Breaking News

ರಾತ್ರಿ ಸೋಂಕಿತೆ ಸಾವು, 26 ಲಕ್ಷ ರೂ ಬಿಲ್ ಪಾವತಿಸಿದ್ದರೂ ಇನ್ನೂ 5 ಲಕ್ಷ ಕಟ್ಟಿದರೆ ಮಾತ್ರ ಬಾಡಿ ಎಂದು ಪೀಡಿಸುತ್ತಿರುವ ಖಾಸಗಿ ಆಸ್ಪತ್ರೆ!

Spread the love

ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿನ ಅಟ್ಟಹಾಸ ತಗ್ಗುತ್ತಾ ಬಂದಿದೆಯಾದರೂ ಖಾಸಗಿ ಆಸ್ಪತ್ರೆಗಳ ಧನ ದಾಹ ತಗ್ಗಿಲ್ಲ. ಸರ್ಕಾರವೂ ಹಣಕ್ಕಾಗಿ ಪೀಡಿಸುವ ಅಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರೂ ಇವು ಡೋಂಟ್​ ಕೇರ್​ ಅನ್ನುತ್ತಿವೆ. ಬೆಂಗಳೂರಿನ ಹ್ಯಾಮಿಲ್ಟನ್ ಆಸ್ಪತ್ರೆಯ ಹಣದ ದಾಹ ಇತ್ತೀಚಿನ ಪ್ರಕರಣವಾಗಿದೆ. ಬಾಕಿ ಬಿಲ್ ನೀಡದ ಹಿನ್ನೆಲೆ ಮೃತದೇಹ ನೀಡಲು ಆಸ್ಪತ್ರೆ ನಿರಾಕರಿಸಿದೆ ಎಂದು ದೂರಲಾಗಿದೆ.

ಹ್ಯಾಮಿಲ್ಟನ್ ಆಸ್ಪತ್ರೆಯ ಆಡಳಿತ ಮಂಡಳಿ ಈ ಅಮಾನವೀಯ ನಡೆಗೆ ಸಾಕ್ಷಿಯಾಗಿದೆ. ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸಿರುವ ಹ್ಯಾಮಿಲ್ಟನ್ ಖಾಸಗಿ ಆಸ್ಪತ್ರೆಯು ಕೊರೊನಾ ಸೋಂಕಿತೆ ಚಿಕಿತ್ಸೆಗೆ ಬರೋಬ್ಬರಿ 26 ಲಕ್ಷ ರೂಪಾಯಿ ಬಿಲ್ ಮಾಡಿದೆ. ಲಕ್ಷ ಲಕ್ಷ ಬಿಲ್ ಕಟ್ಟಿದರೂ ಕೊರೊನಾ ಸೋಂಕಿತೆ ಉಳಿದಿಲ್ಲ. ನಿನ್ನೆ ರಾತ್ರಿ ಹ್ಯಾಮಿಲ್ಟನ್ ಆಸ್ಪತ್ರೆಯಲ್ಲಿ ಸೋಂಕಿತೆ ಸಾವಿಗೀಡಾಗಿದ್ದಾರೆ.

ಈ ಮಧ್ಯೆ, ಮೃತಳ ಕುಟುಂಬಸ್ಥರು ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಹ್ಯಾಮಿಲ್ಟನ್ ಆಸ್ಪತ್ರೆಗೆ (Hamilton Bailey hospital in HSR Layout) 21 ಲಕ್ಷ ರೂ. ಬಿಲ್ ಪಾವತಿಸಿದ್ದಾರೆ. ಆದರೂ, ಇನ್ನುಳಿದ 5 ಲಕ್ಷ ರೂಪಾಯಿ ಬಿಲ್ ಕಟ್ಟುವಂತೆ ಪಟ್ಟುಹಿಡಿದಿದ್ದಾರೆ. 5 ಲಕ್ಷ ರೂ ಬಿಲ್ ಕಟ್ಟಿದರೆ ಮಾತ್ರ ಮೃತದೇಹವನ್ನು ನೀಡುತ್ತೇವೆ, ಇಲ್ಲದಿದ್ದರೆ ಮೃತದೇಹ ನೀಡಲ್ಲವೆಂದು ಆಸ್ಪತ್ರೆಯವರು ಹೇಳ್ತಿದ್ದಾರೆ ಎಂದು ಹ್ಯಾಮಿಲ್ಟನ್ ಆಸ್ಪತ್ರೆ ವಿರುದ್ಧ ಮೃತಳ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಹ್ಯಾಮಿಲ್ಟನ್ ಆಸ್ಪತ್ರೆ


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ