Breaking News

ಸಾಮಾಜಿಕ ಜಾಲತಾಣಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಕನಸುಗಾರ

Spread the love

ಅದ್ಧೂರಿತನಕ್ಕೆ ಮತ್ತೊಂದು ಹೆಸರು ನಟ ವಿ.ರವಿಚಂದ್ರನ್. ಕನ್ನಡ ಸಿನಿಮಾಕ್ಕೆ ಅದ್ಧೂರಿತನ ಪರಿಚಯಿಸಿದ್ದೆ ಅವರು. ರವಿಚಂದ್ರನ್ ಏನೇ ಮಾಡಿದರು ಭಿನ್ನವಾಗಿ ಮಾಡಲು ಪ್ರಯತ್ನಿಸುತ್ತಾರೆ.

ಕನ್ನಡದ ಹಲವಾರು ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ, ತಮ್ಮ ಅಭಿಪ್ರಾಯಗಳನ್ನು ಫೇಸ್‌ಬುಕ್, ಟ್ವಿಟ್ಟರ್‌ ಮೂಲಕ ಹಂಚಿಕೊಳ್ಳುತ್ತಾರೆ, ಅಭಿಮಾನಿಗಳೊಂದಿಗೆ ಸಂವಾದ ಮಾಡುತ್ತಾರೆ. ಆದರೆ ರವಿಚಂದ್ರನ್ ಅವರು ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದರು. ಈಗ ಅವರೂ ಸಹ ಸಾಮಾಜಿಕ ಜಾಲತಾಣದ ಸೇರಿಕೊಂಡಿದ್ದಾರೆ.

ಅದೂ ಬಹಳ ಭಿನ್ನವಾಗಿ ತಮ್ಮ ಸಿನಿಮಾದ ಹಾಡುಗಳಂತೆಯೇ ಅದ್ಧೂರಿಯಾಗಿ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿದ್ದಾರೆ ರವಿಚಂದ್ರನ್. ‘1 n 1nly ravichandran’ ಹೆಸರಿನ ಯೂಟ್ಯೂಬ್ ಚಾನೆಲ್ ಆರಂಭಿಸಿರುವ ರವಿಚಂದ್ರನ್ ಯುಗಾದಿ ಹಬ್ಬವಾದ ಇಂದು ಚಾನೆಲ್‌ ಅನ್ನು ಬಿಡುಗಡೆ ಮಾಡಿದ್ದಾರೆ.

ತಮ್ಮ ಚಾನೆಲ್‌ನಲ್ಲಿ ತಾವೇ ರಚಿಸಿರುವ ಹಾಡು ಬಿಡುಗಡೆ ಮಾಡಿದ್ದಾರೆ ಜೊತೆಗೆ ಕೆಲವು ಸಂದೇಶಗಳನ್ನು ಸಹ ನೀಡಿದ್ದಾರೆ. ತಂದೆ ವೀರಸ್ವಾಮಿ ಅವರಿಗೆ ಗೌರವ ಸಲ್ಲಿಸಿರುವ ರವಿಚಂದ್ರನ್, ಮೊದಲ ದಿನವೇ ಕೆಲವಾರು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ ಯೂಟ್ಯೂಬ್‌ ಚಾನೆಲ್‌ನಲ್ಲಿ.

ಯೂಟ್ಯೂಬ್‌ ಮಾತ್ರವೇ ಅಲ್ಲದೆ ಇನ್‌ಸ್ಟಾಗ್ರಾಂನಲ್ಲೂ ಖಾತೆ ತೆರೆದಿದ್ದಾರೆ ನಟ ವಿ.ರವಿಚಂದ್ರನ್. ಮೊದಲ ದಿನವೇ ನೂರಾರು ಮಂದಿ ಫಾಲೋ ಮಾಡಲು ಆರಂಭಿಸಿದ್ದಾರೆ.


Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ