ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಜೂನ್ 11 ರಿಂದ ಜೂ.14 ರವರೆಗೂ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅವರ ಪ್ರವಾಸದ ವಿವರ ಇಂತಿದೆ.
ಜೂ.11 ಹಾಗೂ 13 ರಂದು ಗೋಕಾಕನಲ್ಲಿ ಇರಲಿದ್ದಾರೆ. 14 ರಂದು ಜಿಲ್ಲೆಯ ವಿವಿಧ ತಾಲೂಕು ಆಸ್ಪತ್ರೆ ಹಾಗೂ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.
14 ರಂದು ಮಧ್ಯಾಹ್ನ 12ಕ್ಕೆ ಅಥಣಿ ತಾಲೂಕು ಆಸ್ಪತ್ರೆ, ಮಧ್ಯಾಹ್ನ 2 ಗಂಟೆಗೆ ಅಥಣಿ ತಾಲೂಕಿನ ಐನಾಪುರ, ಸಂಜೆ 4ಕ್ಕೆ ರಾಯಬಾಗ ತಾಲೂಕಿನ ಕುಡಚಿ ಹಾಗೂ ಸಂಜೆ 6ಕ್ಕೆ ರಾಯಬಾಗ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲನೆ ಮಾಡಲಿದ್ದಾರೆ.
Laxmi News 24×7