Breaking News

ಬೆಡ್ ಬ್ಲಾಕಿಂಗ್ ಹಗರಣ: ಬೆಂಗಳೂರಿನ ಎಲ್ಲಾ ವಲಯದ ಕೊವಿಡ್ ವಾರ್ ರೂಮ್ ಮೇಲೆ ಸಿಸಿಬಿ ಅಧಿಕಾರಿಗಳ ದಾಳಿ

Spread the love

ಬೆಂಗಳೂರು: ನಗರದ ಎಲ್ಲಾ ವಲಯದ ವಾರ್ ರೂಮ್ ಮೇಲೆ ಸಿಸಿಬಿ ಅಧಿಕಾರಿಗಳ ದಾಳಿ ಮಾಡಿದ್ದಾರೆ. ದಾಖಲೆಗಳು ಮತ್ತು ಅಂಕಿಅಂಶಗಳ ಹುಡುಕಾಟ ನಡೆಯುತ್ತಿದೆ. ಬೆಡ್ ಬುಕ್ಕಿಂಗ್ ಪ್ರಕರಣದಲ್ಲಿ‌ ಇದುವರೆಗೆ ನಾಲ್ಕು ಜನರ ಬಂಧನವಾಗಿದೆ. ಒಟ್ಟು ಎರಡು ಪ್ರಕರಣ ದಾಖಲಾಗಿದೆ. ಸಾಫ್ಟ್‌ವೇರ್ ಮೂಲಕ ವಂಚನೆ ಮಾಡುವ ಮಾಹಿತಿ ಇದೆ. ಬಂಧಿತ ಇಬ್ಬರು ಡಾಕ್ಟರ್​ಗಳು ವಾರ್ ರೂಮ್ ಇನ್​ಚಾರ್ಜ್​ಗಳಾಗಿದ್ದರು. ಅವರು ಸರ್ಕಾರಿ ವೈದ್ಯರಾಗಿದ್ದರು. ಸಿಸಿಬಿ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸ್ತಾ ಇದ್ದಾರೆ ಎಂದು ನಗರ ಪೊಲೀಸ್ ಅಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ.

ಬೆಡ್ ಬ್ಲಾಕಿಂಗ್ ಹಗರಣದ ಕುರಿತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಬೆಡ್​ಗಳನ್ನು ನೀಡುವ ಕಾರ್ಯ ನಿರ್ವಹಣೆ ಕುರಿತು ಬೆಡ್ ಬುಲೆಟಿನ್ ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು. ಬೆಡ್ ಬ್ಲಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 8 ಜನರ ವಿಚಾರಣೆ ನಡೆಯುತ್ತಿದೆ. ಸಿಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ, ವಾರ್‌ ರೂಂ ಸುಧಾರಣೆ ಸಂಬಂಧ ಕಂದಾಯ ಸಚಿವ ಆರ್​.ಅಶೋಕ್ ಸಭೆ ನಡೆಸಿದರು. ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೆಚ್ಚಿನ ಬೆಡ್ ಅರೆಂಜ್ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು ಎಂದರು. 227 ತಾಲೂಕಿನಲ್ಲಿ ಸಿಸಿ ಸೆಂಟರ್, ವೈದ್ಯರ ಬಳಕೆ, ಆಯುಷ್​ ವೈದ್ಯರನ್ನು ಬಳಸಿಕೊಳ್ಳುವುದಕ್ಕೆ ಚಿಂತನೆ ನಡೆಸಲಾಗಿದೆ ಎಂದರು. ಬೆಡ್​, ಆಕ್ಸಿಜನ್ ಅವಶ್ಯಕತೆ ಬಗ್ಗೆ ವೈದ್ಯರು ತಿಳಿಸುತ್ತಾರೆ. ಬೇರೆ ಬೇರೆ ದೇಶಗಳಿಂದ ಆಕ್ಸಿಜನ್ ಪೂರೈಕೆಯಾಗಲಿದೆ. ರಾಜ್ಯದಲ್ಲಿ ಇಬ್ಬರು ನೋಡಲ್ ಅಧಿಕಾರಿಗಳನ್ನ ನೇಮಿಸಲಿದ್ದೇವೆ ಎಂದು ಮಾಹಿತಿ ನೀಡಿದರು.


Spread the love

About Laxminews 24x7

Check Also

ಕ್ಷಮೆ ಕೇಳಲಿ, ಇಲ್ಲವೇ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು: ಸಚಿವೆ ಹೆಬ್ಬಾಳ್ಕರ್

Spread the loveಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ