Breaking News

ಇಂಜಿನಿಯರಿಂಗ್ ಪದವಿ ಸೇರಿದ್ದು ಬಿಟ್ಟರೆ ಬರೋಬ್ಬರಿ 20 ಕ್ಕೂ ಹೆಚ್ಚು ವಿಷಯಗಳಲ್ಲಿ ಬ್ಯಾಕ್ ಲಾಕ್ ಇಟ್ಟುಕೊಂಡಿದ್ದಾಳೆ! ಇಂಜಿನಿಯರಿಂಗ್ ಪದವಿಯೂ ಮುಗಿಸಿರಲಿಲ್ಲ.

Spread the love

ಬೆಂಗಳೂರು, : ಇಂಜಿನಿಯರಿಂಗ್ ಪದವೀಧರೆಯಾಗಿದ್ದ ಯುವತಿಗೆ ಕೆಲಸದ ಅಮಿಷೆ ಒಡ್ಡಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸಂತ್ರಸ್ತ ಯುವತಿ ಹೊರಸಿರುವ ಆರೋಪ. ವಿಪರ್ಯಾಸವೆಂದರೆ ಆಕೆ ಇಂಜಿನಿಯರಿಂಗ್ ಪದವಿ ಸೇರಿದ್ದು ಬಿಟ್ಟರೆ ಬರೋಬ್ಬರಿ 20 ಕ್ಕೂ ಹೆಚ್ಚು ವಿಷಯಗಳಲ್ಲಿ ಬ್ಯಾಕ್ ಲಾಕ್ ಇಟ್ಟುಕೊಂಡಿದ್ದಾಳೆ! ಇಂಜಿನಿಯರಿಂಗ್ ಪದವಿಯೂ ಮುಗಿಸಿರಲಿಲ್ಲ. ಇನ್ನು ಸರ್ಕಾರಿ ಕೆಲಸ ಕೇಳಿಕೊಂಡು ಸಂತ್ರಸ್ತ ಯುವತಿ ಹೋಗಿದ್ದು ಯಾಕೆ?
ಜಲ ಸಂಪನ್ಮೂಲ ಖಾತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದ ಕೇಂದ್ರ ಬಿಂದು ಸಂತ್ರಸ್ತ ಯುವತಿ. ಆಕೆ ನೀಡಿದ ದೂರಿನಲ್ಲಿ ನಾನು ಇಂಜಿನಿಯರಿಂಗ್ ಪದವೀಧರೆ. ನಾನು ಕೆಲಸ ಕೇಳಿಕೊಂಡು ಹೋದರೆ, ಲೈಂಗಿಕವಾಗಿ ಬಳಸಿಕೊಂಡರು.

ನನ್ನ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಿ ಸ್ವತಃ ಸಂತ್ರಸ್ತ ಯುವತಿ ದೂರು ನೀಡಿದ್ದಳು. ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಮುಂದೆಯೇ ಹೇಳಿಕೆ ದಾಖಲಿಸಿದ್ದಳು. ಸಂತ್ರಸ್ತ ಯುವತಿ ಪೋಷಕರೂ ಕೂಡ ತನ್ನ ಮಗಳು ಇಂಜಿನಿಯರಿಂಗ್ ಪದವೀಧರೆ, ಬೆಂಗಳೂರಿನಲ್ಲಿ ಒಳ್ಳೆ ಕೆಲಸದಲ್ಲಿ ಇದ್ದಾಳೆ ಎಂದೇ ಭಾವಿಸಿದ್ದರು. ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಇಂಜಿನಿಯರಿಂಗ್ ಪದವಿಯೇ ಮಾಡಿಲ್ಲ. ಆಕೆ ಇಂಜಿನಿಯರಿಂಗ್ ಪದವಿಗೆ ಸೇರಿದರೂ, 20 ಕ್ಕೂ ಹೆಚ್ಚು ವಿಷಯಗಳಲ್ಲಿ ನಪಾಸು ಆಗಿದ್ದಾಳೆ. ಹೀಗಾಗಿ ಬೆಂಗಳೂರಿನಲ್ಲಿ ಟೆಲಿ ಕಾಲರ್ ಕೆಲಸ ಮಾಡುತ್ತಿದ್ದಳು.

ಪದವಿಯನ್ನೂ ಮಾಡದೇ ಸಂತ್ರಸ್ತ ಯುವತಿ ಮೊದಲು ಡ್ರೋಗ್ ಪ್ರಾಜೆಕ್ಟ್ ಹೆಸರಿನಲ್ಲಿ. ಕನಿಷ್ಠ ಪದವಿಯನ್ನೂ ಪಡೆಯದ ಈಕೆ ಸರ್ಕಾರಿ ಕೆಲಸ ಕೊಡಿಸಿ ಎಂಬ ನೆಪದಲ್ಲಿ ನಿರಂತರವಾಗಿ ಸಚಿವರನ್ನು ಭೇಟಿ ಮಾಡಿದ್ದಾರೆ. ಇಬ್ಬರ ನಡುವೆ ಅನೇಕ ದೂರವಾಣಿ ಕರೆಗಳ ಸಂಭಾಷಣೆ ನಡೆದಿದೆ. ಇಬ್ಬರೂ ಪರಸ್ಪರ ವಿಡಿಯೋ ಕಾಲ್ ಮಾಡಿಕೊಂಡಿದ್ದಾರೆ. ಸಂತ್ರಸ್ತ ಯುವತಿ ಸ್ವಯಂ ಪ್ರೇರಿತವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕರೆ ಮಾಡಿ ಅಂಗಾಂಗ ಪ್ರದರ್ಶನ ಮಾಡಿರುವುದಕ್ಕೆ ಎಸ್‌ಐಟಿ ತನಿಖೆಯಲ್ಲಿ ಮಹತ್ವದ ಸಾಕ್ಷಾಧಾರಗಳು ಸಿಕ್ಕಿವೆ ಎನ್ನಲಾಗಿದೆ.
ಹೀಗಿರುವುವಾಗ ಕೆಲಸ ಕೊಡಿಸುವ ಪ್ರಮೇಯವೇ ಬಂದಿಲ್ಲ.

ಡ್ರೋನ್ ಪ್ರಾಜೆಕ್ಟ್ ಹೆಸರಿನಲ್ಲಿ ಪರಿಚಯಿಸಿಕೊಂಡು, ಸರ್ಕಾರಿ ಕೆಲಸದ ಹೆಸರಿನಲ್ಲಿ ಜಾರಕಿಹೊಳಿ ಸಂಪರ್ಕ ಮುಂದುವರೆಸಿದ್ದಳು. ಹನಿಟ್ರ್ಯಾಪ್ ಮಾಡುವ ಸಲುವಾಗಿಯೇ ಕೆಲಸದ ಹೆಸರು ಹೇಳಿಕೊಂಡು ಕಾರ್ಯಾಚರಣೆ ನಡೆಸಿದಳಾ ಎಂಬ ಅನುಮಾನ ಇದೀಗ ಹುಟ್ಟುಹಾಕಿದೆ. ಅಚ್ಚರಿ ಸಂಗತಿ ಏನೆಂದರೆ ಸಂತ್ರಸ್ತ ಯುವತಿ ಪೋಷಕರಿಗೆ ಈಕೆಯ ಓದಿನ ಮಾರ್ಜಾಲ ಹೆಜ್ಜೆ ವಿವರ ಗೊತ್ತಿರಲಿಲ್ಲ. ಎಸ್‌ಐಟಿ ತನಿಖೆಯಲ್ಲಿ ಹಲವು ರೋಚಕ ಸಂಗತಿಗಳು ಬೆಳಕಿಗೆ ಬಂದಿವೆ ಎನ್ನಲಾಗಿದೆ.


Spread the love

About Laxminews 24x7

Check Also

ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

Spread the love ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ