Breaking News
Home / ಜಿಲ್ಲೆ / ಬೆಂಗಳೂರು / ಯಡಿಯೂರಪ್ಪ ಸರಕಾರಕ್ಕೆ ಕಾಂಗ್ರೆಸ್ ಕೇಳಿದ 10 ಪ್ರಶ್ನೆಗಳು: ಉತ್ತರಿಸುವಿರಾ?

ಯಡಿಯೂರಪ್ಪ ಸರಕಾರಕ್ಕೆ ಕಾಂಗ್ರೆಸ್ ಕೇಳಿದ 10 ಪ್ರಶ್ನೆಗಳು: ಉತ್ತರಿಸುವಿರಾ?

Spread the love

ಬೆಂಗಳೂರು, ಮೇ 20: ಕೋವಿಡ್ ನಿರ್ವಹಣೆ, ರಾಜ್ಯದ ಸಂಸದರ ಅಸಾಮರ್ಥ್ಯ ಸೇರಿದಂತೆ ಕರ್ನಾಟಕ ಕಾಂಗ್ರೆಸ್ ಘಟಕ ಯಡಿಯೂರಪ್ಪ ಸರಕಾರಕ್ಕೆ ಹತ್ತು ಪ್ರಶ್ನೆಗಳನ್ನು ಕೇಳಿದೆ. ಅದು ಹೀಗಿದೆ:

1. ಕೊರೊನಾ ಬಂದು ವರ್ಷ ಕಳೆದಿದೆ, ತಜ್ಞರ ಎಚ್ಚರಿಕೆಗೂ ಹಲವು ತಿಂಗಳುಗಳು ಕಳೆದಿವೆ, ಎಲ್ಲಾ ಸಿದ್ಧತೆಗಳಿಗೂ ಅವಕಾಶಗಳಿದ್ದವು, ಸಮಯವೂ ಇತ್ತು. ಇಷ್ಟಿದ್ದರೂ ಬೇಜವಾಬ್ದಾರಿತನದಿಂದ ನಡೆದುಕೊಂಡು ರಾಜ್ಯದ ಜನತೆಯ ಜೀವಕ್ಕೆ ಮುಳುವಾಗಿದೆ ಸರ್ಕಾರ. @BJP4Karnataka ಸರ್ಕಾರ, @BSYBJP ಅವರು ಈ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯವಿದೆಯೇ?

2. ಕಳೆದ ಒಂದು ವರ್ಷದಿಂದಲೂ ಸಂಪುಟ ಗಲಾಟೆ, ಆಂತರಿಕ ಕಿತ್ತಾಟ, ಭ್ರಷ್ಟಾಚಾರ, ಸಿಡಿ ಗಲಾಟೆಯಲ್ಲಿಯೇ ಮುಳುಗಿದ ಸರ್ಕಾರ ಕೊರೊನಾ ಎದುರಿಸಲು ವೈದ್ಯಕೀಯ ಕ್ಷೇತ್ರವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರಲಿಲ್ಲ ಏಕೆ?

3. ಚಾಮರಾಜನಗರವೂ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಆಕ್ಸಿಜನ್ ಕೊರತೆಯಿಂದ ಹಲವು ಮಂದಿ ಸಾವನಪ್ಪಿದ್ದಾರೆ, ಆಕ್ಸಿಜನ್ ಪೂರೈಸದಿರುವುದು ಸರ್ಕಾರದ ಬಹುದೊಡ್ಡ ವೈಫಲ್ಯ, ಇಷ್ಟಾದರೂ ಈ ದುರ್ಘಟನೆಗಳಿಗೆ ಯಾವೊಬ್ಬ ಸಚಿವರೂ ಹೊಣೆ ಹೊರಲಿಲ್ಲ ಏಕೆ? ಆರೋಗ್ಯ ಸಚಿವರು ಸುಳ್ಳು ಹೇಳಿದರೂ ಅವರ ರಾಜೀನಾಮೆ ಪಡೆಯಲಿಲ್ಲ ಏಕೆ @BSYBJP ಅವರೇ?

ಕೋರ್ಟು ನಿರ್ದೇಶನದ ನಂತರವೂ ರಾಜ್ಯದ ಬೇಡಿಕೆಗೆ ಅನುಗುಣವಾಗಿ ಆಕ್ಸಿಜನ್ ಇಲ್ಲ

4. ರಾಜ್ಯಕ್ಕೆ ದಿನವೊಂದಕ್ಕೆ ಸುಮಾರು 1800 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿದೆ ಎಂದು ಸರ್ಕಾರದ ಅಂಕಿ ಅಂಶಗಳೇ ಹೇಳುತ್ತವೆ, ವಾಸ್ತವದಲ್ಲಿ ಇನ್ನೂ ಹೆಚ್ಚಿದೆ. ಇದನ್ನು ಪೂರೈಸಲು ಸರ್ಕಾರಕ್ಕೆ ಕಾಳಜಿ ಇಲ್ಲವೇ, ಕೋರ್ಟುಗಳೇ ಚಾಟಿ ಬೀಸಬೇಕೇ? ಕೋರ್ಟುಗಳ ನಿರ್ದೇಶನದ ನಂತರವೂ ರಾಜ್ಯದ ಬೇಡಿಕೆಗೆ ಅನುಗುಣವಾಗಿ ಆಕ್ಸಿಜನ್ ಪೂರೈಸದಿರುವುದೇಕೆ?

5. ಲಸಿಕೆ ವಿಚಾರದಲ್ಲಿ @BJP4Karnataka ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಚಾರಕ್ಕಾಗಿ ಲಸಿಕೆ ಉತ್ಸವ ಎಂಬ ಬೂಟಾಟಿಕೆ ಆಡಿದ್ದೇಕೆ? ಜನತೆಯನ್ನು ಗೊಂದಲಕ್ಕೆ ದೂಡಿದ್ದೇಕೆ? ಲಸಿಕೆ ತರಿಸಿಕೊಳ್ಳದೆಯೇ, ಆರ್ಡರ್ ಮಾಡದೆಯೇ ಕುಳಿತಿದ್ದೇಕೆ? ಲಸಿಕೆ ಹಂಚಿಕೆಯಲ್ಲಿ ಕೇಂದ್ರದ ತಾರತಮ್ಯ ಪ್ರಶ್ನಿಸದೆ 25 ಸಂಸದರು ಅಡಗಿ ಕುಳಿತಿದ್ದೆಲ್ಲಿ?

ಕಾಲು ಮುರಿದುಕೊಂಡು ಕರ್ನಾಟಕದಲ್ಲಿಯೇ ಬಿದ್ದಿರುತ್ತದೆ

6. ಚುನಾವಣಾ ಭಾಷಣಗಳಲ್ಲಿ ಡಬಲ್ ಇಂಜಿನ್ ಸರ್ಕಾರ ಸ್ವರ್ಗ ಕಾಲು ಮುರಿದುಕೊಂಡು ಕರ್ನಾಟಕದಲ್ಲಿಯೇ ಬಿದ್ದಿರುತ್ತದೆ ಎಂದು ಪುಂಖಾನುಪುಂಖವಾಗಿ ಮಾತನಾಡಿದ ಬಿಜೆಪಿ ನಾಯಕರು ರಾಜ್ಯದ ಜನತೆಯ ಪ್ರಾಣ ಹೋಗುತ್ತಿದ್ದರೂ ಈಗ ನೋಟ್ ಪ್ರಿಂಟ್ ಮಾಡಲ್ಲ, ನೇಣು ಹಾಕ್ಕೋಬೇಕಾ ಎಂಬ ಮಾತುಗಳನ್ನ ಆಡುತ್ತಿರುವುದೇಕೆ? ಡಕೋಟಾ ಇಂಜಿನ್ ಅಂತ ಈಗ ಅರಿವಾಯಿತೆ?!

7. ‘@BSYBJP ಅವರೇ, ನಿಮ್ಮದೆಂತಹಾ ಆಮೆ ನಡಿಗೆಯ ಸರ್ಕಾರವೆಂದರೆ ಸಮಸ್ಯೆಗಳು, ಕೊರತೆಗಳು ತಲೆದೂರಿ ಹಲವು ದಿನಗಳ ಬಳಿಕ ಕೊರತೆಗಳ ನಿರ್ವಹಣೆಗೆಂದು ಕೊರೊನಾ ಸಚಿವರುಗಳನ್ನು ನೇಮಿಸಿದಿರಿ. ಅವರು ನಾಮಕಾವಸ್ಥೆಗಷ್ಟೇ ಇರುವುದು ಎಂದು ಇಷ್ಟು ದಿನ ಕಳೆದರೂ ಕೊರತೆಗಳು ಬಗೆಹರಿಯದಿರುವುದು ತಿಳಿಸುತ್ತದೆ. ಏಕೆ ಈ ಅಸಾಮರ್ಥ್ಯ @BSYBJP ಅವರೇ?

ಜೀವ ರಕ್ಷಕ ಔಷಧಗಳ ಕೃತಕ ಅಭಾವ ಸೃಷ್ಟಿಸಿ ಕಾಳ ಸಂತೆಯಲ್ಲಿ ಮಾರಾಟ

8. ಕಾಳ ಸಂತೆ ನಿಗ್ರಹಿಸಲು ಗೃಹ ಇಲಾಖೆ, ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿವೆ. ಕಾಳದಂಧೆಕೊರರು ಜೀವ ರಕ್ಷಕ ಔಷಧಗಳ ಕೃತಕ ಅಭಾವ ಸೃಷ್ಟಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಾ ತಿಂಗಳು ಕಳೆದಿದೆ, ಇದುವರೆಗೂ ಅದನ್ನು ತಡೆಯುವ ಗಂಭೀರ ಪ್ರಯತ್ನ ಮಾಡಲಿಲ್ಲವೇಕೆ? @BJP4Karnataka ಪಕ್ಷವೂ ಅದರಲ್ಲಿ ಭಾಗಿಯೇ?

9. ರಾಜ್ಯದಲ್ಲೂ ಬಿಜೆಪಿ, ಕೇಂದ್ರದಲ್ಲೂ ಬಿಜೆಪಿ, 25 ಸಂಸದರೂ ಬಿಜೆಪಿ, ಹೀಗಿರುವಾಗ ಕೇಂದ್ರ ಸರ್ಕಾರ ಗುಜರಾತಿಗೆ ನ್ಯಾಯ, ಕರ್ನಾಟಕಕ್ಕೆ ಆನ್ಯಾಯ ಮಾಡುತ್ತಿರುವುದನ್ನು ಪ್ರಶ್ನಿಸದೆ ಇರುವುದೇಕೆ? ಕರ್ನಾಟಕಕ್ಕೆ ಆಕ್ಸಿಜನ್ ಕೊಡುವುದೇ ಇಲ್ಲ ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ ರಾಜ್ಯ ಸರ್ಕಾರ ಬಾಯಿಮುಚ್ಚಿ ಕುಳಿತಿದ್ದೇಕೆ?

ದಿನಕ್ಕೊಂದು ಹೇಳಿಕೆ ನೀಡುತ್ತಾ ಜನತೆಯನ್ನು ಗೊಂದಲಕ್ಕೆ ದೂಡಿದ್ದೀರಿ

10. ಲಾಕ್‌ಡೌನ್ ಬಗ್ಗೆ ಸರ್ಕಾರದಲ್ಲೇ ಸ್ಪಷ್ಟತೆ ಇಲ್ಲದೆ, ಸಮನ್ವಯತೆ ಇಲ್ಲದೆ ದಿನಕ್ಕೊಂದು ಹೇಳಿಕೆ ನೀಡುತ್ತಾ ಜನತೆಯನ್ನು ಗೊಂದಲಕ್ಕೆ ದೂಡಿದ್ದೀರಿ. ಏಕಾಏಕಿ ಘೋಷಣೆ ಮಾಡಿ ವಲಸಿಗರರನ್ನು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ, ಪರೀಕ್ಷೆ ನಡೆಸದೆ ಹಳ್ಳಿಗಳಿಗೆ ತೆರಳಲು ಬಿಟ್ಟಿರಿ. ಈಗ ಗ್ರಾಮೀಣ ಭಾಗದ ಸೋಂಕಿಗೆ ನೀವೇ ಹೊಣೆಯಲ್ಲವೇ?


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ