“ಆಪರೇಷನ್ ಕಮಲ’ ಎಂಬ ಅನೈತಿಕ ಮಾರ್ಗದಿಂದ ಅಧಿಕಾರಕ್ಕೇರಿದ ರಾಜ್ಯ ಬಿಜೆಪಿ ಸರಕಾರವು ಭ್ರಷ್ಟಾಚಾರ, ದುರಾಡಳಿತಗಳಿಂದಲೇ ಎರಡು ವರ್ಷಗಳನ್ನು ಪೂರೈಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸರಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ “ಜನಪೀಡಕ ಸರಕಾರ’ ಕಿರುಹೊತ್ತಿಗೆ ಬಿಡುಗಡೆ ಮಾಡಿದ ಅವರು, ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ಸರಕಾರ ಇದ್ದರೆ ಸ್ವರ್ಗವನ್ನೇ ಸೃಷ್ಟಿಸುತ್ತೇವೆ ಎಂದು ಜನರನ್ನು ನಂಬಿಸಿ ರಾಜ್ಯವನ್ನು ಲೂಟಿ ಮಾಡಿದ್ದಾರೆ ಎಂದು ಟೀಕಿಸಿದರು.
ಕೊರೊನಾ ಸಂಬಂಧಿ ಸಲಕರಣೆ ಖರೀದಿಯಲ್ಲೂ ವಿಪರೀತ ಭ್ರಷ್ಟಾ ಚಾರ ನಡೆಸಿದ್ದು, ಮಕ್ಕಳಿಗಾಗಿ ಮೀಸ ಲಿಟ್ಟ ಮೊಟ್ಟೆಯ ಹಣವನ್ನೂ ಸರಕಾರ ನುಂಗಿದೆ ಎಂದು ಕಿಡಿ ಕಾರಿದರು.
ಕೋವಿಡ್ ಸಾವಿನ ಪ್ರಮಾಣ ದಲ್ಲೂ ಸರಕಾರ ಸುಳ್ಳು ಹೇಳಿದೆ ಎಂದು ಹೇಳಿದರು.
ಡಿಕೆಶಿಗೆ ಆಹ್ವಾನ ಇಲ್ಲ?:
ಎರಡು ವರ್ಷಗಳ ಸರಕಾರದ ವೈಫಲ್ಯಗಳ ಕುರಿತು ಕಿರುಹೊತ್ತಿಗೆ ಬಿಡುಗಡೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗಿಯಾಗಿರಲಿಲ್ಲ. ಅವರಿಗೆ ಆಹ್ವಾನ ಕೊಟ್ಟಿರಲಿಲ್ಲ ಎನ್ನಲಾಗಿದೆ.