Breaking News

ಬಳ್ಳಾರಿ; ವಿಮ್ಸ್‌ನಲ್ಲಿ ಬೆಡ್ ಸಿಗದೇ ಆಸ್ಪತ್ರೆ ಮುಂದೆ ವ್ಯಕ್ತಿ ನರಳಾಟ

Spread the love

ವಿಜಯನಗರ, ಮೇ 04; ಬೆಂಗಳೂರು ನಗರದಲ್ಲಿ ಬೆಡ್ ಸಿಗದೇ ಕೋವಿಡ್ ಸೋಂಕಿತರು ಪರದಾಡುತ್ತಿದ್ದಾರೆ. ಬಳ್ಳಾರಿಯ ವಿಮ್ಸ್‌ನಲ್ಲಿಯೂ ಇಂತಹ ಪ್ರಕರಣ ಈಗ ಬೆಳಕಿಗೆ ಬಂದಿದೆ. ಬೆಡ್ ಸಿಗದೆ ಕೋವಿಡ್ ಸೋಂಕಿತ ನರಳಾಡಿದ ಘಟನೆ ಮಂಗಳವಾರ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

ಬಳ್ಳಾರಿಯಲ್ಲಿಯೂ ಬೆಡ್‌ನ ಕೊರತೆ ಶುರುವಾಗಿದೆಯೇ? ಎಂಬ ಅನುಮಾನ ಈಗ ಉಂಟಾಗಿದೆ. ಎರಡು ಗಂಟೆಯಿಂದ ಬೆಡ್ ಸಿಗದೆ ಕೋವಿಡ್ ಸೋಂಕಿತ ರೋಗಿ ಆಸ್ಪತ್ರೆಯ ಬಾಗಿಲ ಮುಂದೆ ಮಲಗಿ ನರಳಾಡಿದ್ದಾನೆ. ಮಗನಿಗೆ ಬೆಡ್‌ ಕೊಡಿಸಲು ರೋಗಿಯ ತಾಯಿ ಪರದಾಡಿದ್ದಾರೆ.

 

ಆಸ್ಪತ್ರೆಯ ಒಳಗೂ ಬೆಡ್‌ಗಳಿಲ್ಲದೇ ನೆಲದ ಮೇಲೆ ಮಲಗಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದು ಕಡೆ ಸೋಂಕಿತರು ನೆಲದಲ್ಲಿ ಮಲಗಿದ್ದರೂ ಆಸ್ಪತ್ರೆ ಸಿಬ್ಬಂದಿಗಳು ಮಾತ್ರ ಕ್ಯಾರೆ ಎಂದಿಲ್ಲ. ನೋಡಿಯೂ ನೋಡದಂತೆ ಓಡಾಡುತ್ತಿದ್ದಾರೆ ಎಂಬ ಆರೋಪವಿದೆ.

 

ಜಿಲ್ಲಾಡಳಿತ ನಮ್ಮಲ್ಲಿ ಯಾವುದೇ ತರಹದ ಬೆಡ್‌ಗಳ ಕೊರತೆ ಇಲ್ಲ ಅಂತ ಒಂದುಕಡೆ ಹೇಳಿಕೊಳ್ಳುತ್ತಿದೆ. ಆದರೆ ವಿಮ್ಸ್‌ನಲ್ಲಿ ಮಾತ್ರ ಬೆಡ್‌ಗಳ ಕೊರತೆ ಕಂಡು ಬಂದಿದೆ. ಸೋಂಕಿತರು ಬೆಡ್‌ಗಳಿಲ್ಲದೆ ನೆಲದ ಮೇಲೆ ಮಲಗಿದ್ದರು. ಚಿಕಿತ್ಸೆಗೆ ಯಾವ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎಂದು ರೋಗಿಯ ಕುಟುಂಬದವರು ಆರೋಪ ಮಾಡುತ್ತಿದ್ದಾರೆ.

 

ಆರಂಭದಲ್ಲಿ ಬೆಡ್‌ಗಳ ಕೊರತೆ ಉಂಟಾಗಿದೆ ಇದನ್ನೇ ಎಚ್ಚರಿಕೆಯ ಗಂಟೆ ಎಂದುಕೊಂಡು ಜಿಲ್ಲಾಡಳಿತ ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ಸೂಕ್ತ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಿದೆಯೇ ಎಂದು ಕಾದು ನೋಡಬೇಕು.


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ