Breaking News

ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ ಮಾಜಿ ಸಚಿವ ರಮೇಶ್​ ಜಾರಕಿಹೊಳಿ

Spread the love

ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲವನ್ನೇ ಸೃಷ್ಟಿಸಿದ್ದ ಮಾಜಿ ಸಚಿವ ರಮೇಶ್​ ಜಾರಕಿಹೊಳಿಗೆ ಸೇರಿದ್ದು ಎನ್ನಲಾದ ಸಿಡಿ, ರಮೇಶ್​ ರಾಜಕೀಯ ಜೀವನದಲ್ಲೇ ಬಿರುಗಾಳಿ ಎಬ್ಬಿಸಿತ್ತು. ಈ ಸಿಡಿ ವಿವಾದದ ಬಳಿಕ ರಮೇಶ್​ ತಮ್ಮ ಖಾತೆಗೆ ರಾಜೀನಾಮೆ ನೀಡಿದ್ದು ಮಾತ್ರವಲ್ಲದೇ ಜಿಲ್ಲಾ ಉಸ್ತುವಾರಿ ಸ್ಥಾನದಿಂದಲೂ ಕೆಳಗಿಳಿದಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಕೆಳಗೆ ಇಳಿದಿದ್ದರೂ ಸಹ ರಮೇಶ್​ ಜಾರಕಿಹೊಳಿ ಖದರ್​ ಕಡಿಮೆಯಾದಂತೆ ಕಾಣುತ್ತಿಲ್ಲ. ಗೋಕಾಕ್​ನ ಗೃಹ ಕಚೇರಿಗೆ ಜಿಲ್ಲಾಧಿಕಾರಿ ಹಾಗೂ ಡಿಹೆಚ್​ಓರನ್ನ ಕರೆಸಿಕೊಂಡ ರಮೇಶ್​ ಮಹತ್ವದ ಸಭೆ ನಡೆಸಿದ್ರು.

ಗೋಕಾಕ್​​ನ ತಮ್ಮ ಗೃಹ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸೇರಿ ಕೋವಿಡ್​ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಭೆ ಮಾಡಿದ್ದಾರೆ. ಸಭೆಯಲ್ಲಿ ಡಿಸಿ ಎಂ.ಜಿ. ಹಿರೇಮಠ, ಡಿಹೆಚ್‌ಓ ಎಸ್​.ವಿ. ಮುನ್ಯಾಳ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗಿಯಾದ್ರು.

ಇನ್ನು ಸಭೆ ಮುಗಿದ ಬಳಿಕ ಮಾತನಾಡಿದ ರಮೇಶ್​ ಜಾರಕಿಹೊಳಿ, ಮೊದಲು ಲಸಿಕೆಯನ್ನ ವಿರೋಧಿಸಿದ್ದ ವಿಪಕ್ಷ ನಾಯಕರೇ ಇದೀಗ ಲಸಿಕೆಯನ್ನ ಹಾಕಿಸಿಕೊಳ್ತಿದ್ದಾರೆ. ಲಸಿಕೆ ವಿಚಾರದಲ್ಲಿ ವಿರೋಧ ಪಕ್ಷದವರು ರಾಜಕೀಯ ಮಾಡೋದನ್ನ ನಿಲ್ಲಿಸಿ ಸರ್ಕಾರಕ್ಕೆ ಸಲಹೆ ಸೂಚನೆ ನೀಡಲಿ ಎಂದು ಹೇಳಿದ್ರು. ಇನ್ನು ಇದೇ ವೇಳೆ ಲಾಕ್​ಡೌನ್​ ವಿಚಾರವಾಗಿಯೂ ಮಾತನಾಡಿದ ಅವ್ರು, ಕೊರೊನಾ ಚೈನ್​ ಬ್ರೇಕ್​ ಆಗಬೇಕು ಅಂದರೆ ಲಾಕ್​ಡೌನ್​ ವಿಸ್ತರಣೆಯಾಗೋದು ಒಳ್ಳೇದು ಎಂದು ಹೇಳಿದ್ರು.


Spread the love

About Laxminews 24x7

Check Also

ದೀಪಾವಳಿ ಬಟ್ಟೆ ಖರೀದಿಗಾಗಿ “ಬಿ.ಎಸ್.ಸಿ”ಯಲ್ಲಿ ಭಾರಿ ಜನಜಂಗುಳಿ…

Spread the love ದೀಪಾವಳಿ ಬಟ್ಟೆ ಖರೀದಿಗಾಗಿ “ಬಿ.ಎಸ್.ಸಿ”ಯಲ್ಲಿ ಭಾರಿ ಜನಜಂಗುಳಿ… ದೀಪಾವಳಿ ಬಟ್ಟೆ ಖರೀದಿಗಾಗಿ ಬಿ.ಎಸ್.ಸಿಯಲ್ಲಿ ಜನಜಂಗುಳಿ… ಬ್ರ್ಯಾಂಡೆಡ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ