ಬೆಳಗಾವಿ – ಇಲ್ಲಿಯ ಆರ್ ಎಸ್ಎಸ್ನ ಜನಸೇವಾ ಕಲ್ಯಾಣ ಟ್ರಸ್ ಮೊಬೈಲ್ ಕೋವಿಡ್ ಕೇರ್ ಸೆಂಟರ್ ಆರಂಭಿಸಿದ್ದು, ಬೆಳಗಾವಿಜನರಿಗೆ ವಿಶಿಷ್ಷ ಸೇವೆ ಸಲ್ಲಿಸಲು ಮುಂದಾಗಿದೆ.
ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸೋಂಕಿತರ ಮನೆಗೇ ತೆರಳುವಕೋವಿಡ್ ಕೇರ್ ಸಂಟರ್ ಅಲ್ಲಿಯೆ ರೋಗಿಯನ್ನು ಪರೀಕ್ಷೆಗೊಳಪಡಿಸಲಿದೆ. ಓರ್ವ ಎಂಬಿಬಿಎಸ್ ವೈದ್ಯರು, ಓರ್ವ ನರ್ಸ್, ಸ್ವಯಂ ಸೇಲಕ ಹಾಗೂ ವ್ಯಾನ್ ಚಾಲಕ ಈ ಮೊಬೈಲ್ ಕೋವಿಡ್ ಕೇರ್ ಸೆಂಟರ್ ನಲ್ಲಿರಲಿದ್ದಾರೆ. ಇದರಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಕೂಡ ಇರಲಿದೆ.

ಡಾ.ಕಿಶೋರ್ ಮತ್ತು ಡಾ.ಪ್ರವೀಣ್ ಈ ಮೊಬೈಲ್ ಕೇರ್ ಸಂಂಟರ್ ನಲ್ಲಿ ಸೇವೆ ಸಲ್ಲಿಸಲಿದ್ದಾರೆ.
ಸೋಂಕಿತರನ್ನು ತಪಾಸಣೆ ನಡೆಸಿ ಅವರಿಗೆ ಅಗತ್ಯವಾದ ಚಿಕಿತ್ಸೆಯ ಕುರಿತು ಸಲಹೆ ನೀಡಲಿದ್ದಾರೆ. ಹೋಮ್ ಐಸೋಲೇಶನ್ ನಲ್ಲಿರಬಹುದೋ, ಕೋವಿಡ್ ಕೇರ್ ಸೆಂಟರ್ ನಲ್ಲಿರಬೇಕಾಗುತ್ತದೆಯೋ ಅಥವಾ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆಯೋ ಎನ್ನುವ ಸಲಹೆ ನೀಡುತ್ತಾರೆ.

ಇದರಿಂದಾಗಿ ಸೋಂಕಿತರು ಅನಗತ್ಯವಾಗಿ ಗಾಭರಿಯಾಗುವುದು ತಪ್ಪುತ್ತದೆ. ಸ್ಪಷ್ಟ ನಿರ್ಧಾರಕ್ಕೆ ಬರಲು ಅವಕಾಶವಾಗುತ್ತದೆ. ಗುರುವಾರ ಮೊದಲ ದಿನವೇ ಸುಮಾರು 10 ಮನೆಗಳಿಗೆ ತೆರಳಿ ಸೋಂಕಿತರ ತಪಾಸಣೆ ನಡೆಸಲಾಗಿದೆ.
ಅಗತ್ಯವುಳ್ಳವರು 6360895701 ಸಂಖ್ಯೆ ಸಂಪರ್ಕಿಸಬಹುದು
Laxmi News 24×7