Breaking News

ಒಂದೇ ಕುಟುಂಬದ ಮೂವರು ಸದಸ್ಯರು ಕರೊನಾಕ್ಕೆ ಬಲಿ! ಆಘಾತ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಸೊಸೆ!

Spread the love

ಭೋಪಾಲ್​: ಕರೊನಾ ದೇಶದ ಜನರಲ್ಲಿ ಭಯ ಹುಟ್ಟಿಸಿದೆ. ಸೋಂಕು ಹರಡಿ ಕೆಲವೇ ದಿನಗಳಲ್ಲಿ ಜನರು ಪ್ರಾಣ ಬಿಡುತ್ತಿರುವ ಉದಾಹರಣೆಗಳು ಹೆಚ್ಚಾಗುತ್ತಿವೆ. ಇದೇ ರೀತಿ ಒಂದೇ ಕುಟುಂಬದ ಮೂವರು ಸದಸ್ಯರು ಕರೊನಾಕ್ಕೆ ಒಂದು ತಿಂಗಳ ಅವಧಿಯಲ್ಲಿ ಬಲಿಯಾಗಿದ್ದಾರೆ. ಅದನ್ನು ಕಂಡ ಮನೆಯ ಸೊಸೆ ಆಘಾತ ತಾಳಲಾರದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ದೇವಾಸ್​ ನಗರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಬಾಲಕಿಶನ್​ ಅವರ ಪತ್ನಿ ಚಂದ್ರಕಲಾ (75) ಅವರು ಏಪ್ರಿಲ್​ 14ರಂದು ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಅದಾದ ನಂತರ ಅವರ ಮಕ್ಕಳಾದ ಸಂಜಯ್​ (51) ಹಾಗೂ ಸ್ವಪ್ನೇಶ್​ (48) ಇಬ್ಬರೂ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಒಬ್ಬರಾದ ಮೇಲೆ ಒಬ್ಬರು ಸಾಯುತ್ತಿರುವುದನ್ನು ಕಂಡು ಶಾಕ್​ಗೆ ಒಳಗಾದ ಕಿರಿಯ ಸೊಸೆ ರೇಖಾ (45) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದೀಗ ಬಾಲಕಿಶನ್​ ಅವರ ಮನೆ ಸಂಪೂರ್ಣವಾಗಿ ಸ್ಮಶಾನ ಮೌನಕ್ಕೊಳಗಾಗಿದೆ. ಮನೆಯ ಒಡೆಯ ಬಾಲಕಿಶನ್​, ಮೊದಲನೇ ಸೊಸೆ ಮತ್ತು ಮೊಮ್ಮಕ್ಕಳು ಮಾತ್ರ ಕುಟುಂಬದಲ್ಲಿ ಉಳಿದಿದ್ದಾರೆ.

ದೇಶದಲ್ಲಿ ಕರೊನಾ ಸೋಂಕು ಅತಿ ವೇಗದಲ್ಲಿ ಹರಡಲಾರಂಭಿಸಿದೆ. ಆದರೆ ಜನರು ಭಯ ಪಡಬೇಕಾಗಿಲ್ಲ, ಸೂಕ್ತ ಮುನ್ನೆಚ್ಚರಿಕೆ ಮತ್ತು ಚಿಕಿತ್ಸೆ ಪಡೆದು ಸೋಂಕಿನಿಂದ ದೂರಾಗಬಹುದು ಎಂದು ಸರ್ಕಾರ ಹಾಗೂ ವೈದ್ಯಕೀಯ ಇಲಾಖೆ ಸೂಚಿಸುತ್ತಿದೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ