Breaking News

ಬೆಂಗಳೂರು: ಶೇ.55ಕ್ಕೆ ತಲುಪಿದ ಕೊರೊನಾ ಪಾಸಿಟಿವಿಟಿ ದರ, 3 ಲಕ್ಷ ಸಕ್ರಿಯ ಪ್ರಕರಣ

Spread the love

ಬೆಂಗಳೂರು, ಮೇ 05: ಬೆಂಗಳೂರಿನಲ್ಲಿ ಕೊರೊನಾ ಸೋಂಕು ಪಾಸಿಟಿವಿಟಿ ದರ ಶೇ.55ಕ್ಕೆ ತಳುಪಿದ್ದು, 3 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿರುವುದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಪ್ರತಿಯೊಬ್ಬರೂ ಕೊರೊನಾ ಪರೀಕ್ಷೆ ಮಾಡಿಸುತ್ತಿದ್ದು, ಪಾಸಿಟಿವಿಟಿ ದರ ಹೆಚ್ಚಾಗಿದೆ. ಸೋಮವಾರ ಪಾಸಿಟಿವಿಟಿ ಪ್ರಮಾಣ ಶೇ.55ಕ್ಕೆ ತಲುಪಿದೆ.

ಮಂಗಳವಾರ ಕರ್ನಾಟಕದಲ್ಲಿ ಒಟ್ಟು 44,632 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಅದರಲ್ಲಿ ಬೆಂಗಳೂರಿನಲ್ಲಿ 20,850 ಕೊರೊನಾ ಸೋಂಕಿತರಿದ್ದಾರೆ ಎಂಬುದು ತಿಳಿದುಬಂದಿದೆ.

 

ಕಳೆದ 24 ಗಂಟೆಯಲ್ಲಿ ಗಂಟೆಯಲ್ಲಿ ಒಟ್ಟು 292 ಮಂದಿ ಮೃತಪಟ್ಟಿದ್ದರೆ, ಬೆಂಗಳೂರಿನಲ್ಲಿ 132 ಮಂದಿ ಸಾವನ್ನಪ್ಪಿದ್ದಾರೆ. ಆಮ್ಲಜನಕ ಕೊರತೆಯಿಂದಾಗಿ ಆಸ್ಪತ್ರೆಗಳಲ್ಲಿ ರೋಗಿಗಳು ಸಾಯುತ್ತಿದ್ದಾರೆ.

ದೊಡ್ಡ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಇದೆ, ಕೊರೊನಾ ಲಸಿಕೆಯನ್ನು ನಿತ್ಯ 10 ಸಾವಿರ ಮಂದಿಗೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆಯ ಸಹಾಯವಾಣಿಗೆ ನಿತ್ಯ 4500ಕ್ಕೂ ಹೆಚ್ಚು ಕರೆಗಳು ಬರುತ್ತಿವೆ, ಅದರಲ್ಲಿ 1500 ರಿಂದ 1700 ಮಂದಿ ಆಸ್ಪತ್ರೆಗಳ ದಾಖಲಾತಿ ಬಗ್ಗೆ ವಿಚಾರಿಸುತ್ತಿದ್ದಾರೆ. 500-550 ಮಂದಿ ಐಸಿಯು ಬೆಡ್‌ಗಳ ಮಾಹಿತಿ ಕೇಳುತ್ತಿದ್ದಾರೆ.

 

ಈಗಾಗಲೇ ಸಂಸದ ತೇಜಸ್ವಿ ಸೂರ್ಯ ಸಾಮಾನ್ಯ ರೋಗಿಗಳಿಗೆ ಏಕೆ ಹಾಸಿಗೆಗಳು ಸಿಗುತ್ತಿಲ್ಲ ಎನ್ನುವುದಕ್ಕೆ ಕಾರಣವನ್ನು ನೀಡಿದ್ದಾರೆ.

ಆಸ್ಪತ್ರೆಗಳಲ್ಲಿ ಅಕ್ರಮ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿರುವ ಕಾರಣ ಜನರಿಗೆ ಬೆಡ್‌ಗಳು ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತನಿಖೆಗೆ ಆದೇಶಿಸಿದ್ದಾರೆ.


Spread the love

About Laxminews 24x7

Check Also

ಕಾಲುಜಾರಿ ನಾಲೆಗೆ ಬಿದ್ದ ಬಾಲಕಿ, ರಕ್ಷಣೆಗೆ ಹೋದ ನಾಲ್ವರು ಸೇರಿ ಐವರು ಮಕ್ಕಳು ನೀರುಪಾಲು

Spread the loveಮಂಡ್ಯ: ಬಟ್ಟೆ ತೊಳೆಯುವಾಗ ಕಾಲು ಜಾರಿ ಬಿದ್ದ ಬಾಲಕಿಯ ರಕ್ಷಣೆಗೆ ಮುಂದಾಗಿ, ಐವರು ಮಕ್ಕಳು ನೀರುಪಾಲಾದ ದಾರುಣ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ