Breaking News

ಪತ್ನಿ ಮಾತು ಕೇಳಿ ಮಕ್ಕಳಿಗೆ ಮೈತುಂಬಾ ಬರೆ! ಸುಟ್ಟುಹೋದ ಶರೀರ- ನೋಡಲಾಗುತ್ತಿಲ್ಲ ಕಂದಮ್ಮಗಳ ಕಣ್ಣೀರು

Spread the love

ಬೆಂಗಳೂರು: ಎರಡನೇ ಪತ್ನಿ ಜತೆ ಸೇರಿಕೊಂಡು ತನ್ನ ಮೂವರು ಮಕ್ಕಳ ಮೇಲೆ ತಂದೆಯೇ ಪೈಶಾಚಿಕ ಕೃತ್ಯ ಎಸಗಿದ್ದು, ಈ ಸಂಬಂಧ ದಂಪತಿಯನ್ನು ಬಂಧಿಸಲಾಗಿದೆ.

ರಾಗಿಗುಡ್ಡ ನಿವಾಸಿ ತಮಿಳು ಸೆಲ್ವನ್‌ (45) ಮತ್ತು ಆತನ 2ನೇ ಪತ್ನಿ ಸತ್ಯಾ (35)ಬಂಧಿತರು. ಗಾಯಗೊಂಡಿರುವ ಸೌಮ್ಯಾ(3), ರಾಘವನ್‌ (4) ಹಾಗೂ ನಿತೇಶ್‌(6) ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದು ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರೂಸರ್‌ ವಾಹನ ಚಾಲಕನಾಗಿ ರುವ ತಮಿಳುನಾಡು ಮೂಲದ ತಮಿಳುಸೆಲ್ವನ್‌ 8 ವರ್ಷಗಳ ಹಿಂದೆ ಅಂಜಲಿ ಎಂಬವರನ್ನು ವಿವಾಹ ವಾಗಿದ್ದು, ದಂಪತಿಗೆ ಮೂರು ಮಕ್ಕಳಿದ್ದಾರೆ. ಮೂರು ತಿಂಗಳ ಹಿಂದಷ್ಟೇ ಅಂಜಲಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ತಮಿಳುಸ್ವೆಲ್ವನ್‌ ಸತ್ಯಾ ಜತೆ 3 ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ಆಕೆಯೊಂದಿಗೆ ಬೇರೆಡೆ ಸಂಸಾರ ನಡೆಸುತ್ತಿದ್ದ. ಈಕೆಗೂ ಇಬ್ಬರು ಮಕ್ಕಳಿದ್ದು, ಈ ವಿಚಾರ ಅಂಜಲಿಗೆ ಗೊತ್ತಿರಲಿಲ್ಲ. ಅಂಜಲಿ ಮೃತಪಟ್ಟ ಬಳಿಕ ಸತ್ಯಾಳನ್ನು ಮನೆಗೆ ಕರೆ ತಂದಿದ್ದ. ಸತ್ಯಾ ತನ್ನ ಇಬ್ಬರು ಮಕ್ಕಳನ್ನು ತವರು ಮನೆಯಲ್ಲಿ ಬಿಟ್ಟಿದ್ದಳು ಎಂದು ಪೊಲೀಸರು ಹೇಳಿದರು.

ಬಳಿಕ ಸತ್ಯಾಳ ಮಾತು ಕೇಳಿ ತನ್ನ ಮೂವರು ಮಕ್ಕಳಿಗೆ ತಮಿಳುಸೆಲ್ವನ್‌ ಚಿತ್ರಹಿಂಸೆ ನೀಡುತ್ತಿದ್ದ. ದಂಪತಿಯು ಮಕ್ಕಳ ಬಾಯಿಗೆ ಬಟ್ಟೆ ಕಟ್ಟಿ, ಚಾಕುವನ್ನು ಕಾಯಿಸಿ ಭುಜ, ಮೊಣಕೈ, ಪಾದಗಳಿಗೆ ಸುಟ್ಟಿದ್ದಾರೆ. ಎಕ್ಸಾ ಬ್ಲೇಡ್‌ನಿಂದ ಚರ್ಮ ಕೊಯ್ದು, ಸೂðಡ್ರೈವರ್‌ನಿಂದ ಚುಚ್ಚುತ್ತಿದ್ದರು ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆಂದು ಪೊಲೀಸರು ತಿಳಿಸಿದರು.

ಸ್ಥಳೀಯರಿಂದ ಪ್ರಕರಣ ಬೆಳಕಿಗೆ : ಮಕ್ಕಳು ಸ್ವೆಟರ್‌ ಹಾಕಿಕೊಂಡು ಓಡಾಡುತ್ತಿದ್ದರು. ಅನುಮಾನಗೊಂಡು ಸ್ಥಳೀಯರು ಸ್ವೆಟರ್‌ ಬಿಚ್ಚಿದಾಗ ಸುಟ್ಟ ಗಾಯಗಳಿದ್ದವು. ಈ ನಡುವೆ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಮೂವರು ಮಕ್ಕಳಿಗೆ ಬರೆ ಎಳೆದು ಕ್ರೌರ್ಯ ಮೆರೆದಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.


Spread the love

About Laxminews 24x7

Check Also

ಪ್ರತಿ ಟನ್ ಕಬ್ಬಿಗೆ​​ ಹೆಚ್ಚುವರಿ 50 ರೂ. ಕೊಡಲು ಸಾಧ್ಯವಿಲ್ಲ: ಸಕ್ಕರೆ ಮಿಲ್ಸ್ ಸಂಘಟನೆ ಅಧ್ಯಕ್ಷ

Spread the loveಬೆಂಗಳೂರು: ಪ್ರತಿ ಟನ್ ಕಬ್ಬಿಗೆ 3,200 ರೂ.‌ ಕೊಡಲು ಮಾತ್ರ ಸಾಧ್ಯ. 3,250 ರೂ. ಕೊಡುವುದು ಸಾಧ್ಯವಿಲ್ಲ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ