Breaking News

ಕೊಟ್ಟ ಕುದುರೆ ಏರಲಾಗದೆ ಬಿಜೆಪಿ ಮುಗ್ಗರಿಸಿದೆ: ಕಾಂಗ್ರೆಸ್ ಟೀಕೆ

Spread the love

ಬೆಂಗಳೂರು,ಜು.25: ಆಪರೇಷನ್ ಕಮಲದ ಅನೈತಿಕ ಕೂಸಾಗಿ ಹುಟ್ಟಿದ ಈ ಸರ್ಕಾರ ಎರಡು ವರ್ಷದಲ್ಲಿ ಒಂದೇ ಒಂದು ಜನಪರ ಯೋಜನೆ ಘೋಷಿಸಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಕುರತು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಡವರಿಗೆ ಆಸರೆಯಾಗಿದ್ದ ಇಂದಿರಾ ಕ್ಯಾಂಟೀನ್, ಅನ್ನಭಾಗ್ಯ ಯೋಜನೆಗಳಿಗೆ ಅನುದಾನ ಕಡಿತ ಮಾಡಿದ್ದೇ ರಾಜ್ಯ ಬಿಜೆಪಿಯ ಸಾಧನೆ. 2 ವರ್ಷಗಳ ಆಡಳಿತವನ್ನು ಲೂಟಿ, ಕಿತ್ತಾಟಲ್ಲಿಯೇ ಕಳೆದರು. ಈ ಸುಧೀರ್ಘಅವಧಿಯಲ್ಲಿ ಬಿಜೆಪಿ ಜನತೆಗೆ ನರಕದ ಹಾದಿ ತೋರಿಸಿದೆ, ಕೊಟ್ಟ ಕುದುರೆ ಏರಲಾಗದೆ ಮುಗ್ಗರಿಸಿದೆ!’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ಎಂದು ಲೇವಡಿ ಮಾಡಿದೆ.

ಸಂಪುಟ ರಚನೆಯ ಸರ್ಕಸ್, ಸಿಡಿ ಬ್ಲಾಕ್‍ಮೇಲ್, ಆಂತರಿಕ ಬಂಡಾಯದಲ್ಲೇ ದಿನ ದೂಡಿದ ಸರಕಾರ. ಬಿಜೆಪಿಯ ಅಧಿಕಾರದಾಹ ರಾಜ್ಯವನ್ನು ಕಗ್ಗತ್ತಲೆಗೆ ತಳ್ಳಿ, ಅತ್ಯಂತ ದುರ್ಭರ ದಿನಗಳನ್ನು ತಂದಿಟ್ಟಿದೆ’ ಎಂದು ವಾಗ್ದಾಳಿ ನಡೆಸಿದೆ.

`ಸರಕಾರಕ್ಕೆ 2 ವರ್ಷ, ಕಮರಿತು ಜನರ ಹರ್ಷ! ಸಚಿವರ ನಡುವೆ ಕಚ್ಚಾಟ, ಅಧಿಕಾರಿಗಳ ಅಸಹಕಾರ, ಸ್ವಪಕ್ಷ ಶಾಸಕರಿಂದಲೇ ಭ್ರಷ್ಟಾಚಾರದ ಆರೋಪ, ಸಿಎಂ ವಿರುದ್ಧವೇ ರಾಜ್ಯಪಾಲರಿಗೆ ದೂರು, ಜಾತಿ ಮೀಸಲಾತಿ ಹೋರಾಟಗಳು, ಬಿಜೆಪಿಯ ಅಧಿಕಾರದ ದಾಹದಿಂದ ನೀಗಲಿಲ್ಲ ಜನರ ಸಂಕಷ್ಟ’ ಎಂದು ಕಾಂಗ್ರೆಸ್ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.

`ಬಿಎಸ್‍ವೈ ವಿರುದ್ಧ ಕತ್ತಿ ಮಸೆಯುತ್ತಿದ್ದ ಮೀರ್‍ಸಾದಿಕ್ ನಳಿನ್ ಕುಮಾರ್ ಕಟೀಲ್ ಈಗ ಅತೀ ಹೊಗಳಿಕೆಯ ಮೂಲಕ ಬೀಳ್ಕೊಡುಗೆಗೆ ಉತ್ಸಾಹದಲ್ಲಿದ್ದಾರೆ! ಹಾಗೆಯೇ ಸಚಿವರಾದ ಕೆ.ಎಸ್.ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಕಣ್ಣುಗಳು ಎನ್ನುತ್ತಲೇ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ! ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಎಂಬಂತೆ ಕಟೀಲ್ ಆಡಿಯೋಗೆ ಬೇರೆ ಸಾಕ್ಷಿ ಬೇಕೇ!?’ ಎಂದು ಕಾಂಗ್ರೆಸ್, ಕಟೀಲ್ ವಿರುದ್ಧ ವ್ಯಂಗ್ಯವಾಡಿದೆ.

`ಈ 2 ವರ್ಷದಲ್ಲಿ, ಕೊರೋನ ಮುಕ್ತ ಕರ್ನಾಟಕ, ನಿರುದ್ಯೋಗ ಮುಕ್ತ ಕರ್ನಾಟಕ, ಭ್ರಷ್ಟಾಚಾರ ಮುಕ್ತ ಕರ್ನಾಟಕ, ಹಸಿವು ಮುಕ್ತ ಕರ್ನಾಟಕ ಮಾಡುವುದು ಬಿಜೆಪಿ ಪಕ್ಷದ ಆದ್ಯತೆ ಆಗಬೇಕಿತ್ತು, ಆದರೆ ಅವರ ಆದ್ಯತೆ ಬಿಎಸ್‍ವೈ ಮುಕ್ತ ಬಿಜೆಪಿ ಮಾಡುವುದಷ್ಟೇ ಆಗಿತ್ತು! ಎಂದು ಕಾಂಗ್ರೆಸ್ ಟೀಕಿಸಿದೆ.

 


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ