Breaking News

ತಾಲೂಕಿನಲ್ಲಿ 2 ಲಕ್ಷ 80 ಸಾವಿರ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ

Spread the love

ಬೆಳಗಾವಿ: ತಾಲೂಕಿನಲ್ಲಿ 2 ಲಕ್ಷ 80 ಸಾವಿರ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಹೇಳಿದರು.

ನಗರದ ಲಕ್ಷ್ಮೀ ಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸೋಮವಾರ 32 ಕಡೆ 10,500 ಜನರಿಗೆ ಲಸಿಕಾ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಬೆಳಗಾವಿ ಹುಕ್ಕೇರಿ ಹಿರೇಮಠದ‌ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಜಿಲ್ಲಾಡಳಿತದೊಂದಿಗೆ ವಿಶೇಷವಾಗಿ ಇರುವ ಸ್ಪಂದನೆ ಮತ್ತು ಇಡೀ ರಾಜ್ಯದಲ್ಲಿ ಮಠಾಧೀಶರೊಬ್ಬರು ಪ್ರಪ್ರಥಮಬಾರಿಗೆ ಎರಡು ಅಂಬುಲೆನ್ಸ್ ನೀಡುವುರದ ಮೂಲಕ ನಮಗೆಲ್ಲ ಸ್ಪೂರ್ತಿ ನೀಡಿದ್ದಾರೆ ಎಂದರು.

ಇವತ್ತು ತಮ್ಮ ಶ್ರೀಮಠದಲ್ಲಿಯೇ ಸುಮಾರು 200 ಜನರಿಗೆ ಕೋವಿಡ್ ಲಸಿಕೆಯನ್ನು ನೀಡುತ್ತಿರುವುದು ಅತೀವ ಸಂತೋಷ ತಂದಿದೆ. ಎಲ್ಲರೂ ಕೂಡ ಜಾಗೃತರಾಗಿರಿ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಿ ಎಂದು ಕರೆ ನೀಡಿದರು.

ಸಾನಿದ್ಯ ವಹಿಸಿ ಮಾತನಾಡಿದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮೊದಲು ಜನರು ಅಲಕ್ಷ್ಯ ಮಾಡಿದ್ದಾರೆ. ಈಗಲೂ ಅಲಕ್ಷ್ಯ ಮಾಡುವುದು ಬೇಡ.ಕೋವಿಡ್ ಲಸಿಕೆ ಹಾಕಿಸಿಕೊಂಡು ಎಲ್ಲರೂ ಆರೋಗ್ಯದ ಕಡೆ ಗಮನ ಹರಿಸುವುದು ಅತಿ ಉತ್ತಮ. ನಾವೆಲ್ಲರೂ ಕೂಡ ಆರೋಗ್ಯವಾಗಿರಲು ಆದಷ್ಟು ಸರಕಾರಿ ನಿಯಮ ಪಾಲನೆ ಮಾಡುವುದು ಸೂಕ್ತ. ಲಾಕ್ ಡೌನ್ ಮುಗಿಯಿತು ಎಂದು ತಿಳಿದು ಅಜಾಗೃತಕತೆಯಿಂದ ಇರುವುದು ಬೇಡ ಎಂದು ಹೇಳಿದರು.

ಪೃಥ್ವಿ ನಿರಲಗಿಮಠರವರಿಗೆ ಪ್ರಥಮ ಡೋಸ್ ನಿಡುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬೆಳಗಾವಿ ಸ್ಮಾರ್ಟ್ ಸಿಟಿ ಎಂ.ಡಿ. ಶಶಿಧರ ಕುರೇರ್, ಡಿಎಸ್ಓ ಡಾ.ಬಿ.ಎನ್. ತುಕ್ಕಾರ, ಪಾಲಿಕೆ ಆರೋಗ್ಯಾಧಿಕಾರಿ ಡಾ. ಸಂಜಯ ಡುಮ್ಮಗೋಳ, ಬುಡಾ ಎಂಜಿನಿಯರ್ ಮಹಾಂತೇಶ ಹಿರೇಮಠ, ವೀರುಪಾಕ್ಷಯ್ಯ ನೀರಲಗಿಮಠ ಡಾ ಶಿವಾನಂದ ಮಾಸ್ತಿಹೋಳಿ .ಡಾ ಅನುಪಮಾ ತುಕ್ಕಾರ, ಡಾ ಅಭಿಷೇಕ ನರಹಳ್ಳಿ, ಡಾ ಶಕುಂತಲಾ ನರಹಳ್ಳಿ , ಚಂದ್ರಶೇಖರ ಸವಡಿ, ರಾಜು ಪಟಗುಂದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ ಪ್ರತಿಟಭಟನೆ.

Spread the love ಹುಕ್ಕೇರಿ : ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ