಷ್ಠ 10 ಸಾವಿರ ರೂಪಾಯಿ ಒಂದು ದಿನಕ್ಕೆ ವಿಥ್​ ಡ್ರಾ ಮಾಡಬಹುದು.

– ಎಚ್​ಡಿಎಫ್​ಸಿ ಬ್ಯಾಂಕ್ ಎಟಿಎಂಗಳಿಂದ ಒಂದು ತಿಂಗಳಲ್ಲಿ ಗರಿಷ್ಠ 25,000 ರೂಪಾಯಿ ಮೊತ್ತವನ್ನು ಡೆಬಿಟ್ ಅಥವಾ ಎಟಿಎಂ ಕಾರ್ಡ್ ಇಲ್ಲದೆ ಡ್ರಾ ಮಾಡಬಹುದು.

ಕಾರ್ಡ್​ಲೆಸ್​ ಆಗಿ ಹಣ ವಿಥ್​ಡ್ರಾ ಮಾಡುವ ಹಂತಹಂತವಾದ ವಿಧಾನ ಇಲ್ಲಿದೆ:
1. ಹತ್ತಿರದ ಎಚ್​ಡಿಎಫ್​ಸಿ ಬ್ಯಾಂಕ್​ಗೆ ಭೇಟಿ ನೀಡಬೇಕು.
2. ಮೆನು ಎಂಬ ಆಯ್ಕೆಯಿಂದ ಕಾರ್ಡ್​ಲೆಸ್ ಕ್ಯಾಶ್ ಆರಿಸಿಕೊಳ್ಳಬೇಕು. ಸಾಮಾನ್ಯವಾಗಿ ಅದು ಹಾಗೇ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ.
3. ಆದ್ಯತೆಯ ಭಾಷೆ ಯಾವುದು ಎಂಬುದನ್ನು ಆರಿಸಿಕೊಳ್ಳಬೇಕು.
4. ಗ್ರಾಹಕರು ನೋಂದಾಯಿತ ಫೋನ್​ ನಂಬರ್​ ಅನ್ನು ಹಂಚಿಕೊಳ್ಳಬೇಕು.
5. ಸುರಕ್ಷಿತ ವಹಿವಾಟಿಗಾಗಿ ಆ ಸಂಖ್ಯೆಯನ್ನು ಪರಿಶೀಲಿಸುವುದಕ್ಕೆ ಮೊಬೈಲ್​ ನಂಬರ್​ಗೆ ಒಟಿಪಿ (ಒನ್​ ಟೈಮ್ ಪಾಸ್​ವರ್ಡ್​) ಬರುತ್ತದೆ.
6. ಡಿಜಿಟ್ ಆರ್ಡರ್ ಐಡಿಯನ್ನು ಮತ್ತು ಎಷ್ಟು ಮೊತ್ತ ವಿಥ್​ಡ್ರಾ ಮಾಡಬೇಕು ಎಂದು ನಮೂದಿಸಿ.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ