ಹುಬ್ಬಳ್ಳಿ: ಮಹಾಮಾರಿ ಕರೊನಾ ಮರಣಮೃದಂಗ ಬಾರಿಸುತ್ತಲೇ ಇದೆ. ಲೆಕ್ಕವಿಲ್ಲದಷ್ಟು ಸೋಂಕಿತರಿಗೆ ಸಮಯಕ್ಕೆ ಸರಿಯಾಗಿ ಆಸ್ಪತ್ರೆ ಬಳಿ ಬೆಡ್, ಆಕ್ಸಿಜನ್, ವೆಂಟಿಲೇಟರ್ ಬೆಡ್, ಔಷಧ, ರೆಮಿಡಿಸಿವರ್ ಇಂಜಕ್ಷನ್ ಸಿಗದೆ ಸಾಯುತ್ತಿದ್ದಾರೆ. ಇಂತಹ ಸಂಕಷ್ಟ ಕಾಲದಲ್ಲೂ ಇಲ್ಲೊಂದು ಜೋಡಿ ಅಮಾನವೀಯವಾಗಿ ವರ್ತಿಸಿ ಜೈಲು ಸೇರಿದ್ದಾರೆ.
ಹುಬ್ಬಳ್ಳಿಯ ವೆಂಕಟೇಶ್ವರ ಕಾಲನಿಯ ಸಿದ್ದನಗೌಡಾ ಪಾಟೀಲ್ ಮತ್ತು ವಿನಾಯಕನಗರದ ರಿಯಾ ಬಂಧಿತರು. ಸುಚಿರಾಯು ಆಸ್ಪತ್ರೆಯಲ್ಲಿ ಕ್ಲೀನರ್ ಆಗಿ ಸಿದ್ದನಗೌಡ ಕೆಲಸ ಮಾಡುತ್ತಿದ್ದ. ಹುಬ್ಬಳ್ಳಿ ನಗರದ ತತ್ವದರ್ಶಿ ಆಸ್ಪತ್ರೆಯ ನರ್ಸ್ ರಿಯಾ. ಪ್ರೇಮಿಗಳಾದ ಇವರಿಬ್ಬರೂ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡಬೇಕಿದ್ದ ರೆಮಿಡಿಸಿವರ್ ಇಂಜೆಕ್ಷನ್ಗಳನ್ನು ಕದ್ದು ಅಕ್ರಮವಾಗಿ ಹೆಚ್ಚಿನ ದರಕ್ಕೆ ಮಾರಲು ಹೋಗಿ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಹುಬ್ಬಳ್ಳಿಯ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7