ಫ್ಲೋರಿಡಾ: ಮೆಕ್ಸಿಕೋದ ಆಯಂಡ್ರಿಯಾ ಮೆಝಾ (26) ಅವರು 2020ರ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದಾರೆ. ಅಂತಿಮ ಸುತ್ತಿನಲ್ಲಿದ್ದ ಬ್ರೆಜಿಲ್‌ನ ಜ್ಯೂಲಿಯಾ ಗಾಮ (28), ಪೆರು ದೇಶದ ಜೆನಿಕ್ ಮೆಸಿಟಾ (27) ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದಿದ್ದಾರೆ.
ರವಿವಾರ ರಾತ್ರಿ ನಡೆದ 69ನೇ ವಿಶ್ವಸುಂದರಿ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಅವರು, 74 ದೇಶಗಳ ಸುಂದರಿಯರನ್ನು ಹಿಂದಿಕ್ಕಿ ಅಗ್ರಪಟ್ಟವನ್ನು ತಮ್ಮದಾಗಿಸಿಕೊಂಡರು.
2019ರ ವಿಶ್ವಸುಂದರಿ ದಕ್ಷಿಣ ಆಫ್ರಿಕಾದ ಜೊಜಿಬಿನಿ ಟುನ್ಸಿ ಅವರು, ವಿಶ್ವಸುಂದರಿ ಕಿರೀಟವನ್ನು ಆಯಂಡ್ರಿಯಾರಿಗೆ ತೊಡಿಸಿದರು. ಭಾರತದಿಂದ ಸ್ಪರ್ಧಿಸಿದ್ದ, “ಮಿಸ್ ಇಂಡಿಯಾ’ ಉಡುಪಿಯ ಉದ್ಯಾವರ ಮೂಲದ ಅಡ್ಲೆ„ನ್ ಕ್ಯಾಸ್ಟೆಲಿನೊ (22) ಅವರು 4ನೇ ಸ್ಥಾನ ಪಡೆದರು.
Laxmi News 24×7