Breaking News

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆಂದು ಕಣ್ಣೀರಿಟ್ಟ ಬಿ.ಎಸ್. ಯಡಿಯೂರಪ್ಪ ಮುಂದಿನ ಸಿಎಂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ?

Spread the love

ಬೆಂಗಳೂರು : ರಾಜ್ಯದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶ ಆಯೋಜನೆ ಮಾಡಲಾಗಿದೆ. ಸಾಧನಾ ಸಮಾವೇಶದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಹಿಂದಿನ ಹೋರಾಟ ನೆನಪುಗಳನ್ನು ನೆನದು ಕಣ್ಣೀರಿಟ್ಟಿದ್ದಾರೆ. ನಿಮ್ಮ ಅಪ್ಪಣೆ ಪಡೆದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.

ತಮ್ಮ ಹೋರಾಟದ ದಿನಗಳನ್ನು ಭಾಷಣದ ವೇಳೆ ನೆನಪಿಸಿದ ಸಿಎಂ ಬಿಎಸ್‌ವೈ ಅವರು, ನಾನೊಬ್ಬನೇ ವಿಧಾನಸಭೆಯೊಳಗೆ ಹೋರಾಡಿದ್ದೇನೆ. ನನ್ನ ಕರ್ತವ್ಯವನ್ನ ಮಾಡಿದ್ದೇನೆ.. ನನಗೆ ತೃಪ್ತಿ ಸಮಾಧಾನವಿದೆ. ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಹುಟ್ಟಿ ಸಂಘದ ಕಾರ್ಯಕರ್ತನಾಗಿ ಕಾರ್ಯ ಪ್ರಾರಂಭಿಸಿದೆ.

ಪುರಸಭೆಯಿಂದ ಗೆದ್ದು ಅಧ್ಯಕ್ಷನಾದೆ:

ಪುರಸಭೆಯಿಂದ ಗೆದ್ದು ಅಧ್ಯಕ್ಷನಾದೆ. ಆಗ ಮನೆಯಿಂದ ಕಚೇರಿಗೆ ದಾರಿ ಮದ್ಯದಲ್ಲಿ ಮಾರಣಾಂತಿಕ ಹಲ್ಲೆ ನಡೆದಿತ್ತು.. ಮುಗಿದೇ ಹೋದೆ ಅಂತ ಕೈ ಮುಗಿದರು. ಬದುಕಿದ್ದರೆ ನಾಡಿನ ಜನತೆಗೆ ನನ್ನ ಬದುಕನ್ನ ಮೀಡಲಿದಡ್ತೇನೆ ಅಂದಿದ್ದೆ. ಆ ಸಮಾಧಾನ ನನಗಿದೆ.. ರೈತಪರ ಹೋರಾಟ ದಲಿತರ ಹೋರಾಟಕ್ಕಾಗಿ ನಾನು ಹೋರಾಡಿದ್ದೇನೆ.

ಶಿವಮೊಗ್ಗದಲ್ಲಿ 50-60 ಸಾವಿರ ಜನರನ್ನ ಸೇರಿಸಿದ್ದೆ ರಾಜನಾಥ ಸಿಂಗ್ ಹೆಮ್ಮೆ ಪಟ್ಟಿದ್ದರು. ಕರ್ನಾಟಕ ರಾಜ್ಯದಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡಿದ ಪರಿಣಾಮ ಈ ಸ್ಥಾನದಲ್ಲಿದ್ದೇನೆ. ಕರ್ನಾಟಕದಲ್ಲಿ ಪಕ್ಷ ಕಟ್ಟಬೇಕಿದೆ ದೆಹಲಿಗೆ ಬರಲ್ಲ ಅಂತ ಹೇಳಿದೆ. ಆ ಸಮಯದಲ್ಲಿ ವಾಜಪೇಯಿ, ಅಡ್ವಾಣಿ, ಜೋಶಿ ಇವರ ಕಾರ್ಯಕ್ರಮದಲ್ಲಿ 200-300 ಜನ ಸೇರ್ತಾ ಇರಲಿಲ್ಲ. ಈ ಸಮಯದಲ್ಲಿ ನಾಡನಾದ್ಯಂತ ಹೋರಾಟ ಮಾಡಿದೆ. ಇವತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹಲವರು ಜಾತಿಯ ವಿಷಬೀಜ ಬಿತ್ತಿದರೂ ಸಹ ಜನ ನಮ್ಮನ್ನ ಕೈಬಿಡಲಿಲ್ಲ.

ಪಕ್ಷ ಬೆಳೆಯಲು ಲಕ್ಷಾಂತರ ಜನ ಕಾರ್ಯಕರ್ತರೇ ಕಾರಣ:

ಇವತ್ತು ಇಲ್ಲಿ ನಾವು ಇದ್ದೇವೆ ಅಂದ್ರೇ. ಈ ಪರಿಸ್ಥಿತಿಗೆ ಲಕ್ಷಾಂತರ ಜನ ಕಾರ್ಯಕರ್ತರೇ ಕಾರಣ. ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಿಲ್ಲ. ಆದ್ರೇ ಪ್ರಧಾನಿ ನರೇಂದ್ರ ಮೋದಿಯವರು, ಗೃಹ ಸಚಿವ ಅಮಿತ್ ಶಾ ಅವರು ನನಗೆ ಅವಕಾಶ ಮಾಡಿಕೊಟ್ಟರು. ಅವರು ನೀಡಿದಂತ ಕಾರಣ ಎರಡು ವರ್ಷ ಈ ರಾಜ್ಯದ ಜನರ ಸೇವೆ ಮಾಡಿದ್ದೇನೆ ಎಂಬುದಾಗಿ ಭಾವುಕರಾಗಿ ನುಡಿದರು.

ಇಂದು ಪಕ್ಷ ರಾಜ್ಯದಲ್ಲಿ ಸದೃಡವಾಗಿ ಬೆಳೆದಿದೆ. ಈಗಾಗಲೇ ನಾವೇನು ಸಾಧನೆ ಮಾಡಿದ್ದೇವೆ ಎನ್ನುವ ಬಗ್ಗೆ ನಿಮಗೆಲ್ಲಾ ಸವಿಸ್ತಾರವಾಗಿ ವೀಡಿಯೋ ಮೂಲಕ ತೆರೆದು ಇಡಲಾಗಿದೆ. ಪಕ್ಷ ಕರ್ನಾಟಕದಲ್ಲಿ ಬೆಳೆಯೋದಕ್ಕೆ ಕಾರಣವಾಗಿದೆ ಎಂಬುದಾಗಿ ಹೇಳಿದರು.

ಕಾಲ್ನಡಿಗೆಯಲ್ಲಿ ರಾಜಭವನಕ್ಕೆ ತೆರಳಿ ರಾಜೀನಾಮೆ?:
ರಾಜ್ಯದಲ್ಲಿ ಬಿಜೆಪಿ ಪಕ್ಷ ಸ್ಪಷ್ಟವಾದಂತ ಬಹುಮತವನ್ನು ಗಳಿಸೋದಕ್ಕೆ ಸಾಧ್ಯವಾಗಲಿಲ್ಲ. ಆದ್ರೇ ಮುಂಬರುವ ದಿನಗಳಲ್ಲಿ ಎಲ್ಲರೂ ಆ ನಿಟ್ಟಿನಲ್ಲಿ ಕೆಲಸ ಮಾಡೋಣ. ನೋಡಿ ಎಲ್ಲಾ ಸಂದರ್ಭದಲ್ಲಿಯೂ ಅಗ್ನಿ ಪರೀಕ್ಷೆ. ನಾನು ಅಧಿಕಾರವಹಿಸಿಕೊಂಡಾಗ 2 ತಿಂಗಳು ಅಧಿಕಾರ ಮಾಡೋದಕ್ಕೆ ಕೇಂದ್ರ ಬಿಡಲಿಲ್ಲ. ಈಗ ಕೋವಿಡ್ ಕಾರಣದಿಂದ ಕೆಲಸ ಮಾಡುವಂತೆ ಆಯ್ತು. ನಮ್ಮ ಅಧಿಕಾರಿಗಳು, ಸಿಎಸ್ ರವಿಕುಮಾರ್ ಸಹಕಾರದಿಂದಾಗಿ ಉತ್ತಮವಾಗಿ ಕೆಲಸ ಮಾಡುವಂತೆ ಆಯ್ತು ಎಂದರು.

ಇಂದು ಊಟವಾದ ಬಳಿಕ, ರಾಜಭವನಕ್ಕೆ ತೆರಳಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಯಡಿಯೂರಪ್ಪ ಘೋಷಣೆ ಮಾಡಿದರು. ತಮ್ಮ ಸಂಪುಟದ ಸಹೋದ್ಯೋಗಿಗಳು ಹಾಗೂ ಅಭಿಮಾನಿಗಳೊಂದಿಗೆ ಕಾಲ್ನಡಿಗೆಯಲ್ಲಿ ರಾಜಭವನಕ್ಕೆ ತೆರಳಿ ಯಡಿಯೂರಪ್ಪ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.


Spread the love

About Laxminews 24x7

Check Also

ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಸಚಿವೆ ಹೆಬ್ಬಾಳಕರ

Spread the love ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಸಚಿವೆ ಹೆಬ್ಬಾಳಕರ ಎಂಎಲ್ಸಿ ರವಿಕುಮಾರ್ ವಿರುದ್ಧ ಲಕ್ಷ್ಮೀ ಹೆಬ್ಬಾಳಕರ್ ವಾಗ್ದಾಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ