Breaking News

50 ಲಕ್ಷ ವಂಚನೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂಜನಾ ಗಲ್ರಾನಿ ಸಹೋದರಿ

Spread the love

ನಟಿ ಸಂಜನಾ ಗಲ್ರಾನಿ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ವಾಸ ಅನುಭವಿಸಿ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿರುವಾಗಲೇ, ಸಂಜನಾ ಸಹೋದರಿ ನಿಕ್ಕಿ ಗಲ್ರಾನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

‘ನನಗೆ ಐವತ್ತು ಲಕ್ಷ ರೂಪಾಯಿ ಹಣ ವಂಚನೆ ಮಾಡಲಾಗಿದೆ’ ಎಂದು ಸಂಜನಾ ಸಹೋದರಿ, ನಟಿ ನಿಕ್ಕಿ ಗಲ್ರಾನಿ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಿಕ್ಕಿ ಅವರು ನೀಡಿರುವ ದೂರಿನ ಪ್ರಕಾರ ರೆಸ್ಟೊರೆಂಟ್ ನಿರ್ಮಾಣಕ್ಕೆ ಪಾಲುದಾರಿಕೆಯಲ್ಲಿ 50 ಲಕ್ಷ ರುಪಾಯಿ ಹೂಡಿಕೆ ಮಾಡಿದ್ದರು ಆದರೆ ಆಕೆಯ ಪಾಲುದಾರ ನಿಕ್ಕಿಗೆ ಈವರೆಗೆ ಯಾವುದೇ ಲಾಭವನ್ನಾಗಲಿ ಅಥವಾ ಹೂಡಿಕೆ ಹಣವನ್ನಾಗಲಿ, ಹೂಡಿಕೆ ಮೇಲೆ ಬಡ್ಡಿಯನ್ನಾಗಲಿ ಕೊಟ್ಟಿಲ್ಲವಂತೆ.

2016ರಲ್ಲಿ ಕೋರಮಂಗಲದ ಸ್ಮಾಲಿಸ್ ರೆಸ್ಟೊ ಕೆಫೆ ನಿರ್ಮಾಣಕ್ಕೆ ನಿಖಿಲ್ ಹೆಗಡೆ ಎಂಬಾತನ ಒತ್ತಾಯದ ಮೇಲೆ ನಿಕ್ಕಿ ಗಲ್ರಾನಿ ಅವರು 50 ಲಕ್ಷ ಹೂಡಿಕೆ ಮಾಡಿದ್ದರು. ಐವತ್ತು ಲಕ್ಷಕ್ಕೆ ಬದಲಾಗಿ ನಿಕ್ಕಿಗೆ ಪ್ರತಿ ತಿಂಗಳು ಒಂದು ಲಕ್ಷ ಹಣವನ್ನು ನೀಡುವುದಾಗಿ ಹೇಳಿದ್ದರಂತೆ ನಿಖಿಲ್ ಹೆಗಡೆ. ಆದರೆ ಈವರೆಗೆ ಯಾವುದೇ ಹಣವನ್ನು ನಿಖಿಲ್ ನೀಡಿಲ್ಲ ಎಂದು ಆರೋಪಿಸಿದ್ದಾರೆ ನಿಕ್ಕಿ ಗಲ್ರಾನಿ.

ಹಣ ನೀಡುವಾಗ ಹಾಗೂ ಅದಕ್ಕೆ ಪ್ರತಿಯಾಗಿ ಹೋಟೆಲ್‌ನಲ್ಲಿ ಪಾಲುದಾರಿಕೆ ಹಾಗೂ ಲಾಭ ಹಂಚಿಕೆ ಬಗ್ಗೆ ಎಂಒಎಂ ಅನ್ನು ಆಗ ಮಾಡಿಕೊಂಡಿದ್ದೆವು ಆದರೆ ನಿಖಿಲ್ ನನಗೆ ಈವರೆಗೆ ಲಾಭದ ಹಣವನ್ನು ನೀಡಿಲ್ಲ. ಕೆಲವು ತಿಂಗಳುಗಳಿಂದ ನನ್ನ ಕರೆಯನ್ನು ಸಹ ಸ್ವೀಕರಿಸುತ್ತಿಲ್ಲ ಹಾಗಾಗಿ ದೂರು ದಾಖಲು ಮಾಡಿದ್ದೇನೆ ಎಂದಿದ್ದಾರೆ ನಿಕ್ಕಿ ಗಲ್ರಾನಿ.

ಇನ್ನು ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಅಮೃತಹಳ್ಳಿ ಠಾಣೆ ಪೊಲೀಸರು ಆರೋಪಿಗೆ ನೊಟೀಸ್ ಕಳಿಸಿ ವಿಚಾರಣೆಗೆ ಬರಲು ಸೂಚಿಸಿದ್ದಾರೆ.

2014 ರಲ್ಲಿ ಚಿತ್ರರಂಗ ಪ್ರವೇಶಿಸಿದ ನಿಕ್ಕಿ ಗಲ್ರಾನಿ ಕನ್ನಡ, ತೆಲುಗು, ತಮಿಳು, ಮಲಯಾಳಂನ 30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ನಿಕ್ಕಿ ನಟನೆಯ ಮೂರು ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ.


Spread the love

About Laxminews 24x7

Check Also

ನ. 22ಕ್ಕೆ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾ ಮರು ಬಿಡುಗಡೆ

Spread the love ಹುಬ್ಬಳ್ಳಿ: ‘ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಸಿದ್ಧಪಡಿಸಲಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಲನಚಿತ್ರ ನವೆಂಬರ್‌ 22ರಂದು ರಾಜ್ಯದಾದ್ಯಂತ ಮರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ