ಬೆಳಗಾವಿ – ದೇಶಾದ್ಯಂತ ನಡೆದ ವಿಧಾನಸಭೆ ಮತ್ತು ಲೋಕಸಭೆ ಉಪಚುನಾವಣೆಗಳ ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಅಧಿಕೃತವಾಗಿ ಆರಂಭವಾಗಿದೆ.
ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದ್ದು, ನಂತರ ಇವಿಎಂ ತೆರೆಯಲಾಗುತ್ತದೆ. ಈ ಬಾರಿ ಕೋವಿಡ್ ಮಾರ್ಗಸೂಚಿ ಪಾಲಿಸಬೇಕಿರುವುದರಿಂದ ಪ್ರತಿಬಾರಿಯಷ್ಟು ವೇಗವಾಗಿ ಫಲಿತಾಂಶ ಸಿಗುವುದು ಕಷ್ಟ.
ಪಶ್ಚಿಮ ಬಂಗಾಳ ಫಲಿತಾಂಶ ಎಲ್ಲಕ್ಕಿಂತ ಹೆಚ್ಚು ಕುತೂಹಲ ಮೂಡಿಸಿದ್ದು, ತಮಿಳುನಾಡು, ಕೇರಳ, ಆಸ್ಸಾಂ, ಪುದುಚೆರಿ ವಿಧಾನಸಭೆ ಚುನಾವಣೆ ಫಲಿತಾಂಶವೂ ಇಂದೇ ಪ್ರಕಟವಾಗಲಿದೆ.
ಕರ್ನಾಟಕದ ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆ ಮತ ಎಣಿಕೆ ಕಾರ್ಯ ಕೂಡ ಆರಂಭವಾಗಿದೆ.
ಮಧ್ಯಾಹ್ನದ ಹೊತ್ತಿಗೆ ಟ್ರೆಂಡ್ ಗೊತ್ತಾಗಲಿದ್ದು, ಪೂರ್ಣ ಫಲಿತಾಂಶಕ್ಕೆ ಸಂಜೆಯವರೆಗೂ ಕಾಯಬೇಕಾಗಬಹುದು.
Laxmi News 24×7