ಮೈಸೂರು: ಇದು ಭಂಡ ಸರಕಾರ. ಮಾನವೀಯತೆಯ ಇಲ್ಲದ ಸರಕಾರ. ಬಿಪಿಎಲ್ ಕಾರ್ಡ್ ದಾರರಿಗೆ ತಲಾ 10 ಸಾವಿರ ಕೊಡಬೇಕಿತ್ತು. ನಮ್ಮ ಸರಕಾರ ಇದ್ದಿದ್ದರೆ 10 ಸಾವಿರ ಹಣ, 10 ಕೆಜಿ ಅಕ್ಕಿ ಕೊಡುತ್ತಿದ್ದೆವು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇವರು ದುಡ್ಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಇಂತಹ ಕೆಟ್ಟ ಸರಕಾರವನ್ನು ನನ್ನ ರಾಜಕೀಯ ಜೀವನದಲ್ಲೇ ನೋಡಿರಲಿಲ್ಲ. ಯಡಿಯೂರಪ್ಪ ಮತ್ತು ಅವರ ಮಗ ಜೆಸಿಬಿಯಲ್ಲಿ ಅಗೆಯುತ್ತಾ ಹಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಹೇಳುವುದೆಲ್ಲಾ ಸುಳ್ಳು. ಪ್ರಧಾನಿ ಅಚ್ಚೆ ದೀನ್ ಆಯೇಗಾ ಅಂದರೆ ಕೆಟ್ಟ ದಿನ ಬರುತ್ತಿದೆ ಅಂತಾ ಅರ್ಥ. ಎಲ್ಲರೂ ನಾಚಿಕೆ ಆಗುವಷ್ಟು ಲಂಚ ಪ್ರಕರಣಗಳು ನಡೆಯುತ್ತಿದೆ. ಅವರದೇ ಪಾರ್ಟಿಯವರೆ ಅವರ ಸಚಿವರಿಗೆ ಹಣ ಕೊಟ್ಟು ಕೆಲಸ ತೆಗೆದುಕೊಳ್ಳುತ್ತಿದ್ದಾರೆ.
10% ಇಲ್ಲದೆ ಯಾವ ಫೈಲ್ ಕೂಡ ಈ ಸರಕಾರದಲ್ಲಿ ಮುಂದಕ್ಕೆ ಹೋಗುತ್ತಿಲ್ಲ. ಯಡಿಯೂರಪ್ಪನದು ಸ್ವಾತಂತ್ರ್ಯ ನಂತರದ ಅತ್ಯಂತ ಕೆಟ್ಟ ಮತ್ತು ಭ್ರಷ್ಟ ಸರಕಾರ. ಯಡಿಯೂರಪ್ಪ ಎರಡೇ ವರ್ಷದಲ್ಲಿ ಒಂದೂವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇನ್ನೂ ಈ ಸರಕಾರ ಮುಂದುವರಿದರೆ ಎಷ್ಟು ಸಾಲ ಮಾಡಬಹುದು ಲೆಕ್ಕ ಹಾಕಿ. ಈ ಸರಕಾರ ಬೇಕಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
Laxmi News 24×7