ಬೆಂಗಳೂರು: ಯಾರು ಕೊರೊನಾ ಇಲ್ಲ ಅಂತ ಬೇಜಬ್ದಾರಿತನ ತೋರಿಸುತ್ತಾರೋ ಅವರ ಕಪಾಳಕ್ಕೆ ಹೊಡೆಯಿರಿ ಅಂತ ನಟಿ ಸುನೇತ್ರಾ ಪಂಡಿತ್ ಹೇಳಿದ್ದಾರೆ.
ಸುಮ್ಮನಳ್ಳಿ ಚಿತಾಗಾರ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಕ್ಕ ಕೋವಿಡ್ ನಿಂದ ಸತ್ತೋದ್ಳು. ಒಂದು ದಿನ ಕೇರ್‍ಲೆಸ್ ಹಾಗೂ ಮಿಸ್ ಗೈಡ್ ಆಗಿದ್ದಕ್ಕೆ ಅಂತ ಹೇಳೋಕೆ ನಾನು ಬಯಸಲ್ಲ. ಆದರೆ ಅದೂ ಒಂದು ಕಾರಣ ಎಂದು ಹೇಳಿದರು.

ನಮ್ಮ ಅಕ್ಕ ಹೊರಟೋದ್ಳು. ಅವಳಿಗೆ ಮಕ್ಕಳಿದ್ದಾರೆ, ಆ ಮಕ್ಕಳು ಏನ್ ಮಾಡ್ಬೇಕು. ಈ ರೀತಿಯ ಪರಿಸ್ಥಿತಿ ಯಾರಿಗೂ ಬರಬಾರದು. ಕೊರೊನಾ ಇಲ್ಲ ಅಂತ ಹೇಳೋರಿಗೆ ಕಪಾಳಕ್ಕೆ ಹೊಡೆಯಿರಿ. ಯಾರು ಯಾರಿಗೆ ಕೊರೊನಾ ಅನುಭವ ಆಗಿದೆಯೋ ಅವರಿಗೆ ಗೊತ್ತು ಅದರ ಕಷ್ಟ. ಬೇಜವಾಬ್ದಾರಿತನವೇ ಬಹುಮುಖ್ಯ ಸಮಸ್ಯೆ ಅಂತ ಗರಂ ಆದರು.
ಡಯಾಬಿಟಿಸ್ ಯಾರಿಗೆ ಇಲ್ಲ ಹೇಳಿ, ಪ್ರತಿಯೊಬ್ಬರಿಗೂ ಇದೆ. ಅದು ಎಲ್ಲರಿಗೂ ಗೊತ್ತಿರುವ ಸತ್ಯ. ದಯವಿಟ್ಟು ಬಿಬಿಎಂಪಿ ಒಂದು ಬೆಡ್ ಅಲರ್ಟ್ ಮಾಡುವಾಗ ಐಸಿಯು ಇರೋ ಆಸ್ಪತ್ರೆಗೆ ಅಲರ್ಟ್ ಮಾಡಿ ಎಂದು ಕಣ್ಣೀರಾಕುತ್ತಾ ಮನವಿ ಮಾಡಿಕೊಂಡರು.

ಈವಾಗ ನನ್ನ ಅಕ್ಕ ಮೃತಪಟ್ಟಳು ಅಂತ ಹೇಳ್ತಿಲ್ಲ. ಒಬ್ಬ ಸಾಮಾನ್ಯ ನಾಗರಿಕಳಾಗಿ ಕೇಳಿಕೊಳ್ಳುತ್ತಿದ್ದೇನೆ. ನಾಯಕರು ಹಾಗೂ ಸರ್ಕಾರ ಎಲ್ಲರಿಗೂ ಒತ್ತಡ ಇದೆ ಎಂದು ಗೊತ್ತು. ಕೆಲಸ ಇಲ್ಲದೆ ಒದ್ದಾಡುತ್ತಿರುವ ಪ್ರತಿಯೊಬ್ಬ ಮನುಷ್ಯನಿಗೂ ಪ್ರೆಶರ್ ಇದೆ. ಮೀಡಿಯಾದವರಿಗೂ ಪ್ರೆಶರ್ ಇದೆ. ಎಷ್ಟು ಕಷ್ಟಪಟ್ಟು ಅವರು ಇದನ್ನೆಲ್ಲ ಕವರ್ ಮಾಡ್ಬೇಕು. ಕಷ್ಟಪಟ್ಟು ನ್ಯೂಸ್ ಮಾಡಬೇಕು. ಎಲ್ಲಾ ಗೊತ್ತು. ಆದರೂ ನಮ್ಮ ಜೀವನ ನಮ್ಮ ಕೈಯಲ್ಲಿದೆ ಎಂದು ತಿಳಿಸಿದರು.
Laxmi News 24×7