ಶಿವಮೊಗ್ಗ : ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೂನ್ 16 ರಿಂದ ಮೂರು ದಿನ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಕ್ಯಾಬಿನೆಟ್ ಸಚಿವರು, ಕೋರ್ ಕಮಿಟಿ ಸದಸ್ಯರು, ಶಾಸಕರ ಜೊತೆ ಸಭೆ ನಡೆಸಲಿದ್ದಾರೆ. ಶಾಸಕರು ತಮ್ಮ ಅಭಿಪ್ರಾಯ ಹೇಳಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಹೇಳುವವರು, ಕೇಳುವವರು ಇದ್ದಾರೆ, ಇದುವೆ ಬಿಜೆಪಿ ವಿಶೇಷತೆ ಎಂದು ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಪರಿಸ್ಥಿತಿ ಈಗ ಹೇಗಾಗಿದೆ? ಎಂಬ ವಿಚಾರವಾಗಿ ಮಾತನಾಡಿದ ಅವರು, ಆರ್ಟಿಕಲ್ 370ಯನ್ನು ಹಿಂದಕ್ಕೆ ತರುತ್ತೇವೆ ಅನ್ನುತ್ತಾರೆ ದಿಗ್ವಿಜಯ ಸಿಂಗ್. ದಿಗ್ವಿಜಯ ಸಿಂಗ್ ಅವರದ್ದು ರಾಷ್ಟ್ರದ್ರೋಹದ ಹೇಳಿಕೆ. ವಯಸ್ಸಾದ ಗೋವುಗಳನ್ನು ಕಡಿಯಬಹುದು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಸಿದ್ದರಾಮಯ್ಯ ಗೋ ಪೂಜೆನೂ ಮಾಡ್ತೀವಿ ಅಂತಾರೆ , ಗೋವುಗಳನ್ನು ಕಡಿಯುತ್ತೇವೆ ಎಂದು ಹೇಳುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಸಿದ್ದರಾಮಯ್ಯ ಹೇಳಿಕೆಗೆ ಒಪ್ಪಿಗೆ ಇದೆ, ಅವರ ಜೊತೆ ಹೋಗ್ತೀವಿ ಅಂತಾರೆ ಜಮೀರ್ ಅಹಮದ್. ಸಿದ್ದರಾಮಯ್ಯ, ಜಮೀರ್, ದಿಗ್ವಿಜಯ ಸಿಂಗ್ ಪಾಕಿಸ್ತಾನದ ಪರ ಇರುವ ಜನರು. ಗೋವು, ದೇಶದ ಭೂಮಿ ಬಗ್ಗೆ ಇವರಿಗೆ ಗೌರವ ಇಲ್ಲ. ದೇಶದಲ್ಲಿ ಹಿಂದೂ, ಮುಸ್ಲಿಮರು ಶಾಂತಿಯಿಂದ ಇರಬೇಕು ಅನ್ನೋ ಕಲ್ಪನೆ ಇಲ್ಲ. ಯಾರು ಏನು ಬೇಕಾದರೂ ಹೇಳಿಕೆ ಕೊಡಬಹುದಾದ ಪಕ್ಷ ಕಾಂಗ್ರೆಸ್. ದಿಗ್ವಿಜಯ ಸಿಂಗ್ ಹೇಳಿಕೆಯನ್ನ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಒಪ್ಪುತ್ತಾರಾ? ಬಿಜೆಪಿಯಲ್ಲಿ ಹೇಳುವವರು, ಕೇಳುವವರು ಇದ್ದಾರೆ ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
Laxmi News 24×7