ಸ್ಯಾಂಡಲ್‍ವುಡ್ ನಟಿ ಮಾಲಾಶ್ರೀ ಅವರ ಪತಿ ನಿರ್ಮಾಪಕ ರಾಮು (52) ಅವರು ಕೊರೊನಾಗೆ ಬಲಿಯಾಗಿದ್ದಾರೆ.
ಕಳೆದ ಒಂದು ವಾರದ ಹಿಂದೆ ಕೊರೊನಾ ದೃಢಪಟ್ಟಿದ್ದು, ಉಸಿರಾಟದ ತೊಂದರೆಯಿಂದಾಗಿ 3 ದಿನಗಳ ಹಿಂದೆ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.
ಎಕೆ 47, ಲಾಕಪ್ ಡೆತ್, ಕಲಾಸಿಪಾಳ್ಯ, ಸಿಬಿಐ ದುರ್ಗಾ, ಅರ್ಜುನಗೌಡ ಸೇರಿ ಹಲವು ಚಿತ್ರಗಳನ್ನು ನಿರ್ಮಿಸಿದ್ದರು. ಇವರು ಸ್ಯಾಂಡಲ್‍ವುಡ್‍ನಲ್ಲಿ ಕೋಟಿ ರಾಮು ಎಂದೇ ಹೆಸರು ಪಡೆದಿದ್ದರು.
Laxmi News 24×7