Breaking News

ಬೆಂಗಳೂರಿನ ಜನರಿಗೆಂದೇ ಸಿದ್ಧವಾಯ್ತು ಆಕ್ಸಿಜನ್ ಬಸ್.​..! ಪ್ರಾಣವಾಯುವಿಗಾಗಿ ಇನ್ಮುಂದೆ ಹಪಹಪಿಸಬೇಕಿಲ್ಲ

Spread the love

ರಾಜ್ಯದಲ್ಲಿ ಕೊರೊನಾ 2ನೆ ಅಲೆ ಮಿತಿಮೀರಿರುವ ನಡುವಲ್ಲೇ ಪ್ರಾಣವಾಯುವಿನ ಕೊರತೆಯಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದ ರಾಜಧಾನಿ ಮಂದಿಗೆ ರಾಜ್ಯ ಸರ್ಕಾರ ಗುಡ್​ ನ್ಯೂಸ್​ ನೀಡಿದೆ. ಇನ್ಮುಂದೆ ರಾಜಧಾನಿಯ ಮೂಲೆ ಮೂಲೆಗಳಲ್ಲಿ ಆಕ್ಸಿ ಬಸ್​ ಸಂಚರಿಸಲಿದ್ದು ಈ ಕಾರ್ಯಕ್ರಮಕ್ಕೆ ಆರೋಗ್ಯ ಸೌಧದಲ್ಲಿ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದಾರೆ.

ಇದೊಂದು ಮೊಬೈಲ್​ ಆಕ್ಸಿ ಬಸ್​ ಆಗಿದ್ದು ಬಿಬಿಎಂಪಿ ವತಿಯಿಂದ ಒಟ್ಟು 20 ಬಸ್​ಗಳನ್ನ ತಯಾರು ಮಾಡಲಾಗಿದೆ. ಟ್ರಾಸ್​​ ಎನರ್ಜಿ ಮಾಚನಿ ಗ್ರೂಪ್​ ಕೇವಲ 2 ದಿನಗಳಲ್ಲಿ ಈ ಪ್ರಾಣವಾಯು ಬಸ್​ಗಳನ್ನ ಸಿದ್ಧಪಡಿಸಿದೆ. ಇದರಲ್ಲಿ 8 ಸೀಟ್​ಗಳಿದ್ದು ಪ್ರತಿ ಸೀಟ್​ನಲ್ಲಿಯೂ ಆಕ್ಸಿಜನ್​ ಸಿಲಿಂಡರ್ ವ್ಯವಸ್ಥೆ ಕಲ್ಪಿಸಲಾಗಿದೆ.

ತಮಿಳುನಾಡಿನಲ್ಲಿಯೂ ಜೆನ್​ ಇಂಟರ್​ನ್ಯಾಷನಲ್​ ಎಂಬ ಸಂಘಟನೆಯು ಶಾಲಾ ಬಸ್​ಗಳನ್ನ ಬಳಕೆ ಮಾಡಿಕೊಂಡು ಈ ರೀತಿ ಗಾಲಿ ಮೇಲೆ ಆಮ್ಲಜನಕ ಎಂಬ ಸೇವೆಯನ್ನ ಆರಂಭಿಸುವ ಮೂಲಕ ಭಾರೀ ಗಮನ ಸೆಳೆದಿತ್ತು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ