Breaking News

ಲಸಿಕೆ ಮ್ಯಾಜಿಕ್: ಕೊರೊನಾ ನಿಯಂತ್ರಿಸುವಲ್ಲಿ​​​ ಪರಪ್ಪನ ಅಗ್ರಹಾರ ಅಧಿಕಾರಿಗಳು ಸಕ್ಸಸ್​​

Spread the love

ಬೆಂಗಳೂರು: ಪರಪ್ಪನ ಅಗ್ರಹಾರದ ಕೈದಿಗಳಿಗೆ ಕಳೆದ ಒಂದು ತಿಂಗಳಿನಿಂದ ಹಂತ ಹಂತವಾಗಿ ಕೊರೊನಾ ಲಸಿಕೆ ನೀಡಲಾಗ್ತಿದೆ. ಈಗಾಗಲೇ 2500ಕ್ಕೂ ಹೆಚ್ಚು ಕೈದಿಗಳಿಗೆ ಮೊದಲ ಡೋಸ್​ ವ್ಯಾಕ್ಸಿನೇಷನ್​ ಮುಗಿದಿದೆ. ಇದರ ಬೆನ್ನಲ್ಲೇ ಜೈಲಿನಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಿದೆ ಅಂತ ಹೇಳಲಾಗ್ತಿದೆ.

ಜೈಲಿನಲ್ಲಿ ನೂರಕ್ಕೂ ಹೆಚ್ಚಿದ್ದ ಕೊರೊನಾ ಸೋಂಕಿನ ಪ್ರಮಾಣ ಈಗ ದಿಢೀರ್​ ಇಳಿಕೆಯಾಗಿದೆ. ಕೇವಲ 12 ಮಂದಿ ವಿಚಾರಣಾಧೀನ ಕೈದಿಗಳು ಮಾತ್ರ ಈಗ ಸೋಂಕಿತರಾಗಿದ್ದಾರೆ ಅಂತ ತಿಳಿದುಬಂದಿದೆ. ಜೈಲಧಿಕಾರಿಗಳು ಕೈಗೊಂಡ ಕ್ರಮಗಳು ಸೋಂಕು ನಿಯಂತ್ರಿಸಲು ನೆರವಾಗಿದೆ.

 

ಸಾಂಕ್ರಾಮಿಕ ಹರಡುವ ಸಾಧ್ಯತೆಯ ಹಿನ್ನೆಲೆ ಜೈಲಿಗೆ ವಿಸಿಟರ್ಸ್ ಭೇಟಿಗೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ. ಆರೋಪಿಗಳನ್ನ ಕರೆತರುವ ಪೊಲೀಸರಿಗೂ ಆರ್​​ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಒಟ್ಟು 4783 ಕೈದಿಗಳು ಪರಪ್ಪನ ಅಗ್ರಹಾರದಲ್ಲಿದ್ದು, 530 ಮಂದಿ 45 ವರ್ಷ ಮೇಲ್ಪಟ್ಟರಾಗಿದ್ದಾರೆ. ಈಗ 2500ಕ್ಕೂ ಹೆಚ್ಚು ಕೈದಿಗಳಿಗೆ ಮೊದಲ ಡೋಸ್​ ಲಸಿಕೆ ನೀಡಲಾಗಿದೆ. ಉಳಿದವರಿಗೆ ನಾಳೆ ವ್ಯಾಕ್ಸಿನೇಷನ್‌ ಮಾಡಲು ಜೈಲಾಧಿಕಾರಿಗಳು ಸಿದ್ದತೆ‌ ನಡೆಸಿದ್ದಾರೆ.

 

ಈ ಮೂಲಕ ಜೈಲಲ್ಲಿ ಸೋಂಕಿನ ಪ್ರಮಾಣ ಕಂಟ್ರೋಲ್​ಗೆ ತರುವಲ್ಲಿ ಜೈಲಧಿಕಾರಿಗಳು ಯಶಸ್ವಿ‌‌ಯಾಗಿದ್ದಾರೆ.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ