Breaking News

ಚಿತ್ರೀಕರಣದತ್ತಅಣ್ತಮ್ಮ! ಇಂದಿನಿಂದ ಶಿವಣ್ಣ, ಪುನೀತ್‌ ಶೂಟಿಂಗ್‌ನಲ್ಲಿ ಭಾಗಿ

Spread the love

ಲಾಕ್‌ಡೌನ್‌ ತೆರವಾಗಿ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿದ್ದಂತೆ ಒಂದೊಂದೇ ಸಿನಿಮಾಗಳು ಮುಹೂರ್ತ ಆಚರಿಸಿಕೊಳ್ಳುತ್ತಿವೆ. ಈ ಮೂಲಕ ಲಾಕ್‌ ಡೌನ್‌ನಲ್ಲಿ ಮನೆಯಲ್ಲಿದ್ದ ನಟ-ನಟಿಯರೆಲ್ಲ ಮತ್ತೆ ಬಣ್ಣ ಹಚ್ಚಲು ಸಿದ್ಧವಾಗಿದ್ದಾರೆ.

ಈಗ ಆ ಸಾಲಿಗೆ ಶಿವರಾಜ್‌ಕುಮಾರ್‌ ಹಾಗೂ ಪುನೀತ್‌ರಾಜ್‌ಕುಮಾರ್‌ ಕೂಡಾ ಸೇರುತ್ತಾರೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಕಳೆದ ಎರಡೂವರೆ ತಿಂಗಳಿನಿಂದ ಚಿತ್ರೀಕರಣದಿಂದ ದೂರವಿದ್ದ ಶಿವರಾಜ್‌ಕುಮಾರ್‌ ಅವರು ಇಂದು ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಅವರ ನಟನೆಯ123ನೇ ಚಿತ್ರದ ಚಿತ್ರೀಕರಣದಲ್ಲಿ ಶಿವಣ್ಣ ಪಾಲ್ಗೊಳ್ಳುತ್ತಿದ್ದಾರೆ. ವಿಜಯ್‌ ಮಿಲ್ಟನ್‌ ನಿರ್ದೇಶನದ, ಕೃಷ್ಣ ಸಾರ್ಥಕ್‌ ನಿರ್ಮಾಣದ ಈ ಚಿತ್ರಕ್ಕೆ ಆರಂಭದಲ್ಲಿ “ಶಿವಪ್ಪ’ ಎಂಬ ಟೈಟಲ್‌ ಇಡಲಾಗಿತ್ತು. ಆದರೆ, ಈಗ ಟೈಟಲ್‌ ಬದಲಾಗಲಿದ್ದು, ಶಿವಣ್ಣ ಹುಟ್ಟುಹಬ್ಬಕ್ಕೆ (ಜು.12) ಹೊಸ ಟೈಟಲ್‌ ಬಿಡುಗಡೆಯಾಗಲಿದೆ.

ಜೇಮ್ಸ್‌ನತ್ತ ಪುನೀತ್‌: ಪುನೀತ್‌ರಾಜ್‌ ಕುಮಾರ್‌ ಅಭಿನಯದ “ಜೇಮ್ಸ್‌’ ಚಿತ್ರದ ಚಿತ್ರೀಕರಣ ಇಂದಿನಿಂದ ಶುರುವಾಗುತ್ತಿದ್ದು, ಪುನೀತ್‌ ಭಾಗಿಯಾಗಲಿದ್ದಾರೆ. ಅರಮನೆ ಮೈದಾನದಲ್ಲಿ ಹಾಕಲಾದ ಸೆಟ್‌ನಲ್ಲಿ ಆಯಕ್ಷನ್‌ ದೃಶ್ಯಗಳನ್ನು ಚಿತ್ರೀಕರಿಸಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಚೇತನ್‌ಕುಮಾರ್‌ ಈ ಚಿತ್ರದ ನಿರ್ದೇಶಕರು.

“ಇದೊಂದು ಪಕ್ಕಾ ಕಮರ್ಷಿಯಲ್‌ ಎಂಟರ್‌ ಟೈನರ್‌ ಸಿನಿಮಾ. ಇಲ್ಲಿಯವರೆಗೆ ಪುನೀತ್‌ ಅವರು ಮಾಡಿದ ಚಿತ್ರಗಳಿಗಿಂತಲೂ ಭಿನ್ನವಾಗಿರುತ್ತೆ. ಪಾತ್ರಕೂಡ ಹೊಸ ರೀತಿಯಾಗಿದೆ. ಬಾಡಿ ಲಾಂಗ್ವೇಜ್‌ ಕೂಡ ಹೊಸತನದಿಂದ ಕೂಡಿದೆ. “ಜೇಮ್ಸ್‌’ ಎಂಬ ಶೀರ್ಷಿಕೆಗೆ ತಕ್ಕದ್ದಾದ ಪಾತ್ರವಿದೆ. ಇಲ್ಲಿನ ಮುಖ್ಯ ಆಕರ್ಷಣೆ ಅಂದರೆ, ಅದು ಹೈವೋಲ್ಟೇಜ್‌ ಆಯಕ್ಷನ್‌. ಪುನೀತ್‌ ಸರ್‌ ಅವರ ವಿಶೇಷ ಸ್ಟಂಟ್ಸ್‌ ಇಲ್ಲಿರಲಿದೆ. ಅವರ ಫ್ಯಾನ್ಸ್‌ಗೆ ವಿಶೇಷತೆಗಳು ತುಂಬಿರಲಿವೆ. ಒಟ್ಟಾರೆ, “ಜೇಮ್ಸ್‌’ ಪಕ್ಕಾ ಮನರಂಜನಾತ್ಮಕವಾಗಿಯೇ ಮೂಡಿಬರಲಿದೆ’ ಎಂಬುದು ಚೇತನ್‌ಕುಮಾರ್‌ ಮಾತು.


Spread the love

About Laxminews 24x7

Check Also

ಮೂಡಲಗಿ ವಲಯದ ಅತಿಥಿ ಶಿಕ್ಷಕರ ವೇತನ ವಿತರಿಸಿದ ಸರ್ವೋತ್ತಮ ಜಾರಕಿಹೊಳಿ*

Spread the love ಗೋಕಾಕ-* ಧಾರವಾಡ ವಲಯದಲ್ಲಿಯೇ ಮೂಡಲಗಿ ಶೈಕ್ಷಣಿಕ ವಲಯದ ಸಾಧನೆಯನ್ನು ಮೆಚ್ಚುವಂತಹದ್ದು, ಅದರಲ್ಲಿಯೂ ಅತಿಥಿ ಶಿಕ್ಷಕರನ್ನು ಇಟ್ಟುಕೊಂಡು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ