Breaking News

ಅರಬ್ಬಿ ಸಮುದ್ರದಲ್ಲಿ ದುರಂತಕ್ಕೀಡಾಗಿದ್ದ ಬೋಟ್ 9 ಜನರ ರಕ್ಷಣೆ

Spread the love

ಮಂಗಳೂರು: ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಅರಬ್ಬಿ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಎನ್ ಎಂಪಿಟಿ ಟಗ್ ಬೋಟ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೋಟ್ ನಲ್ಲಿದ 9 ಜನರನ್ನು ರಕ್ಷಣೆ ಮಾಡಲಾಗಿದೆ.

ಚಂಡಮಾರುತದಿಂದಾಗಿ ಅಲೆಗಳ ಅಬ್ಬರಕ್ಕೆ ಸಿಲುಕಿ ಟಗ್ ಬೋಟ್ ಶನಿವಾರ ಅರಬ್ಬಿ ಸಮುದ್ರದಲ್ಲಿ ಮಗುಚಿಬಿದ್ದಿತ್ತು. ಕಾಪುವಿನ ದೀಪಸ್ತಂಭದಿಂದ 13 ನಾಟಿಕಲ್ ಮೈಲಿ ದೂರದಲ್ಲಿ ಈ ದುರಂತ ಸಂಭವಿಸಿತ್ತು. ಇಬ್ಬರು ಈಜಿ ದಡ ಸೇರಿದ್ದರೆ ಬೋಟ್ ನಲ್ಲಿದ್ದ 9 ಜನರು ಸಂಕಷ್ಟಕ್ಕಿಡಾಗಿದ್ದರು. ಬೋಟ್ ನಲ್ಲಿದ್ದವರ ರಕ್ಷಣೆಗಾಗಿ ಕೋಸ್ಟ್ ಗಾರ್ಡ್ ನಿನ್ನೆಯಿಂದ ಹರಸಾಹಸಪಟ್ಟಿತ್ತು. ಅಂತಿಮವಾಗಿ ಇಂದು ಕೊಚ್ಚಿಯ ನೇವಿ ಹೆಲಿಕಾಪ್ಟರ್ ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿದ್ದು, ಇದೀಗ 9 ಜನರನ್ನು ರಕ್ಷಿಸಲಾಗಿದೆ.

ಸ್ಪೀಡ್ ಬೋಟ್ ಮೂಲಕ 5 ಜನರನ್ನು ರಕ್ಷಿಸಲಾಗಿದ್ದರೆ 4 ಜನರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ಎಲ್ಲಾ 9 ಜನರನ್ನು ಮಂಗಳೂರು ವೆನಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.


Spread the love

About Laxminews 24x7

Check Also

ಉಡುಪಿ ಶ್ರೀ ಕೃಷ್ಣನಿಗೆ ಚಿನ್ನದ ಭಗವದ್ಗೀತೆ ಸಮರ್ಪಣೆ

Spread the loveಉಡುಪಿ: ಪುತ್ತಿಗೆ ಶ್ರೀಗಳ ಪರ್ಯಾಯ ಸಮಾಪನ ಹಂತ ತಲುಪಿದೆ. ತಮ್ಮ ಸಂಪೂರ್ಣ ಪರ್ಯಾಯದ ಅವಧಿಯನ್ನು ಭಗವದ್ಗೀತೆಯ ಪ್ರಚಾರಕ್ಕೆ ಬಳಸಿಕೊಂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ