ಯಾದಗಿರಿ: ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ. ಯಾದಗಿರಿ ಜಿಲ್ಲೆ ಗುರುಮಠಕಲ್ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆಂದು ಹಾಲ್ ಟಿಕೆಟ್ ಪಡೆದು ಮನೆಗೆ ವಾಪಸ್ ಬರುವಾಗ ಸಾವು ಸಂಭವಿಸಿದೆ.
ಜುಲೈ 19 ರಂದು ಪರೀಕ್ಷೆ ಬರೆಯಬೇಕಿದ್ದ ಪುಟಪಾಕ ಗ್ರಾಮದ ನಿಶಿತಾ ಫಾತಿಮಾ (16) ಸಾವಿಗೀಡಾದ ದುರ್ದೈವಿ. ನಿಶಿತಾ ಫಾತಿಮಾ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ. ಗ್ರಾಮಕ್ಕೆ ವಾಪಸ್ ಹೋಗಲು ಬಸ್ ನಿಲ್ದಾಣದಲ್ಲಿ ಕುಳಿತಿದ್ದಾಗ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾಳೆ.