Breaking News

ಮಾವುತನೊಬ್ಬನ ಅಂತ್ಯಕ್ರಿಯೆಯ ಸ್ಥಳಕ್ಕೆ ಧಾವಿಸಿದ ಗಜರಾಜ, ಕಣ್ಣೀರ ವಿದಾಯ ನೀಡಿರುವ ಹೃದಯ ವಿದ್ರಾವಕ ಘಟನೆ

Spread the love

ಕೊಟ್ಟಾಯಂ: ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಮಾವುತನೊಬ್ಬನ ಅಂತ್ಯಕ್ರಿಯೆಯ ಸ್ಥಳಕ್ಕೆ ಧಾವಿಸಿದ ಗಜರಾಜ, ಕಣ್ಣೀರ ವಿದಾಯ ನೀಡಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.

ಕಳೆದ 25 ವರ್ಷಗಳಿಂದ ಈ ಆನೆಯ ಪರಿಪಾಲನೆಯನ್ನು ಮಾವುತ ದಾಮೋದರ್ ನಾಯರ್ ನೋಡಿಕೊಳ್ಳುತ್ತಿದ್ದರು. 74 ವರ್ಷದ ದಾಮೋದರ್ ಇಹಲೋಕ ತ್ಯಜಿಸಿದಾಗ ಮೂಕ ಪ್ರಾಣಿಯು ಮಾವುತನಿಗೆ ಭಾವನಾತ್ಮಕ ಅಶ್ರುತರ್ಪಣಗೈದ ವಿಡಿಯೊ ಎಂಥಹ ಕಲ್ಲು ಹೃದಯವನ್ನು ಕರಗಿಸಿಬಿಡುತ್ತದೆ.

ಬ್ರಹದತ್ತನ್ ಎಂಬ ಆನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾವುತನ ಮೇಲೆ ಆನೆ ತೋರಿಸಿರುವ ಪ್ರೀತಿಗೆ ಸ್ಥಳೀಯ ನಿವಾಸಿಗಳು ಸೇರಿದಂತೆ ಎಲ್ಲರೂ ಮನಸೋತಿದ್ದಾರೆ.

ಮನೆಯಲ್ಲಿ ಪಾರ್ಥಿವ ಶರೀರವನ್ನು ನೋಡಲು ಬಂದ ಆನೆ ಕಣ್ಣೀರಿಟ್ಟಿತ್ತಲ್ಲದೆ ಸೊಂಡಿಲಿನಿಂದ ಮೃತದೇಹವನ್ನು ಸ್ಪರ್ಶಿಸಿ ಮೇಲಕ್ಕೆ ಎತ್ತಿಹಿಡಿದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

 

https://twitter.com/ParveenKaswan/status/1400734538079162368?ref_src=twsrc%5Etfw%7Ctwcamp%5Etweetembed%7Ctwterm%5E1400734538079162368%7Ctwgr%5E%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Fkannada%2Fprajavani-epaper-praj%2Fmrutamaavutanigegajaraajanakanniravidaayavairalvidiyo-newsid-n286987782

 


Spread the love

About Laxminews 24x7

Check Also

ಬೈಕ್ – ಹಾಲಿನ ವಾಹನ ನಡುವೆ ಡಿಕ್ಕಿ; ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

Spread the loveಶಿವಮೊಗ್ಗ: ಹಾಲಿನ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ