ಡೇಶ್ ಕುಮಾರ್ ಹಂಪಿ ನಿರ್ದೇಶನದ ಶರಣ್ ಅಭಿನಯದ ‘ಗುರು ಶಿಷ್ಯರು’ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸುತ್ತಿದ್ದು, ಇಂದು ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಫಸ್ಟ್ ಲುಕ್ ಪೋಸ್ಟರ್ ಅನ್ನು ರಿಲೀಸ್ ಮಾಡುವ ಮೂಲಕ ಉಡುಗೊರೆಯಾಗಿ ನೀಡಿದ್ದಾರೆ.
ಈ ಪೋಸ್ಟರ್ ನಲ್ಲಿ ನಿಶ್ವಿಕಾ ನಾಯ್ಡು ಲಂಗ ದಾವಣಿಯನ್ನುಟ್ಟುಕೊಂಡಿದ್ದು ಸೈಕಲ್ ಸವಾರಿ ಮಾಡುತ್ತಿದ್ದಾರೆ. ಈ ಹಿಂದೆ ಮಾಡಿದ ಎಲ್ಲಾ ಸಿನಿಮಾಗಳಿಗಿಂತ ನಿಶ್ವಿಕಾ ನಾಯ್ಡು ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ಸೂಜಿ ಎಂಬ ಹುಡುಗಿಯ ಪಾತ್ರದಲ್ಲಿ ಅಭಿನಯಿಸಲ್ಲಿದ್ದಾರೆ. ಲಡ್ಡು ಸಿನಿಮಾ ಹೌಸ್ ಹಾಗೂ ತರುಣ್ ಸುಧೀರ್ ಕ್ರಿಯೇಟಿವ್ಸ್ ನಿಂದ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ನಟಿ ನಿಶ್ವಿಕಾ ಅವರನ್ನು #ಗುರುಶಿಷ್ಯರು ತಂಡಕ್ಕೆ ಸ್ವಾಗತಿಸುತ್ತಾ, ಅವರ ಪಾತ್ರದ ಫಸ್ಟ್ ಲುಕ್ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ 😊
The Lady Lead of #GuruShishyaru is here! Nishvika Naidu it is! Welcome aboard @nishvikaa ✨#NishvikaJoinsGuruShishyaru pic.twitter.com/JT0rp5g0px
— Sharaan (@realSharaan) May 19, 2021
Laxmi News 24×7