ಹುಬ್ಬಳ್ಳಿ: ಜಿಲ್ಲೆಯ ಪತ್ರಕರ್ತರ ಭವನದಲ್ಲಿ ಇಂದು 249 ಮಾಧ್ಯಮ ಪ್ರತಿನಿಧಿಗಳು ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.

ರಾಜ್ಯ ಸರ್ಕಾರ ಮಾಧ್ಯಮ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಫ್ರೆಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಿ ಆದ್ಯತೆ ಮೇರೆಗೆ ಕೋವಿಡ್ ಲಸಿಕೆಯನ್ನು ನೀಡಲು ಅನುಮತಿಸಿದೆ. ಈ ಹಿನ್ನಲೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ರವರ ನಿರ್ದೇಶನದ ಮೇರೆಗೆ ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿ ಕೋವಿಡ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ 240 ಮಾಧ್ಯಮ ಪ್ರತಿನಿಧಿಗಳು ಲಸಿಕೆಯನ್ನು ಸ್ವೀಕರಿಸಿದ್ದಾರೆ.

18 ರಿಂದ 45 ವಯೋಮಾನದ ಒಳಗಿನ 196 ಹಾಗೂ 45 ವಯೋಮಾನ ಮೇಲ್ಪಟ್ಟ, 44 ಜನರಿಗೆ ಅಸ್ಟ್ರಜನಿಕಾ ಕೋವಿಶೀಲ್ಡ್ ಲಸಿಕೆ ನೀಡಲಾಯಿತು. ವಿದ್ಯುನ್ಮಾನ ಮಾಧ್ಯಮ ಕೆಲಸ ನಿರ್ವಹಿಸುವ ವರದಿಗಾರರು, ವೀಡಿಯೋ ಜರ್ನಲಿಸ್ಟ್, ಮುದ್ರಣ ಮಾಧ್ಯಮದ ವರದಿಗಾರರು, ಉಪಸಂಪಾದಕರು, ಫೋಟೊ ಜರ್ನಲಿಸ್ಟ್ ಹಾಗೂ ವಾರ್ತಾ ಇಲಾಖೆ ಸಿಬ್ಬಂದಿ ಲಸಿಕೆ ಪಡೆದುಕೊಂಡರು.

ಚಿಟಗುಪ್ಪಿ ವೈದ್ಯಾಧಿಕಾರಿಗಳಾದ ಶ್ರೀಧರ ದಂಡಪ್ಪನವರ ಹಾಗೂ ಪ್ರಕಾಶ್ ನರಗುಂದ ಲಸಿಕೆ ಅಭಿಯಾನದ ಮೇಲುಸ್ತುವಾರಿ ವಹಿಸಿದ್ದರು. ವೈದ್ಯಕೀಯ ಸಿಬ್ಬಂದಿಗಳಾದ ಆಶಾ ಯಡಳ್ಳಿ, ಕಾವ್ಯ ಗೊರವನಗೋಳ್, ಪ್ರವೀಣ್ ಎಸ್.ಎಮ್, ಮಲ್ಲಿಕಾರ್ಜುನ ಎನ್.ಎಮ್, ಪವಿತ್ರ ಎಸ್, ಶ್ವೇತಾ, ಲಸಿಕೆ ಕಾರ್ಯವನ್ನು ನಿರ್ವಹಿಸಿದರು.
Laxmi News 24×7