Breaking News

ಮುಷ್ಕರದ ಮಧ್ಯೆಯೂ ಬಸ್ ಚಲಾಯಿಸಿದ ಡ್ರೈವರ್​ಗೆ ತಾಳಿ ಹಾಕಲು ಮುಂದಾದ ಮಹಿಳೆ

Spread the love

ಬೆಳಗಾವಿ: ಸಾರಿಗೆ ನೌಕರರ ಮುಷ್ಕರ ಇಂದು ವಿಭಿನ್ನ ಸ್ವರೂಪ ಪಡೆದುಕೊಂಡಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆಯ ತೀವ್ರತೆ ಹೆಚ್ಚಾಗಿದೆ. ಅದರಂತೆ ಬೆಳಗಾವಿ ಬಸ್​ ನಿಲ್ದಾಣದ ಘಟಕದ ಬಸ್​ ಡ್ರೈವರ್​ ಒಬ್ಬರಿಗೆ ಮಹಿಳೆಯರು ತೀವ್ರ ತರಾಟೆ ತೆಗೆದುಕೊಂಡ ಪ್ರಸಂಗ ನಡೆಯಿತು.

6 ನೇ ವೇತನ ಆಯೋಗಕ್ಕೆ ಆಗ್ರಹಿಸಿ ಸಾರಿಗೆ ನೌಕರರ ಕುಟುಂಬಸ್ಥರು ಭಿಕ್ಷೆ ಬೇಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವೇಳೆ ಕೆಎಸ್​​ಆರ್​ಟಿಸಿ ಬಸ್ ಬರುವುದನ್ನ ನೋಡಿದ ಮಹಿಳೆಯರು ಬಸ್​ ತಡೆದು ನಿಲ್ಲಿಸಿದ್ದಾರೆ.

ಬಸ್ ಅಡ್ಡ ಹಾಕಿದ ಮಹಿಳೆಯರು, ಚಾಲಕನಿಗೆ ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಮಹಿಳೆಯೋರ್ವರು ತಾಳಿ ಹಾಕಲು ಮುಂದಾದ ಪ್ರಸಂಗವೂ ನಡೆಯಿತು. ಹೀಗಾಗಿ ಬೆಳಗಾವಿ ಬಸ್ ನಿಲ್ದಾಣದಲ್ಲಿ ಗೊಂದಲ ವಾತಾವರಣ ನಿರ್ಮಾಣ ಉಂಟಾಯಿತು.


Spread the love

About Laxminews 24x7

Check Also

ಕ್ರಾಂತಿ ಮಹಿಳಾ ಮಂಡಳ, ಉಮಾ ಸಂಗೀತ ಪ್ರತಿಷ್ಠಾನದಿಂದ ಸ್ವಾತಂತ್ರ್ಯ ದಿನಾಚರಣೆ ಮಕ್ಕಳಿಗೆ ದೇಶಾಭಿಮಾನ ಬೆಳೆಸಿ: ಸಂತೋಷ್ ಮಠಪತಿ

Spread the love ಬೆಳಗಾವಿ: ಪ್ರಾಥಮಿಕ ಹಂತದಲ್ಲೆ ಮಕ್ಕಳಿಗೆ ದೇಶಾಭಿಮಾನ ಬೆಳೆಸಿ, ದೇಶದ ಉತ್ತಮ ನಾಗರಿಕನನ್ನಾಗಿ ಮಾಡುವ ಜವಾಬ್ದಾರಿ ಪೋಷಕರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ