Breaking News

ಪ್ರಧಾನಿ ನರೇಂದ್ರ ಮೋದಿಯವರ ಜನಪ್ರೀಯತೆಯ ರೇಟಿಂಗ್ ಕೆಳಮಟ್ಟಕ್ಕೆ ಕುಸಿದಿದೆ : ಸಮೀಕ್ಷೆ

Spread the love

ನವದೆಹಲಿ: ಕರೋನವೈರಸ್ ಸಾಂಕ್ರಾಮಿಕ ರೋಗದ ವಿನಾಶಕಾರಿ ಎರಡನೇ ತರಂಗವನ್ನು ಹತೋಟಿಗೆ ತರಲು ದೇಶವು ತೀವ್ರವಾಗಿ ಹೆಣಗಾಡುತ್ತಿರುವಾಗ, ಪ್ರಧಾನಿ ನರೇಂದ್ರ ಮೋದಿಯವರ ಜನಪ್ರೀಯತೆಯ ರೇಟಿಂಗ್ ಕೆಳಮಟ್ಟಕ್ಕೆ ಕುಸಿದಿದೆ ಎಂದು ಸಮೀಕ್ಷೆಯೊಂದು ಮಂಗಳವಾರ ಹೇಳಿದೆ.

ಕೊರೋನಾ ಬಿಕ್ಕಟ್ಟು ನಿರ್ವಹಿಸುವಲ್ಲಿ ಪ್ರಧಾನಿ ಮೋದಿ ನಾಯಕತ್ವ ವಿಫಲವಾಗಿದ್ದು ಈ ಹಿನ್ನಲೆಯಲ್ಲಿ ಅವರ ಜನಪ್ರಿಯತೆಯ ಗ್ರಾಫ್ ಕುಸಿತವಾಗಿದೆ ಎಂದು ಭಾರತೀಯ ಮತ್ತು ಅಮೆರಿಕದ ಡೇಟಾ ಇಂಟಲಿಜೆನ್ಸಿ ಸಂಸ್ಥೆಯ ಸಮೀಕ್ಷೆ ಹೊರಹಾಕಿದೆ.

2014 ರಲ್ಲಿ ಬಿಜೆಪಿ ಭರ್ಜರಿ ಗೆಲುವಿನೊಂದಿಗೆ ಮೋದಿ ಪ್ರಧಾನಿಯಾಗಿ ಅನೇಕ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದಾಗಿ ಅವರ ಜನಪ್ರಿಯತೆ ಹೆಚ್ಚಾಗಿತ್ತು. 2019 ರ ಲೋಕಸಭೆ ಚುನಾವಣೆಯಲ್ಲಿಯೂ ಪ್ರಚಂಡ ಗೆಲುವು ಸಾಧಿಸಿದ್ದ ಅವರು ಅನೇಕ ಮಹತ್ವದ ನಿರ್ಧಾರಗಳಿಂದ ಜನಪ್ರಿಯರಾಗಿದ್ದರು. ಈ ವರ್ಷ ಜನವರಿಯವರೆಗೆ ಎಲ್ಲವನ್ನು ಹಿಡಿತದಲ್ಲಿ ಇಟ್ಟುಕೊಂಡು ಪ್ರಬಲ ರಾಷ್ಟ್ರೀಯತಾವಾದಿ ನಾಯಕನ ಚಿತ್ರಣವನ್ನು ದೀರ್ಘಕಾಲದಿಂದ ಬೆಳೆಸಿದ್ದ ಪ್ರಧಾನಿ ಮೋದಿಗೆ ಫೆಬ್ರವರಿಯ ನಂತರ ಕೊರೋನಾ ಕಠಿಣ ಸವಾಲು ಒಡ್ಡಿದೆ.

2019 ರಿಂದ ಜನಪ್ರಿಯತೆಯ ರೇಟಿಂಗ್ ನಲ್ಲಿ ಮೋದಿ ಮಂಚೂಣಿಯಲ್ಲಿದ್ದರು. ಆದರೆ, ಇತ್ತೀಚೆಗೆ ಅವರ ಜನಪ್ರಿಯತೆ 22 ಪಾಯಿಂಟ್ ಕುಸಿತ ಕಂಡು ಶೇಕಡ 63ಕ್ಕೆ ಇಳಿದಿದೆ. ಯುಎಸ್ ಸಂಸ್ಥೆಯು ಅವರ ಜನಪ್ರಿಯತೆಯನ್ನು ಪತ್ತೆಹಚ್ಚಲು ಪ್ರಾರಂಭಿಸಿದ ನಂತರದ ಕನಿಷ್ಠ ಮಟ್ಟವಾಗಿದೆ. ಕಳೆದ 7 ವರ್ಷಗಳ ಅವಧಿಯಲ್ಲಿಯೇ ಮೊದಲ ಬಾರಿಗೆ ಮೋದಿ ಜನಪ್ರಿಯತೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ ಎನ್ನಲಾಗಿದೆ.


Spread the love

About Laxminews 24x7

Check Also

ಪ್ರಜಾಪ್ರಭುತ್ವ ಉಳಿವಿಗೆ ದೇಶದ ಜನ ಒಂದಾಗಿ: ಮಲ್ಲಿಕಾರ್ಜುನ ಖರ್ಗೆ

Spread the love ನವದೆಹಲಿ: ಚಳಿಗಾಲದ ಅಧಿವೇಶನದ ವೇಳೆ ಸಂಸತ್ತಿನ ಉಭಯ ಸದನಗಳಿಂದ 146 ಸಂಸದರನ್ನು ಅಮಾನತುಗೊಳಿಸಲಾಗಿದೆ. ಇದು ಕೇಂದ್ರ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ