Breaking News

ಪ್ರೀತಿಗಾಗಿ ಅಣ್ಣನ ರುಂಡ ಚೆಂಡಾಡಿದ ತಂಗಿ

Spread the love

ಹುಬ್ಬಳ್ಳಿ:  ಧಾರವಾಡ ಜಿಲ್ಲೆಯ ಪೊಲೀಸರನ್ನೂ ಆತಂಕದಲ್ಲಿ ದೂಡಿದ್ದ ಪ್ರಕರಣದ ಹೊಸ ಸ್ವರೂಪ ಬಯಲಾಗಿದೆ. ರುಂಡ-ಮುಂಡ ಚೆಂಡಾಡಿದ ಪ್ರಕರಣದಲ್ಲಿ ಭೀಕರವಾಗಿ ಹತ್ಯೆಯಾದ ಯುವಕನ ಸಹೋದರಿ ಕಂ ಚಲನಚಿತ್ರ ನಟಿ ಕಂ ಮಾಡೆಲ್ ಕಂ ವಿಲನ್ ಪಾತ್ರ ಇರುವುದು ಸ್ಪಷ್ಟವಾಗಿದ್ದು, ಚಿತ್ರನಟಿ ಕೊನೆಗೂ ಜೈಲು ಪಾಲಾಗಿದ್ದಾಳೆ.

ರಾಕೇಶ ಶೆಟ್ಟಿ ಎಂಬ ಸಹೋದರನನ್ನ ಮೂರು ಸೈಟ್ ವಿಚಾರಕ್ಕೆ ಕೊಲೆ ಮಾಡಿದ್ದು, ಈಗಾಗಲೇ ಸಿಕ್ಕಿರುವ ನಾಲ್ವರ ಜೊತೆ ರಾಕೇಶ ಶೆಟ್ಟಿಯ ಸಹೋದರಿ ಛೋಟಾ ಬಾಂಬೆ ಸಿನೇಮಾದ ಹಿರೋಯಿನ್ ಶನಾಯ ಉರ್ಫ್ ಸೋನಿ ಕಾಟವೆ ಪಾತ್ರ ಬಯಲಾಗಿದೆ. ಅದೇ ಕಾರಣಕ್ಕೆ ಗಗನಸಖಿಯೂ ಆಗಿದ್ದ ಶನಾಯ್ ಜೈಲು ಪಾಲಾಗಿದ್ದಾಳೆ.

ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ದೇವರಗುಡಿಹಾಳದಲ್ಲಿ ಸಿಕ್ಕ ರುಂಡವಿಟ್ಟುಕೊಂಡು ತನಿಖೆ ಆರಂಭಿಸಿದ್ದರು. ಆ ತನಿಖೆಯಲ್ಲಿ ಮಹತ್ವದ ಸಾಕ್ಷ್ಯ ಹುಡುಕಿದ್ದು, ನಾರಾಯಣ ಹಿರೆಹೋಳ್ಳಿ ಎಂಬ ಪೇದೆ ಮತ್ತೂ ಧಾರವಾಡ ಗ್ರಾಮೀಣ ಪಿಎಸ್ಐ ಮಹೇಂದ್ರಕುಮಾರ. ಅವರು ಹುಡುಕಿದ ಸಾಕ್ಷ್ಯದಿಂದ ಇಡೀ ಪ್ರಕರಣ ಬಯಲಾಗಿತ್ತು. ಅಷ್ಟೇ ಅಲ್ಲ, ಕಮೀಷನರೇಟ್ ಪೊಲೀಸರು ತಲೆತಗ್ಗಿಸುವಂತಾಗಿತ್ತು.


(ಪೊಲೀಸ್ ಪೇದೆ ನಾರಾಯಣ ಹಿರೆಹೋಳ್ಳಿ)

ಕಳೆದ ನಾಲ್ಕು ದಿನದಿಂದ ನಿರಂತರವಾಗಿ ನಡೆಯುತ್ತಿದ್ದ ತನಿಖೆಯಲ್ಲಿ ಚಿತ್ರನಟಿಯ ಪಾತ್ರ ಬಯಲಾಗಿದೆ. ನಗರದ ಪ್ರಮುಖ ಸ್ಥಳಗಳಲ್ಲಿ ಇರುವ ಸೈಟ್ ಸಲುವಾಗಿಯೇ ಹತ್ಯೆ ನಡೆದಿದೆ‌. ಇದರಲ್ಲಿ ಶನಾಯ್ ಕಾಟವೆ ಮುಖವಾಡ ಬಯಲಾಗಿದೆ.


Spread the love

About Laxminews 24x7

Check Also

ಸಿಎಂ ಫೋನ್ ಮಾಡಿ ಸಮಾಧಾನಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದ ASP ಭರಮನಿ

Spread the loveಧಾರವಾಡ/ಬೆಂಗಳೂರು: ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿ.ಭರಮನಿ ಅವರು ಸಿಎಂ ಸಮಾಧಾನಪಡಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ