ಗೋಕಾಕ: ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಪೆಟ್ರೊಲ್ ಡೀಸೆಲ್ ಬೆಲೆಯನ್ನು ಏರಿಸುತ್ತಲೆ ಇದೆ ಇದಕ್ಕೆ ರಾಜ್ಯಾದ್ಯಂತ ಕಾಂಗ್ರೇಸ್ ಪಕ್ಷದ ನಾಯಕರು ಪ್ರತಿಭಟನೆ ಗಳನ್ನ ಮಾಡುತ್ತಾ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.
ಇಂದು ಗೋಕಾಕ ನಗರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿ ಕೊಂಡಿದ್ದು ಜನರು ಕೂಡ ಇದಕ್ಕೆ ಬೆಂಬಲ ನೀಡಿದ್ದಾರೆ.
ಇನ್ನು ನರೇಂದ್ರ ಮೋದಿಯನ್ನ ವಿಭಿನ್ನ ರೀತಿಯಲ್ಲಿ ಟ್ರೊಲ್ ಕೂಡ ಮಾಡಿದ್ದಾರೆ.
ಪೆಟ್ರೊಲ್ ಡೀಸೆಲ್ ಬೆಲೆ ಹೆಚ್ಚಳವಾಗುವ ಹಿನ್ನಲೆಯಲ್ಲಿ ಪ್ರತಿಯೊಂದರ ಬೆಲೆ ಏರಿಕೆ ಆಗುತ್ತಿದೆ ಇದರೊಂದಗೆ ಜನ್ ಸಾಮಾನ್ಯರ ಪರಿಸ್ಥಿತಿ ಕೂಡ ತುಂಬಾ ಹದಗೆಟ್ಟು ಹೋಗಿದ್ದು ಸಂಕಷ್ಟ ದಲ್ಲಿದ್ದಾರೆ ಇಂತ ಪರಿಸ್ಥಿಯಲ್ಲಿ ಈ ತರ ಬೆಲೆ ಏರಿಕೆ ಜನರಿಗೆ ತುಂಬಾ ತೊಂದರೆ ಯಾಗುತ್ತೆ ಎಂದು ಸತೀಶ್ ಜಾರಕಿಹೊಳಿ ಅವರು ಕೂಡ ಮಾತ ಮಾಡಿದರು.
ಇನ್ನು ನಗರ ಪ್ರದೇಶ, ಸೇರಿ ತಾಲೂಕು,ಹಾಗೂ ಜಿಲ್ಲಾ ಮಟ್ಟದಲ್ಲಿ ಕೂಡ ನಾವು ಪ್ರತಿಭಟಿಸಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
Laxmi News 24×7