Breaking News

ರಾಜ್ಯದಲ್ಲಿ ‘ಸಾರಿಗೆ ಬಸ್ ಸಂಚಾರ’ ಯಥಾಸ್ಥಿತಿಗೆ : ಇಂದು 1ಗಂಟೆ ವೇಳೆಗೆ ‘10,084 ಸಾರಿಗೆ ಬಸ್ ಸಂಚಾರ’ ಆರಂಭ

Spread the love

ಬೆಂಗಳೂರು : ರಾಜ್ಯದಲ್ಲಿ ಸಾರಿಗೆ ಬಸ್ ಸಂಚಾರ ಕೂಡಲೇ ಆರಂಭಿಸುವಂತೆ ಹೈಕೋರ್ಟ್ ಮುಷ್ಕರ ನಿರತ ಸಾರಿಗೆ ನೌಕರರ ಕೂಟಕ್ಕೆ ನಿನ್ನೆ ನೋಟಿಸ್ ನೀಡಿದ ಪರಿಣಾಮ, ಇಂದು ಮಧ್ಯಾಹ್ನದ ವೇಳೆಗೆ ಸಾರಿಗೆ ಬಸ್ ಸಂಚಾರ ರಾಜ್ಯಾಧ್ಯಂತ ಯಥಾಸ್ಥಿತಿಯತ್ತೆ ದಾಪುಗಾಲಿಟ್ಟಿದೆ. ಮಧ್ಯಾಹ್ನ 1 ಗಂಟೆಯ ವೇಳೆ 10,084 ಸಾರಿಗೆ ಬಸ್ ಗಳು ಸಂಚಾರ ಆರಂಭಿಸಿವೆ.

ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾಹಿತಿ ಬಿಡುಗಡೆ ಮಾಡಿದ್ದು, ಇಂದು ರಾಜ್ಯಾಧ್ಯಂತ 1 ಗಂಟೆಯ ವೇಳೆಗೆ KSRTC 3751 ಬಸ್, BMTC 2318 ಬಸ್, NEKRTC 1748 ಬಸ್, NWKRTC 2267 ಬಸ್ ಸೇರಿದಂತೆ ಒಟ್ಟು 10,084 ಸಾರಿಗೆ ಬಸ್ ಗಳು ಸಂಚಾರ ಆರಂಭಿಸಿರುವುದಾಗಿ ತಿಳಿಸಿದೆ. ಈ ಮೂಲಕ ಸಂಜೆಯ ವೇಳೆಗೆ ಸಾರಿಗೆ ಬಸ್ ಸಂಚಾರ ಯಥಾಸ್ಥಿತಿಗೆ ರಾಜ್ಯದಲ್ಲಿ ಬರೋ ಸೂಚನೆಯನ್ನು ನೀಡಿದೆ.

ಅಂದಹಾಗೇ, ನಿನ್ನೆ ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್ ಎ ಓಕಾ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠವು, ರಾಜ್ಯದಲ್ಲಿ ಸಾರಿಗೆ ಬಸ್ ಸಂಚಾರ ವ್ಯತ್ಯಯದಿಂದಾಗಿ ಜನಸಾಮಾನ್ಯರಿಗೆ ತೊಂದರೆ ಉಂಟಾಗಿದೆ. ಈಗ ಶೇ.44ರಷ್ಟು ಬಸ್ ಸಂಚಾರ ಮಾತ್ರವೇ ಇದೆ. ಕೋವಿಡ್ ನ ಸಂಕಷ್ಟದಿಂದಾಗಿ ಜನರು ತತ್ತರಿಸಿದ್ದಾರೆ. ಲಸಿಕಾ ಕೇಂದ್ರಕ್ಕೆ ಜನರು ಹೋಗೋದಕ್ಕೂ ಕಷ್ಟ ಆಗಿದೆ. ಆಸ್ಪತ್ರೆಗೆ ಹೋಗೋದಕ್ಕೆ ಬಸ್ ಸಂಚಾರ ಇಲ್ಲದೇ ಕಷ್ಟ ಪಡುವಂತಾಗಿದೆ ಎಂದು ಅಭಿಪ್ರಾಯ ಪಟ್ಟಿತ್ತು.

ಇನ್ನೂ ಮುಂದುವರೆದು, ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಮುಷ್ಕರ ನಡೆಸುವುದು ಸರಿಯಲ್ಲ. ಬಸ್ ಇಲ್ಲದೇ ಲಸಿಕಾ ಕೇಂದ್ರಗಳಿಗೆ ಜನರು ಲಸಿಕೆ ಹಾಕಿಸಿಕೊಳ್ಳೋದಕ್ಕೆ ತೆರಳಲು ಕಷ್ಟ ಆಗಿದೆ. ಸಾರಿಗೆ ಸಂಚಾರ ವ್ಯವಸ್ಥೆ ಜನರ ಮೂಲಭೂತ ಹಕ್ಕಾಗಿದೆ. ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿರೋದ್ರಿಂದ ಜನರ ಮೂಲ ಭೂತ ಹಕ್ಕಿಗೆ ಧಕ್ಕೆಯಾಗಲಿದೆ. ಹೀಗಾಗಿ ನಿಮ್ಮ ಬೇಡಿಕೆಯನ್ನು ಕಾಯ್ದಿರಿಸಿ, ಕೂಡಲೇ ಸಾರಿಗೆ ಸಂಚಾರ ಆರಂಭಿಸುವಂತೆ ಮುಷ್ಕರ ನಿರತ ಸಾರಿಗೆ ನೌಕರರ ಕೂಟಕ್ಕೆ ಹೈಕೋರ್ಟ್ ನೋಟಿಸ್ ನಲ್ಲಿ ತಿಳಿಸಿತ್ತು.

ಈ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಂತ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಹೈಕೋರ್ಟ್ ನೀಡಿರುವಂತ ನೋಟಿಸ್ ನಮಗೆ ತಲುಪಿಲ್ಲ. ಆ ಬಗ್ಗೆ ನೋಟಿಸ್ ತಲುಪಿದ ನಂತ್ರ ಏನ್ ತೀರ್ಮಾನ ಕೈಗೊಳ್ಳಬೇಕು ಎನ್ನುವ ಬಗ್ಗೆ ಚರ್ಚಿಸಿ, ನಿರ್ಧಾರ ಕೈಗೊಳ್ಳಲಿದ್ದೇವೆ. ಇಂದು ಕೂಡ ನೌಕರರ ಮುಷ್ಕರ ಮುಂದುವರೆಯಲಿದೆ ಎಂಬುದಾಗಿ ತಿಳಿಸಿದ್ದರು. ಈ ಎಲ್ಲಾ ಬೆಳವಣಿಗೆಯ ನಡುವೆ, ಇಂದು 1 ಗಂಟೆಯ ವೇಳೆಗೆ ರಾಜ್ಯಾಧ್ಯಂತ 10,084 ಸಾರಿಗೆ ಬಸ್ ಸಂಚಾರ್ ಆರಂಭಗೊಂಡು, ಯಥಾಸ್ಥಿತಿಯತ್ತ ಸಾರಿಗೆ ಬಸ್ ಸಂಚಾರ ಸಾಗುತ್ತಿದೆ.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ