Breaking News

ರಾಜೀನಾಮೆ ನೀಡಲು ಯಡಿಯೂರಪ್ಪಗೆ ಆರ್ ಎಸ್‌ಎಸ್ ಮನವೊಲಿಸಿದೆ: ವಿಶ್ವನಾಥ್

Spread the love

ಮೈಸೂರು: ದೆಹಲಿ ಹೇಳಿದಂತೆ ಕೇಳುವುದು ಮೊದಲಿಂದಲೂ ಇರುವ ಪರಿಪಾಠ. ರಾಜ್ಯದಲ್ಲಿ ಪರ್ಯಾಯ ನಾಯಕರನ್ನು ಮಾಡುತ್ತಾರೆ ಎಂದಿರುವುದು ಸ್ವಾಗತಾರ್ಹ. ನನಗೆ ಪರ್ಯಾಯ ನಾಯಕರಿದ್ದಾರೆ ಎಂದು ಹೇಳಿರುವುದು ಯಡಿಯೂರಪ್ಪರ ದೊಡ್ಡ ಮಾತು ಎಂದು ಎಂಎಲ್ ಸಿ ವಿಶ್ವನಾಥ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜನ, ರಾಜಕೀಯ ನಾಯಕರು ಬಹಳ ವಿಶ್ವಾಸ ಇಟ್ಟುಕೊಂಡು ಬಂದಿದ್ದಾರೆ. ಯಡಿಯೂರಪ್ಪ ಈಗಿನ ಪರಿಸ್ಥಿತಿಯಲ್ಲಿ ರಾಜ್ಯದ ಹಿತಕ್ಕಾಗಿ ದೆಹಲಿ ನಾಯಕರ ಮಾತು ಕೇಳಿ ಕೆಳಗಿಳಿಯುತ್ತೇನೆ ಎಂದಿರುವುದನ್ನು ನಾನು ಸ್ವಾಗತ ಮಾಡುವೆ ಎಂದಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ವಿಚಾರ ಬಹಳ ದಿನದಿಂದ ನಡೆಯುತ್ತಿತ್ತು. ನಾಡಿನ ಹಿತದಿಂದ ಯಡಿಯೂರಪ್ಪ ರಾಜೀನಾಮೆ ಕೊಡುತ್ತೇನೆ ಎಂದಿರುವುದು ನಾಡಿನ ಜನ ಸ್ವಾಗತ ಮಾಡುತ್ತದೆ. ಆರ್ ಎಸ್‌ಎಸ್ ಕೂಡ ಅವರ ಮನ ಒಲಿಸಿದೆ ಎಂದರು.

ಸೈನಿಕ ದೆಹಲಿಗೆ ಹೋಗಿ ಬಂದರೂ ಅಂತ ಅವರು ರಾಜೀನಾಮೆ ಕೊಡುತ್ತಿಲ್ಲ. ಯಾರೋ ಮಾತನಾಡಿದರೂ ಎಂದು ಅವರು ರಾಜೀನಾಮೆ ಕೊಡುತ್ತಿಲ್ಲ. ಅವರಿಗೆ ವಯಸ್ಸಿನ ಕಾರಣವಿದೆ. ಬಿಜೆಪಿಯಲ್ಲಿ ವಯಸ್ಸಿನ ಲಕ್ಷ್ಮಣ ರೇಖೆ ಇದೆ. ಆದರೆ ಯಡಿಯೂರಪ್ಪ ಅವರಿಗೆ ಒಂದು ವಿನಾಯತಿ ಕೊಟ್ಟಿದ್ದರು. ಅವರ ವಯಸ್ಸು, ಆರೋಗ್ಯ ನಾಡಿನ ಅಭಿವೃದ್ಧಿ, ಆಡಳಿತದ ಮೇಲಿನ ಪರಿಣಾಮ ನೋಡಿ ಆರ್ ಎಸ್ ಎಸ್, ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ. ನನಗೆ ಯಡಿಯೂರಪ್ಪ ಮೇಲೆ ಅನುಕಂಪವಿದೆ. ಅವರ ವಯಸ್ಸಿನ ಕಾರಣ ಮಾತನಾಡುತ್ತಿದ್ದೇನೆ. ಅವರು ಅದಕ್ಷರು, ಅಪ್ರಾಮಾಣಿಕರು ಎಂದಲ್ಲ. ರಾಜೀನಾಮೆ ಕೊಟ್ಟರು ತೆಗೆದುಕೊಂಡರು ಎನ್ನುವುದಲ್ಲ, ಪಕ್ಷದ ಹಿತದೃಷ್ಟಿ ಮುಖ್ಯ ಅಷ್ಟೇ ಎಂದು ವಿಶ್ವನಾಥ್ ಹೇಳಿದರು.

ಕ್ಯಾಪ್ಟನ್ ಬದಲಾಗುತ್ತಿದ್ದಾರೆ ಆಟಗಾರರು ಬದಲಾಗಬೇಕು. ಹೊಸ ಕ್ಯಾಪ್ಟನ್ ತನಗೆ ಬೇಕಾದ ಆಟಗಾರರನ್ನು ಅವರೇ ಆಯ್ಕೆ ಮಾಡಿಕೊಳ್ಳುತ್ತಾರೆ. ದೊಡ್ಡ ಬುದ್ದಿವಂತಿಕೆ, ಎಲ್ಲರನ್ನೂ ಪ್ರೀತಿಸುವ, ಸಾಮಾನ್ಯ ಜ್ಞಾನ ಇರುವ, ಅಧಿಕಾರಿಗಳಿಗೆ ಅಂಕುಶ ಹಾಕುವವರು, ರಾಜ್ಯದ ಅಭಿವೃದ್ಧಿ ಬಗ್ಗೆ ಗಮನಹರಿಸುವ ನಾಯಕ‌ ಬೇಕು. ಸದ್ಯ ಪರಿಸ್ಥಿತಿ ಕ್ಲಿಷ್ಟಕರವಾಗಿದೆ. ಇದೆಲ್ಲವನ್ನೂ ನಿಭಾಯಿಸುವ ನಾಯಕ ಬೇಕು ಎಂದರು.

ಪರ್ಯಾಯ ನಾಯಕರು ಇದ್ದಾರೆ ಎನ್ನುವುದು ಬಹಳ ದೊಡ್ಡ ಮಾತು. ಈಗ ಎಲ್ಲರನ್ನೂ ಜೊತೆಗೆ ಸೇರಿಸಿಕೊಂಡು ಹೋಗುವ ನಾಯಕ ಬೇಕು. ಜಾತಿ ರಾಜಕಾರಣ ಇದ್ದೇ ಇದೆ. ಸಿದ್ದರಾಮಯ್ಯ ಕುರುಬ ಸಮುದಾಯದಿಂದ ಮೇಲೆ ಬಂದಿದ್ದಾರೆ. ದೇವೇಗೌಡರು ಒಕ್ಕಲಿಗ ಸಮುದಾಯದಿಂದ ಮೇಲೆ ಬಂದಂತೆ ಯಡಿಯೂರಪ್ಪ ಬಲಿಷ್ಠ ಸಮುದಾಯದಿಂದ ಮೇಲೆ ಬಂದಿದ್ದಾರೆ. ಈ ಬಾರಿ ಮುಖ್ಯಮಂತ್ರಿ ಮಾಡುವಾಗ ವೀರಶೈವ ಸಮುದಾಯಕ್ಕೆ ಮೊದಲ ಆದ್ಯತೆ ಕೊಡಬೇಕು‌. ವೀರಶೈವರಲ್ಲೂ ಪಂಚಮಸಾಲಿ ಲಿಂಗಾಯತರನ್ನು ಪರಿಗಣಿಸುವುದು ಒಳ್ಳೆಯದು ಎಂದು ವಿಶ್ವನಾಥ್ ಹೇಳಿದರು.


Spread the love

About Laxminews 24x7

Check Also

ಕಿರಾವಾಳೆಯ ಗೋರಕ್ಷನಾಥ ಮಠದಲ್ಲಿ ಕಳ್ಳತನ

Spread the love ಕಿರಾವಾಳೆಯ ಗೋರಕ್ಷನಾಥ ಮಠದಲ್ಲಿ ಕಳ್ಳತನ ಖಾನಾಪೂರ ತಾಲೂಕಿನ ಗುಂಜಿ ಬಳಿಯಿರುವ ಕಿರಾವಾಳೆಯ ಪ್ರಸಿದ್ಧ ಗೋರಕ್ಷನಾಥ ಮಠದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ