Home / ರಾಜಕೀಯ / ನಾಳೆ ರಾತ್ರಿಯಿಂದ ‘ಕರ್ನಾಟಕ 14 ದಿನ ಲಾಕ್ ಡೌನ್’ – ಏನು ಇರುತ್ತದೆ? ಏನು ಇರೋಲ್ಲ? ಇಲ್ಲಿದೆ ಮಾಹಿತಿ

ನಾಳೆ ರಾತ್ರಿಯಿಂದ ‘ಕರ್ನಾಟಕ 14 ದಿನ ಲಾಕ್ ಡೌನ್’ – ಏನು ಇರುತ್ತದೆ? ಏನು ಇರೋಲ್ಲ? ಇಲ್ಲಿದೆ ಮಾಹಿತಿ

Spread the love

ಬೆಂಗಳೂರು: ನಾಳೆ ಸಂಜೆಯಿಂದ 14 ದಿನಗಳ ಕಾಲ ‘ಕರ್ನಾಟಕ ಸಂಪೂರ್ಣ ಲಾಕ್‌ಡೌನ್‌’ ಮಾಡಲಾಗುವುದರ ಬಗ್ಗೆ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ.

ಈ ಬಗ್ಗೆ ಈ ಬಗ್ಗೆ ಇಂದು ಸುದ್ದಿಗಾರರಿಗೆ ಸಿಎಂ ಬಿಎಸ್‌ವೈ ಮಾಹಿತಿ ನೀಡಿದರು. ಇದೇ ವೇಳೆ ಅವರು ಮಾಹಿತಿ ನೀಡಿ. ಬಸ್‌ ಸಂಚಾರ ಇರೋದಿಲ್ಲ ಅಂಥ ಹೇಳಿದ ಅವರು 18 ವರ್ಷ ಮೇಲ್ಪಟ್ಟವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಉಚಿತವಾಗಿ ನೀಡಲಾಗುವುದು ಅಂಥ ಸಿಎಂ ಬಿಎಸ್‌ವೈ ಹೇಳಿದರು. ಕಟ್ಟಡ ಕಾಮಗಾರಿಗಳಿಗೆ, ಗಾರ್ಮೆಂಟ್‌ ವಲಯಗಳನ್ನು ಹೊರತು ಪಡಿಸಿ ಉತ್ಪಾದನ ವಲದಯದ ಕಾರ್ಖಾನೆಗಳ ಕೆಲಸಕ್ಕೆ ಅವಕಾಶ ನೀಡಲಾಗಿದೆ. ಇನ್ನೂ ಅವಶ್ಯಕವಾಗಿರುವ ಸೇವೆಗಳನ್ನು ಹೊರತು ಪಡಿಸಿ ಎಲ್ಲವನ್ನು ಬಂದ್‌ ಮಾಡಲು ಅವಕಾಶ ನೀಡಲಾಗಿದೆ ಬೆಳಗ್ಗೆ 6ರಿಂದ 10ರ ತನಕ ಅವಕಶ್ಯಕ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ ಅಂತ ಅಂತ ಹೇಳಿದರು.

ಈ ನಡುವೆ ಲಾಕ್‌ಡೌನ್‌ಗೆ ಸಂಬಂಧಪಟ್ಟಂತೆ ಎರಡು ವಾರಗಳ ಕಾಲ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ಕ್ರಮಗಳನ್ನು ನೋಡಿಕೊಂಡು ಕ್ರಮಗಳನ್ನು ಕೈಗೊಳ್ಳಲಾಗುವುದು ಎನ್ನಲಾಗಿದೆ. ಒಂದು ವೇಳೆ ಈ ಸಮಯದಲ್ಲಿ ಪರಿಸ್ಥಿತಿ ಸುಧಾರಿಸದೇ ಹೋದ್ರೆ ಮತ್ತೆ ಒಂದು ವಾರ ಲಾಕ್‌ಡೌನ್ ಮಾಡಬಹುದು ಅಂಥ ತಿಳಿಸಿದೆ.

ಏನು ಇರುತ್ತದೆ?
ಮೆಡಿಕಲ್‌ ಶಾಪ್‌,
ಬ್ಯಾಂಕ್‌, ಎಟಿಎಂ ಸೇವೆ
ರಕ್ತನಿಧಿ ಕೇಂದ್ರ
ಆಸ್ಪತ್ರೆ
ಕ್ಲಿನಿಕ್‌ಗಳು
ಬಾರ್‌, ದಿನಸಿ ಅಂಗಡಿ (ನಿಗದಿತ ಸಮಯದಲ್ಲಿ ತೆರೆಯಲು ಅವಕಾಶ, ಬೆಳಗ್ಗೆ ಆರರಿಂದ ಹತ್ತರ ತನಕ ಅವಕಾಶ)

ಏನು ಇರೋಲ್ಲ?
ಬಾರ್‌ಶಾಲಾ-ಕಾಲೇಜು, ಅಂತರ್‌ ಜಿಲ್ಲೆ, ರಾಜ್ಯ ಓಡಾಟ, ಬಸ್‌ ಸಂಚಾರ (ಕೆಎಸ್‌ಆರ್‌ಟಿಸಿ,ಬಿಎಂಟಿಸಿ, ಮೆಟ್ರೋ ಸಂಚಾರ) ಗೂಡ್ಸ್‌, ಖಾಸಗಿ ವಾಹನಗಳ ಓಡಾಡಕ್ಕೆ ಬಂದ್‌ ಆದ್ರೆ ಅಂತರ್‌ ಜಿಲ್ಲೆಗಳ ಗೂಡ್ಸ್‌ ವಾಹನಗಳ ಓಡಾಡಕ್ಕೆ ಮಾತ್ರ ಅವಕಾಶ ನೀಡಲಾಗಿದೆ.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ